ರೈತರ ಹಕ್ಕಿಗಾಗಿ ಇಂದು ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಬಂದ್
ಬರ ಪಟ್ಟಿಯಿಂದ ಬಸವನಬಾಗೇವಾಡಿ, ಕೊಲಾØರ, ನಿಡಗುಂದಿ ಕೈ ಬಿಟ್ಟಿದ್ದಕ್ಕೆ ಆಕ್ರೋಶ
Team Udayavani, Jul 2, 2019, 11:05 AM IST
ಬಸವನಬಾಗೇವಾಡಿ: ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದ್ದು ಅರವಿಂದ ಕುಲಕರ್ಣಿ ರೈತರನ್ನುದ್ದೇಶಿಸಿ ಮಾತನಾಡಿದರು.
ಬಸವನಬಾಗೇವಾಡಿ: ಬಸವನಬಾಗೇವಾಡಿ, ಕೊಲಾರ, ನಿಡಗುಂದಿ ತಾಲೂಕನ್ನು ಬರಗಾಲದ ಪಟ್ಟಿಯಿಂದ ರಾಜ್ಯ ಸರಕಾರ ಕೈ ಬಿಟ್ಟಿದ್ದನ್ನು ಖಂಡಿಸಿ ಹಾಗೂ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಮಂಗಳವಾರ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ರೈತರ ಹೋರಾಟಕ್ಕೆ ಸ್ಪಂದಿಸಿಲ್ಲ. ಆದ್ದರಿಂದ ಅನಿರ್ವಾಯವಾಗಿ ಹೋರಾಟದ ಸ್ವರೂಪ ಬದಲಾವಣೆ ಮಾಡಿ ಜು. 2ರಂದು ಬೆಳಗ್ಗೆ 11ಕ್ಕೆ ಧರಣಿ ಸ್ಥಳದ ಮುಂಭಾಗದ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕೃಷಿಕ ಸಮಾಜ ಹಾಗೂ ಇನ್ನಿತರ ಸಂಘಗಳು ಭಾಗವಹಿಸಿದ್ದವು. ನಾಡಿನ ಮಠಾಧಿಧೀಶರಾದ ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗ ಮಾಹಾಸ್ವಾಮಿಗಳು, ಮನಗೂಳಿಯ ಸಂಗನಬಸವ ಸ್ವಾಮಿಗಳು, ಮುತ್ತಗಿ ಪಂಡಿತರಾಧ್ಯ ಶಿವಾರ್ಚಾರು, ಕರಭಂಟನಾಳ ಶಿವಕುಮಾರ ಸ್ವಾಮಿಗಳು, ಬಸವನಬಾಗೇವಾಡಿ ಶಿವಪ್ರಕಾಶ ಸ್ವಾಮಿಗಳು, ಹುಣಶ್ಯಾಳ ಸಂಗನಬಸವ ಸ್ವಾಮಿಗಳು, ರಕ್ಷಣಾ ವೇದಿಕೆಯ ಅಶೋಕ ಹಾರಿವಾಳ ಸೇರಿದಂತೆ ಮುಂತಾದವರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ.
ರಸ್ತೆ ತಡೆ ಚಳವಳಿಗೆ ಸರಕಾರ ಸ್ಪಂದಿಸದಿದ್ದರೆ ಬಸವನಬಾಗೇವಾಡಿ ಬಂದ್ ಕರೆ ನೀಡುವುದಲ್ಲದೆ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲು ತಿರ್ಮಾನಿಸಬೇಕಾಗುತ್ತದೆ. ಇದರಿಂದ ಮುಂದೆ ಅವಘಡಗಳು ಸಂಭವಿಸಿದರೆ ಅದಕ್ಕೆ ಸರಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ ಮಾತನಾಡಿ, ರಸ್ತೆ ತಡೆ ಚಳವಳಿಗೆ ತಾಲೂಕಿನ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ರೈತರಲ್ಲಿ ಮನವಿ ಮಾಡಿಕೊಂಡರು. ಧರಣಿಯಲ್ಲಿ ಕೃಷಿಕ ಸಮಾಜದ ಜಿಲಾಧ್ಯಕ್ಷ ಬಿ.ಎಲ್. ಪಾಟೀಲ, ತಾಲೂಕು ಉಪಾಧ್ಯಕ್ಷ ಹೊನಕೆರೆಪ್ಪ ತೆಲಗಿ, ಕೃಷ್ಣಪ್ಪ ಬಮರೆಡ್ಡಿ, ಶೆಟ್ಟೆಪ್ಪ ಲಮಾಣಿ, ಚಂದ್ರಾಮ ತೆಲಗಿ, ಹೂವಿನ ಹಿಪ್ಪರಗಿ ಘಟಕದ ಅಧ್ಯಕ್ಷ ಹನುಮಂತ ತೋಟದ, ಶಿವಪ್ಪ ಮಂಗೊಂಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾರದ ಲಮಾಣಿ, ಈರಣ್ಣ ದೇವರಗುಡಿ, ಶಂಕರ ಲಮಾಣಿ, ಮಾಚಪ್ಪ ಹೊರ್ತಿ, ರಾಮಣ್ಣ ವಾಲೀಕಾರ, ಮಹಿಬೂಬಸಾಬ ಅವಟಿ, ಅಂದಾನೆಪ್ಪ ಬಿರಾದಾರ, ಸಾಯಬಣ್ಣ ಪೂಜಾರಿ ,ರಾಮು ಲಮಾಣಿ, ರಾಮಚಂದ್ರ ಬಡಿಗೇರ, ಸಂಜಯ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.