ಮೇಯರ್‌ ವಿರುದ್ಧ ಸದಸ್ಯರ ಸಿಡಿಮಿಡಿ

Team Udayavani, Jun 19, 2018, 3:31 PM IST

vijayapura-1.jpg

ವಿಜಯಪುರ: ನಗರದ ಮಾಸ್ಟರ್‌ಪ್ಲಾನ್‌ ಅನುಷ್ಠಾನಕ್ಕೆ ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳುವ ಚಿಂತನೆಗೆ ಮಹಾನಗರ ಪಾಲಿಕೆ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ ಘಟನೆ ಜರುಗಿತು.

ಸೋಮವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಸಂಗೀತಾ ಪೋಳ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಮೇಯರ್‌ ಅವರು ನಿಯಮಿತವಾಗಿ ಸಭೆ ಕರೆಯುವುದಿಲ್ಲ. ಈಗ ಕೇವಲ ಸಣ್ಣ ವಿಷಯಕ್ಕೆ ಸಭೆ ಕರೆದಿರುವ ನಡೆ ಎಷ್ಟು ಸರಿ, ಸಾಮಾನ್ಯ ಸಭೆಯಲ್ಲಿ ನಗರದ ಸಮಗ್ರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಸದಸ್ಯ ಗೋಪಾಲ ಘಟಕಾಂಬಳೆ, ಸಜ್ಜಾದೇಪೀರಾ ಮುಶ್ರೀಫ್‌, ಪ್ರಕಾಶ ಮಿರ್ಜಿ ಸೇರಿದಂತೆ ಇತರರು ಆಕ್ಷೇಪಿಸಿದರು.

ಹೀಗಾಗಿ ಸಂಡೇ ಬಜಾರ್‌ ಗುತ್ತಿಗೆ ಮುಂದುವರಿಸುವ ವಿಷಯದ ಬದಲಾಗಿ ಮಾಸ್ಟರ್‌ಪ್ಲಾನ್‌ ಅನುಷ್ಠಾನವೇ
ಹೆಚ್ಚಿನ ಸಮಯ ನುಂಗಿ ಹಾಕಿತು. 14ನೇ ಹಣಕಾಸು ಯೋಜನೆಯ ಅನುದಾನ ಮಾಸ್ಟರ್‌ಪ್ಲಾನ್‌ ಯೋಜನೆಗೆ
ಬಳಕೆ ಮಾಡುವುದು ಸೂಕ್ತ. ಇದಲ್ಲದೇ 100 ಕೋಟಿ ರೂ. ಮಾಸ್ಟರ್‌ಪ್ಲಾನ್‌ಗಾಗಿಯೇ ವಿಶೇಷ ಅನುದಾನ
ತರುತ್ತೇವೆ, ಯಾರೂ ಚಿಂತೆ ಮಾಡಬೇಡಿ ಎಂದು ಉಪ ಮೇಯರ್‌ ರಾಜೇಶ ದೇವಗಿರಿ, ಪರಶುರಾಂ
ರಜಪೂತ, ರಾಹುಲ್‌ ಜಾಧವ, ಮೊದಲಾದವರು ಒಪ್ಪಿಗೆ ಸೂಚಿಸಿ ಸಮರ್ಥನೆ ಮಾಡಿಕೊಂಡರು.

ರಾಹುಲ್‌ ಜಾಧವ ಮಾತನಾಡಿ, ಮಾಸ್ಟರ್‌ಪ್ಲಾನ್‌ ಕಾಮಗಾರಿ ಮುಗಿಸಲು ತ್ವರಿ ಕ್ರಮ ಕೈಗೊಳ್ಳುವುದರಿಂದ
ನಗರ ನಾಗರಿಕರಿಗೆ ಅನುಕೂಲವಾಗಲಿದೆ. ನಗರದ ಅಭಿವೃದ್ಧಿಗೆ ಪಾಲಿಕೆ ಅನುದಾನ ಬಳಸಿದರೆ ತಪ್ಪೇನು
ಎಂದು ಸಮರ್ಥಿಸಿದರು. 

ಹಿರಿಯ ಸದಸ್ಯ ವಿಜಯಕುಮಾರ ಮಂಗಳವೇಡೆ ಮಾತನಾಡಿ, ಯಾವ ವಿಷಯಕ್ಕೇ ಆಗಲಿ ಸಭೆಯನ್ನಂತೂ ಕರೆದಿದ್ದೀರಿ. ಹೀಗಾಗಿ ನಗರದ ಸಮಗ್ರ ಸಮಸ್ಯೆ ಚರ್ಚೆಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು. ಸಂಡೇ ಬಜಾರ್‌ ಟೆಂಡರ್‌ನ್ನು ಮೂರು ವರ್ಷಗಳ ಅವಧಿಗೆ ಮುಂದುವರಿಕೆ ನಿರ್ಧಾರಿದಂದ ಪಾಲಿಕೆಗೆ ನಷ್ಟವಾಗುತ್ತದೆ. ಇದೊಂದೆ ವಿಷಯದ ಚರ್ಚೆಗೆ ಸಭೆ ಕರೆಯಲಾಗಿದೆ.

ಮತ್ತೆ ಮೂರು ವರ್ಷಕ್ಕೆ ಟೆಂಡರ್‌ ಮುಂದುವರಿಸುವ ನಿರ್ಧಾರದ ಹಿಂದಿನ ಉದ್ದೇಶ, ಸಭೆಯಲ್ಲಿ ಇಂತ ನಿರ್ಣಯ ಕೈಗೊಡರೆ ಪಾಲಿಕೆಗೆ ಆರ್ಥಿಕ ನಷ್ಟ ಹಾಗೂ ಹಿನ್ನಡೆ ಆಗಲಿದೆ. ಭವಿಷ್ಯದಲ್ಲಿ ಕಿತ್ತುಹೋದ ಶೌಚಾಲಯದ ಚೇಂಬರ್‌
ಅಳವಡಿಕೆಗೂ ಹಣ ಇಲ್ಲದ ದುಸ್ಥಿತಿ ಬಂದೀತು ಎಂದು ಆಕ್ಷೇಪಿಸಿದ ರವೀಂದ್ರ ಲೋಣಿ, ಸಭೆ ಭಹಿಷ್ಕರಿಸಿ ಹೊರ
ನಡೆದರು.

ಸಂಡೇ ಬಜಾರ್‌ ಟೆಂಡರ್‌ ನೀಡುವ ಬದಲು ಪಾಲಿಕೆಯೇ ನೇರವಾಗಿ ವ್ಯಾಪಾರಿಗಳಿಂದ ಕಡಿಮೆ ಶುಲ್ಕ ಪಡೆಯಲು ಮುಂದಾಗಿ, ಅದಕ್ಕಾಗಿ ಓರ್ವ ಸಿಬ್ಬಂದಿಯನ್ನು ನೇಮಿಸಿಕೊಂಡರೆ ಪಾಲಿಕೆಗೆ ಆದಾಯವಾಗಲಿದೆ ಎಂದು ವಿಜಯಕುಮಾರ ಮಂಗಳವೇಡೆ ಸಲಹೆ ನೀಡಿದರು.

ಒಂದೇ ವಿಷಯಕ್ಕೆ ಸಭೆ ಕರೆದಿರುವ ಮೇಯರ್‌ ಅವರು ಎಂದಾದರೂ ತಮ್ಮ ವಾರ್ಡ್‌ಗೆ ಭೇಟಿ ನೀಡಿ
ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆಯೇ ಎಂದು ಪ್ರಶ್ನಿಸಿದ ಪ್ರಮಾನಂದ ಬಿರಾದಾರ, ನಮ್ಮ ಬಡಾವಣೆ ನಿವಾಸಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‌ಗೆ ಭೇಟಿ ನೀಡುವಂತೆ ಹತ್ತಾರು ಬಾರಿ ಮಾಡಿಕೊಂಡ ಮನವಿಗೆ ಮೇಯರ್‌ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಾರ್ಡ್‌ಗಳ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ವಾರ್ಡ್‌ಗೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಮಾಡಲಾಗುತ್ತಿದೆ. ಸಾಯಿಬಾಬಾ ಗುಡಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದೇನೆ ಎಂದು ಮೇಯರ್‌ ಸಮಜಾಯಿಸಿ ನೀಡಿದಾಗ, ದೇವರ ದರ್ಶನಕ್ಕೆ ನನ್ನ ವಾರ್ಡ್‌ಗೆ ಬರದೆ ಸಮಸ್ಯೆ
ಪರಿಹಾರಕ್ಕೆ ನನ್ನ ವಾರ್ಡ್‌ಗೆ ಬನ್ನಿ ಎಂದು ಕುಟಿಕದರು.

ಟಾಪ್ ನ್ಯೂಸ್

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.