ಹೊಸ ಶಿಕ್ಷ ಣ ನೀತಿ ಸಮಾಜಕ್ಕೆ ಮಾರಕ
Team Udayavani, Jul 6, 2021, 7:50 PM IST
ವಿಜಯಪುರ: ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಅಡಿಯಲ್ಲಿ ಜಾರಿಗೊಳಿಸಲು ಹೊರಟ ನಾಲ್ಕು ವರ್ಷದ ಪದವಿ ಪದ್ಧತಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅಸಮಾನತೆ ಸೃಷ್ಟಿಸಲಿದೆ. ಅಲ್ಲದೇ ಹೊಸ ಮಾದರಿಯ ತಾರತಮ್ಯದ ಹುಟ್ಟಿಗೆ ಕಾರಣವಾಗಲಿದೆ ಎಂದು ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಆತಂಕ ವ್ಯಕ್ತಪಡಿಸಿದರು. ಸೋಮವಾರ ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆ ವಿರುದ್ಧ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
4 ವರ್ಷಗಳ ಪದವಿ ಪದ್ದತಿ ವಿದೇಶಕ್ಕೆ ಹಾರಿಹೋಗುವ ಕೆಲ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆಯೇ ಹೊರತು ಬಹುಸಂಖ್ಯೆಯ ಬಡ-ಸಾಮಾನ್ಯ ವಿದ್ಯಾರ್ಥಿಗಳಿಗೆ ಆಲ್ಲ. ಸದರಿ ನೀತಿಯಲ್ಲಿ ಬಹು ಹಂತದ ತೇರ್ಗಡೆ ಇರುವುದರಿಂದ ವಿದ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ನೀಡಲಾರದು. ಉದ್ಯೋಗಕ್ಕೆ ಸಮರ್ಪಕ ಅರ್ಹ ಅಭ್ಯರ್ಥಿಗಳನ್ನೂ ಕೂಡಾ ಸೃಷ್ಟಿಸಲಾರದು. ಇದು ಹೊಸ ಮಾದರಿಯ ತಾರತಮ್ಯದ ಸವಾಲು ಸೃಷ್ಟಿಸಲಿದೆ ಎಂದು ಎಚ್ಚರಿಸಿದರು.
ಶಿಕ್ಷಣ ತಜ್ಞ ಮಹಾಬಲೇಶ್ವರರಾವ್ ಮಾತನಾಡಿ, ಸರ್ಕಾರ ಜನಾಭಿಪ್ರಾಯ ಕಡೆಗಣಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಜನ ವಿರೋ ಧಿ ನೀತಿ ಜಾರಿಗೊಳಿಸುತ್ತಿದೆ. ಸಂವಿಧಾನ ವಿರೋಧಿ , ಜನ ವಿರೋಧಿ ಮತ್ತು ಸಮಾಜ ವಿರೋಧಿ ನೀತಿ ಜಾರಿಯಿಂದ ಗ್ರಾಮೀಣ, ಬಡವರು, ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ದೂರಿದರು. ಈಗಾಗಲೇ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕ, ಉಪನ್ಯಾಸಕರನ್ನು ಸರ್ಕಾರಗಳು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಉದ್ಯೋಗ ಭದ್ರತೆ ಇಲ್ಲದ ವ್ಯವಸ್ಥೆಯನ್ನು ಪೋಷಣೆಯ ನೀತಿಗಳನ್ನು ಜಾರಿಗೊಳಿಸುತ್ತಿದೆ. ಸಮಾಜಕ್ಕೆ ಬಹು ಶಿಸ್ತಿನ ಪದ್ಧತಿ ಬೇಕಿಲ್ಲ, ಬದಲಾಗಿ ಅಂತರ್ ಸಂಬಂಧಿಧೀಯ ಬಹು ಶಿಸ್ತಿನ ಪದ್ದತಿಯ ಅಗತ್ಯವಿದೆ ಎಂದರು. ಎಐಎಸ್‌ಇಸಿ ಪ್ರಧಾನ ಕಾರ್ಯದರ್ಶಿಗಳು ಆನಿಸ್ ರಾಯ್ ಮಾತನಾಡಿ, ಹೊಸ ಶಿಕ್ಷಣ ನೀತಿ-2020 ಬಹು ಶಿಸ್ತಿಯ ಪದ್ಧತಿ ಜಾರಿಗೊಳಿಸುತ್ತೇವೆ ಎಂಬ ಮುಖವಾಡದಲ್ಲಿ ಈಗಾಗಲೇ ಇರುವ ಅಂತರ್ ಸಂಬಂಧಿಧೀಯ ಬಹು ಶಿಸ್ತಿಯ ಪದ್ದತಿ ಹಾಳು ಮಾಡುತ್ತಿವೆ. ಮಾನವೀಯ ಶಾಸ್ತ್ರಗಳನ್ನು ಅಪಾಯಕ್ಕೆ ತಳ್ಳುತ್ತಿವೆ. ಅಮೆರಿಕದ ಅನುಕರಣೆಗಾಗಿ ಭಾರತಕ್ಕೆ ಹೊಸ ಶಿಕ್ಷಣ ನೀತಿ ನಿರೂಪಿಸಲಾಗಿದೆ. ನಮ್ಮಲ್ಲಿನ ಸಾಂಸ್ಕೃತಿಕ, ಪ್ರಾದೇಶಿಕ, ಸಾಮಾಜಿಕ ಭಿನ್ನತೆಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಎ.ಮುರಿಗೆಪ್ಪ ಮಾತನಾಡಿದರು.
ಎಐಎಸ್‌ಇಸಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಜಾಗತೀಕರಣದ ಹಿನ್ನೆಲೆ ಪ್ರಸ್ತುತ ಶಿಕ್ಷಣ ನೀತಿ ರೂಪಿಸುತ್ತಿರುವ ಕಾರಣದಿಂದ ಜನರ ಆಶಯ ಈಡೇರಿಸುವಲ್ಲಿ ವಿಫಲವಾಗಿದೆ. ಖಾಲಿ ಹೊಟ್ಟೆಯ ಶಿಕ್ಷಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾರ. ಆದ್ದರಿಂದ ಸರ್ಕಾರ ಮೊದಲು ಅತಿಥಿ ಶಿಕ್ಷಕರ-ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿ, ಅನಗತ್ಯವಾದ ನೀತಿಗಳಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಎ.ಮುರಿಗೆಪ್ಪ ಮಾತನಾಡಿದರು. ಉಪನ್ಯಾಸಕ ಸೋಮಶೇಖರಗೌಡ ಪ್ರಾಸ್ತಾವಿಕ ಮಾತನಾಡಿದರು. ವಿ.ಎನ್. ರಾಜಶೇಖ ಅಧ್ಯಕ್ಷತೆ ವಹಿಸಿದ್ದರು. ಸಾವಿರಾರು ಪ್ರತಿನಿಧಿ ಗಳು ಆನ್‌ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.