ಗ್ರಂಥಾಲಯಕ್ಕೆ ಬೇಕಿದೆ ಹೊಸ ಕಟ್ಟಡ


Team Udayavani, Dec 21, 2019, 12:42 PM IST

vp-tdy-1

ತಾಳಿಕೋಟೆ: ಪುಸ್ತಕದಲ್ಲಿಯ ಜ್ಞಾನ ಮಸ್ತಕದಲ್ಲಿ ಮೂಡಿಸುವ ಜ್ಞಾನ ಭಂಡಾರವಾಗಿರುವ ಪಟ್ಟಣದಲ್ಲಿಯ ಸಾರ್ವಜನಿಕ ಗ್ರಂಥಾಲಯದ ಇಕ್ಕಟ್ಟಿನ ಸ್ಥಿತಿ ಓದುಗರಿಗೆ ಬಯಲಿಗೆ ತಳ್ಳುತ್ತಿದೆ.

ಈಗಿನ ಸಾರ್ವಜನಿಕ ಗ್ರಂಥಾಲಯ ಕಟ್ಟಡವು ಸುಸಜ್ಜಿತವಾಗಿ ಅಚ್ಚುಕಟ್ಟಾಗಿದ್ದರೂ ಇಕ್ಕಟ್ಟಿನ ಕಟ್ಟಡ ಓದುಗರಿಗೆ ಬೇಸರ ಮಾಡುತ್ತಿದೆ. 50 ಸಾವಿರಕ್ಕೂ ಅಧಿ ಕ ಜನಸಂಖ್ಯೆ ಹೊಂದಿರುವ ತಾಳಿಕೋಟೆ ಪಟ್ಟಣದಲ್ಲಿಯ ಸಾರ್ವಜನಿಕ ಗ್ರಂಥಾಲಯದಲ್ಲಿ 30 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಆದರೆ ಓದುಗರಿಗೆ ಅವಶ್ಯಕ ಪುಸ್ತಕ ಬೇಕೆಂದರೆ ದಿನ ಪೂರ್ತಿ ಹುಡುಕಾಡುವಂತಹ ಪರಿಸ್ಥಿತಿ ಗ್ರಂಥಪಾಲಕರಿಗೆ ಬಂದೊದಗಿದೆ.

1,354 ಸದಸ್ಯರನ್ನು ಹೊಂದಿರುವ ಈ ಗ್ರಂಥಾಲಯಕ್ಕೆ ದಿನನಿತ್ಯ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಬರುತ್ತವೆ. ಸಾಮಾನ್ಯ ಜ್ಞಾನದ ಅವಶ್ಯಕ ಪುಸ್ತಕಗಳನ್ನು ಓದಲು ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರು ಆಗಮಿಸುತ್ತಾರೆ. ಬೆಳಗ್ಗೆ ಹಾಗೂ ಸಾಯಂಕಾಲದ ಹೊತ್ತಿನಲ್ಲಿ ಗ್ರಂಥಾಲಯದಲ್ಲಿ ಕುಳಿತುಕೊಂಡು ಓದುವುದು ಒತ್ತಟ್ಟಿಗಿರಲಿ ನಿಂತುಕೊಳ್ಳಲೂ ಸಹ ಜಾಗೆ ಸಿಗುವುದಿಲ್ಲ. ದೈನಂದಿನ ಪತ್ರಿಕೆ ಓದುಗರು ಗ್ರಂಥಾಲಯದ ಹೊರಗಡೆ ಕಟ್ಟೆ ಮೇಲೆ ಕುಳಿತು ಓದುವಂತಹ ಪರಿಸ್ಥಿತಿ ಇಕ್ಕಟ್ಟಿನ ಕಟ್ಟಡ ತಂದೊಡ್ಡಿದೆ.

ಇಕ್ಕಟ್ಟಿನ ಕಟ್ಟಡದ ಗ್ರಂಥಾಲಯದಲ್ಲಿ ಪುರುಷರಿಗೆ ಜಾಗೆ ಕೊರತೆ ಎದ್ದು ಕಾಣುತ್ತಿದ್ದರಿಂದ, ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳೆಯರು ಗ್ರಂಥಾಲಯದ ಕಡೆ ಮುಖ ಮಾಡುವುದನ್ನು ಬಿಟ್ಟಿದ್ದಾರೆ. ಮಹಿಳೆಯರಿಗೆ ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿಲ್ಲ. ಸುಸಜ್ಜಿತ ಕಟ್ಟಡದಲ್ಲಿ ಅವಶ್ಯಕವಾಗಿ ಇರಬೇಕಿದ್ದ ಶೌಚಾಲಯದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಯವರೆಗೆ ಮಾಡಿಲ್ಲ. ಗ್ರಂಥಾಲಯಕ್ಕೆ ಬಂದ ಸದಸ್ಯರು ಕುಡಿಯುವ ನೀರಿಗಾಗಿ ಹೋಟೆಲ್‌ಗ‌ಳಿಗೆ ತೆರಳುವುದು ಸಾಮಾನ್ಯವಾಗಿದೆ. ವಿದ್ಯುತ್‌ ಕೈಕೊಟ್ಟರೆ ಕತ್ತಲ ಕೋಣೆಯಿಂದ ಓದುಗರು ಹೊರ ಬರುವುದು ಕಾಣುತ್ತೇವೆ.

ಒಂದೇ ಕೋಣೆಯಲ್ಲಿ ಎಲ್ಲ ಪುಸ್ತಕಗಳು: ವಿದ್ಯಾರ್ಥಿಗಳಿಗೆ ಅವಶ್ಯಕ್ಕೆ ತಕ್ಕಂತೆ ತೆಗೆದುಕೊಂಡು ಓದಬೇಕಿದ್ದ ಪುಸ್ತಕಗಳು ಜಾಗೆ ಕೊರತೆಯಿಂದ ಒಂದೇ ಕೋಣೆಯಲ್ಲಿ ಎಲ್ಲವನ್ನು ಕೂಡಿಡಲಾಗಿದೆ. ಹಿಂದಿನ ಇತಿಹಾಸಕಾರರ ಪುಸ್ತಕ ಬೇಕೆಂದು ಕೇಳಿದರೆ ಇಡಿ ಪುಸ್ತಕಗಳ ರಾಶಿಯೇ ಜಾಲಾಡಬೇಕು. ಅಂತಹ ಪರಸ್ಥಿತಿ ಗ್ರಂತಪಾಲಕರಿಗೆ ಬಂದೊದಗಿದೆ. ನೂತನವಾಗಿ ಹೊಸ ಪುಸ್ತಕಗಳು ಕೇಂದ್ರ ಗ್ರಂಥಾಲಯದಿಂದ ಪೂರೈಸಲಾಗಿದ್ದರೂ ಅವುಗಳನ್ನು ಪ್ರತ್ಯೇಕಿಸಿ ಜೋಡಿಸಿಡಲು ಜಾಗದ ಕೊರತೆಯಿಂದ ಬಂದ ಪುಸ್ತಕಗಳ ಗಂಟು ಇನ್ನೂ ಬಿಚ್ಚಿಲ್ಲ.

4 ವರ್ಷದಿಂದ ಕೊಳೆಯುತ್ತಿದೆ ರದ್ದಿ ಪೇಪರ್‌ : ದಿನನಿತ್ಯ ಗ್ರಂಥಾಲಯಕ್ಕೆ ಪೂರೈಕೆಯಾದ ದಿನಪತ್ರಿಕೆಗಳನ್ನು ಮರುದಿನ ಗಂಟು ಕಟ್ಟಿ ಜೋಡಿಸಿಡಲಾದ ಪತ್ರಿಕೆಗಳ ಗಂಟು 4 ವರ್ಷದಿಂದವಿಲೇವಾರಿಯಾಗಿಲ್ಲ. ಇದರಿಂದ ರಾಶಿರಾಶಿ ರದ್ದಿಗಂಟುಗಳು ಜಾಗದ ಕೊರತೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಪ್ರತಿ ವರ್ಷ ಕೇಂದ್ರ ಗ್ರಂಥಾಲಯದಿಂದ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲ ಗ್ರಂಥಾಲಯಗಳನ್ನು ಸುತ್ತಾಡಿ ಅಲ್ಲಲ್ಲಿ ಅವಶ್ಯಕ ಬೇಡಿಕೆಗಳ ಜೊತೆಗೆ ರದ್ದಿ ಗಂಟುಗಳ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಸುಮಾರು 4 ವರ್ಷದಿಂದ ಯಾವೊಬ್ಬ ಅಧಿಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿಲ್ಲ. ಓದುಗರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಗ್ರಂಥಾಲಯದ ಕಟ್ಟಡ ಮತದಾನದ ಕೇಂದ್ರ: ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ಮೀಸಲೆಂದು ಹೇಳುವ ಅಧಿಕಾರಿಗಳು ಯಾವುದೇ ಚುನಾವಣೆ ಬಂದರೂ ಗ್ರಂಥಾಲಯದ ಕಟ್ಟಡದಲ್ಲಿ ಮತದಾನದ ಕೇಂದ್ರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಆ ಸಮಯದಲ್ಲಿ ಸುಮಾರು 4, 5 ದಿನಗಳವರೆಗೆ ಗ್ರಂಥಾಲಯಕ್ಕೆ ಅಧಿಕಾರಿಗಳು ಬೀಗ ಹಾಕಿ ಚುನಾವಣೆ ನಿಮಿತ್ತ ಕೆಲಸದ ಮೇಲೆ ತೆರಳುತ್ತಾರೆ. 4, 5 ದಿನಗಳವರೆಗೆ ದಿನನಿತ್ಯ ದಿನಪತ್ರಿಕೆಗಳನ್ನು ಓದಲು ಗ್ರಂಥಾಲಯಕ್ಕೆ ಆಗಮಿಸುವ ಓದುಗರರ ಗೋಳು ಕೇಳುವವರ್ಯಾರು ಎಂಬ ಪ್ರಶ್ನೆ ಉದ್ಬವಿಸಿದೆ.

ಗ್ರಂಥಾಲಯದ ಇಕ್ಕಟ್ಟಿನ ಜಾಗೆಯಲ್ಲಿಯೇ ಓದುಗರರು ಅಪೇಕ್ಷೆಯಂತೆ ದಿನಪತ್ರಿಕೆ, ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಒದಗಿಸುತ್ತ ಸಾಗಿದ್ದೇವೆ. ಪುಸ್ತಕಗಳ ಸಂಖ್ಯೆ, ಓದುಗರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಂಥಾಲಯಕ್ಕೆ ಹೆಚ್ಚುವರಿ ಕೋಣೆಗಳ ಅವಶ್ಯಕತೆ ಇದೆ. ಇಕ್ಕಟ್ಟಿನ ಕಟ್ಟಡದ ಕುರಿತು ಹೆಚ್ಚುವರಿ ಕೊಣೆಗಳ ಬಗ್ಗೆ ಮೇಲಧಿಕಾರಿಗಳ ತಿಳಿಸಿದ್ದೇವೆ. -ಕೃಷ್ಣಾ ಕುಲಕರ್ಣಿ ಗ್ರಂಥಾಲಯ ಗ್ರಂಥಪಾಲಕ

 

-ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.