ವಚನಕ್ರಾಂತಿ ಪುನರುತ್ಥಾನ ಇಂದಿನ ಅಗತ್ಯ


Team Udayavani, Mar 2, 2018, 3:25 PM IST

vij-2.jpg

ವಿಜಯಪುರ: 12ನೇ ಶತಮಾನಕ್ಕಿಂತ 21ನೇ ಶತಮಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ನ್ಯಾಯ ಮುಂತಾದ ಮೌಲ್ಯಗಳು ತೀರ ಅವನತಿಗೊಂಡಿವೆ. ನಮ್ಮ ಸಾಮಾಜಿಕ ಮೌಲ್ಯಗಳ ಪುನರುತ್ಥಾನಕ್ಕಾಗಿ ವಚನ ಸಾಹಿತ್ಯ ಇದೀಗ ಮತ್ತೆ ಪ್ರಸ್ತುತತೆ ಪಡೆದಿದೆ ಎಂದು ಡಾ| ಎಂ.ಎಸ್‌.ಮದಭಾವಿ ಹೇಳಿದರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ವೀರಶೈವ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿ, ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಗಗ್ರಸ್ತ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಮಾತ್ರವೇ ನಿಜವಾದ ಚುಚ್ಚುಮದ್ದಾಗಬಲ್ಲದು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಪರಿಶುದ್ಧಗೊಂಡಾಗ ಮಾತ್ರ ಸಮಾಜವು ಕಲ್ಯಾಣ ರಾಜ್ಯವಾಗುತ್ತದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಶಂಭುಲಿಂಗ ಶ್ರೀಗಳು ಮಾತನಾಡಿ, ಶರಣರ ವಚನಕ್ರಾಂತಿಯ ಪುನರುತ್ಥಾನಕ್ಕಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶರಣ ಸಾಹಿತ್ಯ ಪರಿಷತ್‌ ಅತ್ಯಂತ ಉತ್ತಮ ಕಾರ್ಯ ಮಾಡಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಸಕಲ ಜೀವಾತ್ಮರಿಗೆ ಲೇಸ ಬಯಸಿದ ಶರಣ ತತ್ವ ಸಿದ್ಧಾಂತಗಳು ವಿಶ್ವಶಾಂತಿಗೆ ಪೂರಕವಾಗಿವೆ ಎಂದರು.

ಪ್ರೋ.ಸಾಹೇಬಗೌಡ ಬಸರಕೋಡ ನಿರೂಪಿಸಿದರು. ಸಿದ್ಧಲಿಂಗ ಹದಿಮೂರ ವಂದಿಸಿದರು.  ಮೊದಲನೇ ಗೋಷ್ಠಿಯಲ್ಲಿ ವಚನಕಾರರ ಸಮಾನತೆಯ ಕ್ರಿಯಾಲೋಚನೆಗಳು ಎಂಬ ವಿಷಯದ ಹಿನ್ನೆಲೆಯಲ್ಲಿ ಪ್ರೊ| ದೊಡ್ಡಣ್ಣ ಭಜಂತ್ರಿಯವರು, ಜಾತಿ ಸಮಾನತೆ ಕುರಿತು ಡಾ| ಮಲ್ಲಿಕಾರ್ಜುನ ಮೇತ್ರಿ, ಲಿಂಗ ಸಮಾನತೆ ಕುರಿತು ಡಾ| ವಿ.ಡಿ. ಐಹೊಳ್ಳಿಯವರು ಮಾತನಾಡಿದರು.

ಎರಡನೇ ಗೋಷ್ಠಿಯಲ್ಲಿ ವಚನಕಾರರ ಪ್ರತಿಭಟನೆಯ ನೆಲೆಗಳು ಎಂಬ ವಿಷಯದ ಮೇಲೆ ಮೂವರು ವಿದ್ವಾಂಸರು ಉಪನ್ಯಾಸ ನೀಡಿದರು. ಡಾ| ಸೋಮಶೇಖರ ವಾಲಿಯವರು ಸರ್ವ ಸ್ಥಾವರಗಳ ವಿರೋಧ ಕುರಿತು, ಪ್ರೊ| ಬಿ.ಬಿ. ಡೆಂಗನವರ ಮೂಢನಂಬಿಕೆ ಸೂತಕ ಶೋಷಣೆಗಳ ವಿರೋಧ ಕುರಿತು ಹಾಗೂ ಡಾ| ಉಜ್ವಲಾ ಸರನಾಡಗೌಡ ಮಹಿಳೆ ಮತ್ತು ಶೋಷಿತರ ಪ್ರತಿಭಟನೆ ಕುರಿತು ಮಾತನಾಡಿದರು. ಡಾ| ಸಂಗಮೇಶ ಮೇತ್ರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವೀರಣ್ಣ ಮರ್ತೂರ ವಂದಿಸಿದರು.

ಒಬ್ಬ ವಿದ್ವಾಂಸ-ಒಂದು ವಚನ ವಿಶ್ಲೇಷಣೆ ಎಂಬ ಮೂರನೇ ಗೋಷ್ಠಿಯಲ್ಲಿ ಪ್ರೊ| ಎಸ್‌.ಪಿ. ಶೇಗುಣಸಿ, ಬಸವರಾಜ ನಾಲತವಾಡ, ಅಕ್ಕಮಹಾದೇವಿ ಬುರ್ಲಿ, ಬಿ.ಸಿ. ಹತ್ತಿ, ಚನ್ನಪ್ಪ ಕತ್ತಿ ಹಾಗೂಯುವರಾಜ ಮಾದನಶೆಟ್ಟಿ ವಚನ ವಿಶ್ಲೇಷಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾದರು. ಇಂಧುಮತಿ ಲಮಾಣಿ ಇದ್ದರು. ಸಂಗಮೇಶ ಬಾದಾಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. 

ಸಮಾರೋಪ ಸಮಾರಂಭದಲ್ಲಿ ಬಸವರಾಜ ಕಡ್ಡಿ ಪ್ರಜಾಧರ್ಮವಾಗಿ ಶರಣ ಧರ್ಮ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶರಣರ ವಚನಗಳಲ್ಲಿರುವ ಸಮನ್ವಯ ಸಿದ್ಧಾಂತ ಅನ್ವಯ ಕುರಿತು ಮಾತನಾಡಿ, ನಡೆ ನುಡಿ, ಆಚಾರ-ವಿಚಾರ, ಅರಿವು-ಅನುಭವ, ವಿಜ್ಞಾನ-ಆಧ್ಯಾತ್ಮಗಳ ನಡುವೆ ಸಮನ್ವಯತೆ ಸಾಧಿಸಿ ಶಿವಸಾಯುಜ್ಯ ಪಡೆಯಬೇಕೆಂದು ಹೇಳಿದರು. 

ಸರ್ವಾಧ್ಯಕ್ಷ ಡಾ| ಎಂ.ಎಸ್‌. ಮದಭಾವಿ ಸಮಾರೋಪ ಭಾಷಣ ಮಾಡಿದರು. ಶರಣ ಸಾಹಿತ್ಯ ಪರಿಷತ್‌ನಿಂದ ನಡೆಯುತ್ತಿರುವ ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮ ವೈಶಿಷ್ಯಪೂರ್ಣವಾಗಿ, ಸಮಯಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆದು ಮಾದರಿಯಾಯಿತೆಂದು ಹೇಳಿದರು. 

ಬಿ.ಪಿ. ಪಾಟೀಲ ಉಪಸ್ಥಿತರಿದ್ದು ವಚನಗಾಯನ ಮಾಡಿದರು. ಎಲ್‌.ಪಿ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಮೇಡೆಗಾರ ಶರಣು ಸಮರ್ಪಣೆ ಮಾಡಿದರು. ವಿ.ಸಿ.ನಾಗಠಾಣ, ಕೆ.ಎನ್‌. ರಾವ್‌, ಮ. ಗು.ಯಾದವಾಡ, ಎಸ್‌.ವೈ. ಗದಗ, ಎಸ್‌.ಬಿ. ದೊಡಮನಿ, ಸುವರ್ಣಾ ಕುರ್ಲೆ, ಬಿ.ಎಂ. ಪಾಟೀಲ, ಆರ್‌.ಎಂ. ಕೊಳ್ಳಿ, ಸುಭಾಷ್‌ ಯಾದವಾಡ, ಶಿವಮಠ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.