ಗುಪ್ತ ಶಿವಭಕ್ತ ಶಿವಶರಣ ಮಾದಾರ ಚನ್ನಯ್ಯ
Team Udayavani, Mar 3, 2018, 3:06 PM IST
ಸಿಂದಗಿ: ಕುಲತಿಲಕ ಮಹಾ ಶಿವಶರಣ ಮಾದಾರ ಚನ್ನಯ್ಯನವರು 12ನೇ ಶತಮಾನದ ಶ್ರೇಷ್ಠ ಗುಪ್ತ ಶಿವಭಕ್ತನಾಗಿದ್ದ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಸ್ಥಳೀಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಿ.ಎನ್. ಪಾಟೀಲ ಇಬ್ರಾಹಿಂಪುರ ಹೇಳಿದರು.
ಪಟ್ಟಣದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಮಾದಾರ ಚನ್ನಯ್ಯ ಜಯಂತಿ ಹಾಗೂ
ಮಾದಿಗರ ಜನಜಾಗೃತಿ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿ ದೇವರು, ದೇಸವಸ್ಥಾನಗಳು ಶ್ರೀಮಂತರ ಸೊತ್ತಾಗಿದ್ದವು. ದೀನ-ದಲಿತರಿಗೆ ಪ್ರವೇಶ ನೀರಾಕರಿಸಲಾಗಿತ್ತು. ಇದರಿಂದ ಬೆಸತ್ತ ಶಿವಶರಣ ಮಾದರ ಚೆನ್ನಯ್ಯನವರು ವಚನಗಳ ಮೂಲಕ ಅಸಮಾನತೆ ಬಗ್ಗೆ ಹೇಳಿ ಸಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ್ದರು ಎಂಬುವುದು ಲಭ್ಯವಾದ ಅವರ 10 ವಚನಗಳಿಂದ ತಿಳಿದು ಬರುತ್ತದೆ ಎಂದರು. ಯಾರು ಯಾವಾಗಲೂ ಎಲ್ಲ ಕಾಲಕ್ಕೂ ಕೆಟ್ಟದ್ದನ್ನೆ ಮಾಡುತ್ತಿದ್ದರೇ ಅವನು ಶ್ರೇಷ್ಠ ಕುಲದಲ್ಲಿ ಹುಟ್ಟಿದರೂ ಕನಿಷ್ಠನೆ, ಯಾರು ಯಾವಾಗಲೂ ಎಲ್ಲ ಕಾಲಕ್ಕೂ ಒಳ್ಳೆಯದನ್ನು ಮಾಡುತ್ತಿದ್ದರೇ ಕನಿಷ್ಠ ಕುಲದಲ್ಲಿ ಹುಟ್ಟಿದರೂ ಆತನೂ ಶ್ರೇಷ್ಠ. ಹುಟ್ಟಿನಿಂದ ಯಾರು ಶ್ರೇಷ್ಠರಲ್ಲ. ಸಪ್ತಋಷಿಗಳಲ್ಲಿ ಯಾರೂ ಸವರ್ಣಿಯರಿಲ್ಲ. ಸಾಕ್ಷಾತ ಶಿವನೇ ಅವರ ಗುಪ್ತ ಬಕ್ತಿ ಬಯಲು ಮಾಡಲು ಅವನ ಗುಡಿಸಲಿಗೆ ಬಂದು ಅಂಬಲಿಯನ್ನು ಕುಡಿದ. ಅಂತಹ ಮಾದಾರ ಚನ್ನಯ್ಯನವರು ಮಾದರ ಕುಲದಲ್ಲಿ ಹುಟ್ಟಿದರೂ ವೇದವನ್ನು ಓದುವವರು ಅವರನ್ನು ಪೂಜಿಸುವ ಮಟ್ಟಕ್ಕೆ ಬೆಳೆದರು ಎಂದರು.
ಸಮಾವೇಶ ಉದ್ಘಾಟಿಸಿ ಶಾಸಕ ರಮೇಶ ಭೂಸನೂರ ಮಾತನಾಡಿ, ಮಾದಿಗ ಸಮಾಜದ ಜನತೆ ಶ್ರಮ ಜೀವಿಗಳು ಹಾಗೂ ಪ್ರಾಮಾಣಿಕರು. ಎಲ್ಲ ಸಮಾಜದವರೊಂದಿಗೆ ಹೊಂದಿಕೊಂಡು ಹೋಗುವ ಜನತೆಯಾಗಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಮಹಾ ಶಿವಶರಣ ಮಾದಾರ ಚನ್ನಯ್ಯನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನ ಸುಖಕರವಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಎಂ.ಎಸ್. ಹಯ್ನಾಳಕರ ಮಾತನಾಡಿದರು.
ಆದಿಜಾಂಬವ ಷಡಕ್ಷರಿ ಸ್ವಾಮೀಜಿ, ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಆಲಮೇಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎನ್. ಪಾಟೀಲ, ಶರಣು ಬ್ಯಾಳಿ, ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಜಿಪಂ ಸದಸ್ಯ ಬಿ.ಆರ್. ಯಂಟಮನ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಹನುಮಂತಸುಣಗಾರ, ಗೊಲ್ಲಾಳ ಬಂಕಲಗಿ, ಇಕ್ಬಾಲ್ ತಲಕಾರಿ, ಶಂಕರ ಬಗಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.