ಸರ್ಕಾರಕ್ಕೆ ಲಕ್ಷಾಂತರ ರೂ. ಉಳಿತಾಯ
Team Udayavani, Jun 17, 2021, 5:30 PM IST
ವಿಜಯಪುರ: ರಾಜ್ಯದಲ್ಲಿ ಟ್ಯಾಂಕರ್ ಜಿಲ್ಲೆ ಎಂದೇ ಗುರುತಿಸಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಟ್ಯಾಂಕರ್ ಬಳಸದೇ ನೀರಿನ ನಿರ್ವಹಣೆ ಮಾಡಲಾಗಿದೆ. ಯಾವುದೇ ಖಾಸಗಿ ಬೋರ್ ವೆಲ್ ಬಾಡಿಗೆ ಪಡೆಯದೇ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಯಶಸ್ಸು ಸಾ ಧಿಸಿದ್ದೇವೆ.
ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ಉಳಿತಾಯವಾಗಿದೆ ಎಂದು ಜಿಪಂ ಸಿಇಒ ಗೋವಿಂದ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಅಂರ್ತಜಲ ಮಟ್ಟ ಏರಿಕೆಯಾಗಿದೆ. ಪ್ರಾದೇಶಿಕ ಆಯುಕ್ತರ ಅನುಮತಿ ಮೇರೆಗೆ ಕುಡಿಯುವ ನೀರಿನ ಕೆರೆಗಳಿಗೆ ಕಾಲ ಕಾಲಕ್ಕೆ ನೀರು ತುಂಬಿಸಿಕೊಂಡಿದ್ದು. ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರು ನಿರ್ವಹಣೆ ಮಾಡುವಲ್ಲಿ ಸಹಕಾರಿ ಆಗಿದ್ದು, ಎಲ್ಲಿಯೂ ಟ್ಯಾಂಕರ್ ಗೆ ಬೇಡಿಕೆ ಬರಲೇ ಇಲ್ಲ.
ಜನಪ್ರತಿನಿ ಧಿಗಳು, ಮೇಲಧಿ ಕಾರಿಗಳ ಸಹಕಾರ, ಮಾರ್ಗದರ್ಶನ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು, ಕೆಳ ಹಂತ ಸಿಬ್ಬಂದಿ ಸಕಾಲದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ, ಸೇವಾ ಬದ್ಧತೆ ತೋರಿದ್ದೇ ಈ ಸಾಧನೆ ಸಾಧ್ಯವಾಗಿಸಿದೆ ಎಂದು ವಿವರಿಸಿದ್ದಾರೆ. ಈ ಹಿಂದಿನ ಬಹುತೇಕ ಎಲ್ಲ ವರ್ಷಗಳಲ್ಲೂ ಬೇಸಿಗೆ ಅವ ಧಿಯಲ್ಲಿ ಫೆಬ್ರುವರಿ ತಿಂಗಳಿಂದಲೇ ಟ್ಯಾಂಕರ್ ನೀರಿಗೆ ಬೇಡಿಕೆ ಬರುತ್ತಿತ್ತು. ಟ್ಯಾಂಕರ್ ನೀರು ಸರಬರಾಜು ಆಗುತ್ತಿದ್ದ ಗ್ರಾಮಗಳನ್ನು ಪಟ್ಟಿ ಮಾಡಿ, ವಿಶೇಷ ಕಾಳಜಿ ಮೂಲಕ ಸಮಸ್ಯೆಗೆ ಮೂಲ ಕಾರಣ ಪತ್ತೆ ಹಚ್ಚಲಾಯಿತು. ಅಲ್ಲದೇ ಪರಿಹಾರ ಅನುಷ್ಠಾನಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಂಡ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬರಲಿಲ್ಲ ಎಂದು ವಿವರಿಸಿದ್ದಾರೆ.
ಕುಡಿಯುವ ನೀರಿನ ಎಲ್ಲ ಕೆರೆಗಳಿಗೆ ಸಕಾಲದಲ್ಲಿ ನೀರು ತುಂಬಿಸಿಕೊಂಡು, ವಿಶೇಷ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ, ಕಾರ್ಯಪಡೆ, ತುರ್ತು ಕಾಮಗಾರಿ, ವಿಪತ್ತು ಪರಿಹಾರ ನಿಧಿ ಹೀಗೆ ವಿವಿಧ ಯೋಜನೆಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅಗತ್ಯ ಇರುವೆಡೆ ಕೊಳವೆ ಬಾವಿ ಕೊರೆಸಿ, ಪೈಪ್ ಲೈನ್ ಅಳವಡಿಸಿ ಹೊಸದಾಗಿ ಜಲಮೂಲ ಕಂಡು ಕೊಳ್ಳುವಿಕೆ, ಫÉಶಿಂಗ್ ಹೀಗೆ ವಿವಿಧ ಅನುಷ್ಠಾನ ಕ್ರಮಗಳು ಫಲ ನೀಡಿದ್ದರಿಂದ ಈ ಬಾರಿ ಎಲ್ಲೂ ಟ್ಯಾಂಕರ್ ನೀರಿಗೆ ಬೇಡಿಕೆ ಬರಲೇ ಇಲ್ಲ ಎಂದು ವಿಶ್ಲೇಷಿಸಿದ್ದಾರೆ. ಜಿಲ್ಲೆಯಲ್ಲಿ 1035 ಜನ ವಸತಿಗಳಿದ್ದು 41 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ 39 ಮುಗಿಸಲಾಗಿದೆ.
17 ಯೋಜನೆಗಳಿಗೆ ಕೆರೆಗಳಿಂದ 296 ಜನ ವಸತಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. 22 ಯೋಜನೆಗಳು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರ ಬಸವಸಾಗರದ ಹಿನ್ನೀರಿನಿಂದ, ಭೀಮಾ ನದಿಯಿಂದ ನೀರು ಪಡೆದು ಶುದ್ಧೀಕರಿಸಿ 319 ಜನ ವಸತಿಗೆ ನೀರು ಪೂರೈಸಲಾಗಿದೆ. ಜಿಲ್ಲೆಯಲ್ಲಿ 1496 ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಗ್ರಾಪಂ ಯಶಸ್ವಿಯಾಗಿ ನಿರ್ವಸಿವೆ. ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಮನ್ವಯದಿಂದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೂ ಟ್ಯಾಂಕರ್ ನೀರಿಗೆ ಬದಲಾಗಿ ಗ್ರಾಮ ಮಟ್ಟದಲ್ಲೇ ಪರಿಹರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.