ಸಚಿವರ ತವರಲ್ಲಿ ನಿಂತಿಲ್ಲ ಬೀದಿ ಶೌಚ
Team Udayavani, Oct 10, 2018, 12:40 PM IST
ವಿಜಯಪುರ: ಸ್ವತ್ಛ ಭಾರತದ ಭಾಗವಾದ ಬಯಲು ಶೌಚ ಮುಕ್ತ ಭಾರತ ಕಟ್ಟುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಕನಸು. ಈ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕವಾಗಿ ನೈರ್ಮಲ್ಯ ಖಾತೆ ಸೃಷ್ಟಿಸಿ ಸಚಿವರನ್ನು ನೇಮಿಸಿದ್ದಾರೆ. ಆದರೆ ಪ್ರಸಕ್ತ ವರ್ಷವೇ 40 ಕೋಟಿ ರೂ. ಖರ್ಚು ಮಾಡಿದರೂ ಕೇಂದ್ರದ ನೈರ್ಮಲ್ಯ ಖಾತೆ ಸಚಿವರ
ತವರಿನಲ್ಲೇ ಘೋಷಿತ ಗ್ರಾಮಗಳಲ್ಲೇ ಇನ್ನೂ ಬೀದಿ ಶೌಚ ನಿಂತಿಲ್ಲ.
ಕೇಂದ್ರ ಸರ್ಕಾರದ ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಕರ್ನಾಟಕ ರಾಜ್ಯದವರೇ ಆಗಿದ್ದು ವಿಜಯಪುರ ಲೋಕಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ಹಿರಿಯ ಸಚಿವ. ನೈರ್ಮಲ್ಯ ಸಚಿವರ ತವರು ರಾಜ್ಯ ಕರ್ನಾಟಕ ಈಗಾಗಲೇ
20 ಜಿಲ್ಲೆಗಳು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಿದ್ದು, 7 ಜಿಲ್ಲೆಗಳು ಘೋಷಣೆಗೆ ಕಾಯುತ್ತಿವೆ.
ಉತ್ತರ ಕರ್ನಾಟಕ ಭಾಗದ ವಿಜಯಪುರ, ಬೀದರ ರಾಯಚೂರು ಜಿಲ್ಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ನವೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸಂಪೂರ್ಣವಾಗಿ ಪ್ರತಿ ಕುಟುಂಬಗಳು ಶೌಚಾಲಯ ಹೊಂದಿ ಕರ್ನಾಟಕ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯ ಎಂಬ ಗುರಿ ಸಾಧಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ನೂರಾರು ಕೋಟಿ ರೂ. ಅನುದಾನ ನೀಡುತ್ತಿದ್ದು, ಹಣ ಬಳೆಯತ್ತ ಅಧಿಕಾರಿಗಳು ಚಿತ್ತ ನೆಟ್ಟಿದ್ದಾರೆ.
ಆದರೆ ಬಯಲು ಶೌಚಾಲಯ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡ ಹಳ್ಳಿಗಳಲ್ಲೇ ಬಯಲು ಶೌಚ ಮುಕ್ತವಾಗಿಯೇ ನಡೆದಿದೆ. ಅಧಿಕಾರಿಗಳು ಹಣ ಬಳಕೆ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣದ ಗುರಿ ಸಾಧನೆಗೆ ಆದ್ಯತೆ ನೀಡುತ್ತಿದ್ದಾರೆಯೇ ಹೊರತು, ಬಯಲು ಶೌಚ ಮುಕ್ತಗೊಳಿಸುವ ಆಶಯ ಈಡೇರಿಸುವಲ್ಲಿ ಆಸಕ್ತಿ ತೋರಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ಗ್ರಾಮ ಯೋಜನೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಬಸವನಬಾಗೇವಾಡಿ ಶೇ. 100 ಸಾಧನೆ ಮಾಡಿದ್ದರೆ, ಇಂಡಿ, ವಿಜಯಪುರ, ಮುದ್ದೇಬಿಹಾಳ ಶೇ. 90 ಗಡಿ ದಾಡಿದೆ. ಸಿಂದಗಿ ಇನ್ನೂ ಶೇ. 80 ಗಡಿಯಲ್ಲಿ ನಿಂತಿದೆ. ಇದಕ್ಕಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಸರ್ಕಾರ 52 ಕೋಟಿ ರೂ. ನೀಡಿದ್ದು, ಸುಮಾರು 40 ಕೋಟಿ ರೂ. ಖರ್ಚು ಮಾಡಿದ್ದರೂ ಇನ್ನೂ ಬಯಲು ಶೌಚಾಲಯಕ್ಕೆ ಮುಕ್ತಿ ದೊರಕಿಲ್ಲ.
ವಿಜಯಪುರ ಜಿಲ್ಲೆಯಲ್ಲೇ ಶೇ. 93.54 ಗುರಿ ಸಾಧನೆ ಮಾಡಿದ್ದು, 16,777 ಕುಟುಂಬಗಳು ಮಾತ್ರ ವೈಯಕ್ತಿ ಶೌಚಾಲಯ ನಿರ್ಮಾಣ ಬಾಕಿ ಇದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಸರ್ಕಾರ ಗುರಿ ಸಾಧನೆಗೆ ತಾಕೀತು ಮಾಡುತ್ತಿರುವ ಕಾರಣ ಸಾಧನೆಯ ದಾಖಲೆ ಮಾಡುವ ಧಾವಂತದಲ್ಲಿ ಅಧಿಕಾರಿಗಳು ಸರ್ಕಾರ ನೀಡಿದ ಅನುದಾನ ಬಳಕೆ ಮಾಡುವ ಆರ್ಥಿಕ ಗುರಿ ಸಾಧನೆಗೆ ಸರ್ಕಾರಿ ದಾಖಲೆಯಲ್ಲಿ ಬಯಲು ಶೌಚಾಲಯ ಮುಕ್ತ ಗ್ರಾಮಗಳು ಎಂದು ಘೋಷಣೆ ಮಾಡಲು ಆರಂಭಿಸಿದ್ದಾರೆ. ವಾಸ್ತವಿಕವಾಗಿ ಜಿಲ್ಲೆಯಲ್ಲಿ ಬಯಲು ಶೌಚಮುಕ್ತ ಘೋಷಿತ ಗ್ರಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಯಲು ಶೌಚ ನಿಂತಿಲ್ಲ.
ಜಿಲ್ಲಾ ಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ತೊರವಿ ಗ್ರಾಮ ಬಯಲು ಶೌಚ ಮುಕ್ತ ಎಂದು ಸರ್ಕಾರಿ ದಾಖಲೆಯಲ್ಲಿ ಸೇರ್ಪಡೆ ಆಗಿದೆ. ಆದರೆ ವಾಸ್ತವಿಕವಾಗಿ ಘೋಷಿತ ಬಹುತೇಕ ಹಳ್ಳಿಗಳಲ್ಲಿ ಇನ್ನೂ ರಸ್ತೆ ಬದಿಗಳು, ಮುಳ್ಳಿನ ಪೊದೆಗಳು ಇನ್ನೂ ಬಯಲು ಶೌಚಾಲಯ ಜೀವಂತಕ್ಕೆ ಸಾಕ್ಷಿ ನೀಡುತ್ತವೆ. ಸರ್ಕಾರದ ಸಾಧನೆ ಹಣ ಖರ್ಚು ಮಾಡಲು, ಕಾಗದದಲ್ಲಿ ಸಾಧನೆ ಮೆರೆಯಲು ಎಂದು ಅಣಕವಾಡುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಧಾವಂತದ ಸಾಧನೆ-ದಾಖಲೆ ಮಾಡುವುದಕ್ಕಿಂತ ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಧನೆ ಮಾಡಬೇಕಿದೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.