ಮಹಾಪುರುಷರು ಒಂದೇ ಸಮಾಜಕ್ಕೆ ಸೀಮಿತರಲ್ಲ: ಶಾಸಕ ನಾಡಗೌಡ
Team Udayavani, Jan 16, 2018, 1:18 PM IST
ಮುದ್ದೇಬಿಹಾಳ: ಮಹಾನ್ ವ್ಯಕ್ತಿಗಳನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸುವ ಕೆಲಸ ಆಗಬಾರದು. ಮಹಾತ್ಮರು ಯಾವ ಸಮಾಜದಲ್ಲಿ ಹುಟ್ಟುತ್ತಾರೆ ಅನ್ನೋದು ಮುಖ್ಯವಲ್ಲ. ಹುಟ್ಟಿದ ವ್ಯಕ್ತಿ ಸಂತನಾಗಿ ಸರ್ವಸ್ವವನ್ನು ತ್ಯಾಗಮಾಡಿ ಮಾನವ ಕಲ್ಯಾಣಕ್ಕಾಗಿ ಶ್ರಮಿಸುವವರು ನಮ್ಮ ಪಾಲಿಗೆ ದೇವರೆಂದೆನಿಸಿಕೊಳ್ಳುತ್ತಾರೆ ಎನ್ನುವುದನ್ನು ನಾವೆಲ್ಲ ಅರಿಯಬೇಕು ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಸಿ.ಎಸ್. ನಾಡಗೌಡ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೋಗು ಹಾಕಿಕೊಂಡು ಬರುವುದು ಬಹಳ ದಿನ ನಡೆಯುವಂಥದ್ದಲ್ಲ. ನಮ್ಮ ಮಕ್ಕಳು ಕೆಟ್ಟರೆ ಇಡಿ ಸಮಾಜ ಕೆಟ್ಟಂತೆ. ನಾವು ತಪ್ಪು ಹೆಜ್ಜೆ ಇಟ್ಟರೆ ಅದರ ನಷ್ಟ ನಮ್ಮ ವಂಶಕ್ಕೆ ಅನ್ನೋದನ್ನ ಎಲ್ಲರೂ ಗಮನಿಸಬೇಕು. ಒಂದು ತಪ್ಪು ನಡೆ ಇಡೀ ವಂಶವನ್ನೇ ನಾಶ ಮಾಡುತ್ತೆ. ಬಸವಣ್ಣನ ಹೊಲಸು ತಿಂಬುವನೇ ಹೊಲೆಯ ಅನ್ನೋ ಮಾತು ಸತ್ಯ. ಹೊಲಸು ತಿನ್ನೋರು ಅಂದರೆ ತಪ್ಪು ಕೆಲಸ ಮಾಡೋರೇ ಹೊರತು ಆಹಾರದ ವಿಷಯದಲ್ಲಿ ಅಲ್ಲ. ವ್ಯಸನ ಬಿಡಬೇಕು. ಮಕ್ಕಳಿಗೆ ಒಳ್ಳೆ ವಿದ್ಯೆ ಕೊಡಬೇಕು. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಿದ್ದರಾಮೇಶ್ವರರ ಕುರಿತು ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಐ.ಬಿ. ಹಿರೇಮಠ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ಬಿ.ಎಚ್. ಮಾಗಿ, ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ಜಿ.ಎಸ್. ಪಾಟೀಲ, ಗುರಣ್ಣ ತಾರನಾಳ, ಅಬ್ದುಲ್‌ಗಫೂರ ಮಕಾನದಾರ, ಹನುಮಂತ ವಡ್ಡರ, ಸಿದ್ರಾಮಪ್ಪ ಹಡಲಗೇರಿ, ಪರಶುರಾಮ ನಾಲತವಾಡ ಮತ್ತಿತರರು ವೇದಿಕೆಯಲ್ಲಿದ್ದರು. ಡಾ| ಎಸ್.ಸಿ. ಚೌಧರಿ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನೇತಾಜಿ ನಗರದಿಂದ ಮಿನಿ ವಿಧಾನಸೌಧವರೆಗೆ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಪುರಸಭೆ ಸದಸ್ಯ ಹನುಮಂತ ವಡ್ಡರ ಕೇಸರಿ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಪರಶುರಾಮ ನಾಲತವಾಡ, ರವಿ ನಾಲತವಾಡ, ಶೆಟ್ಟೆಪ್ಪ ಭೋವಿ, ರಾಮಣ್ಣ ಹಡಲಗೇರಿ, ಶೇಖರ ಢವಳಗಿ, ಸಂತೋಷ ವಡ್ಡರ, ನಾಗೇಶ ಅಮರಾವತಿ, ಹನುಮಂತ ಬೆಳಗಲ್ಲ, ಎಸ್.ಕೆ. ಘಾಟಿ, ನಾಗಪ್ಪ ಮದರಿ, ಕುಮಾರ ಢವಳಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.