ಕನ್ನಡ ನಾಡು ನುಡಿ ರಕ್ಷಣೆಯಲ್ಲಿ ಕರವೇ ಪಾತ್ರ ಮುಖ


Team Udayavani, Nov 30, 2017, 3:43 PM IST

Vayupade-1.jpg

ತಾಳಿಕೋಟೆ: ಕನ್ನಡ ನಾಡು ನುಡಿ ಮೇಲೆ ನಡೆಯುತ್ತಿದ್ದ ದಬ್ಟಾಳೆಕೆಗಳಿಗೆ ತಕ್ಕ ಉತ್ತರ ನೀಡುವುದರೊಂದಿಗೆ
ಕನ್ನಡವನ್ನು ರಕ್ಷಣೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತ ಬಂದಿದ್ದು ಹೆಮ್ಮೆ
ಪಡುವಂತಹದ್ದಾಗಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ , ಶಾಸಕ ಸಿ.ಎಸ್‌. ನಾಡಗೌಡ ಹೇಳಿದರು.

ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಸಂಘಟನೆಗಳು, ಎಂಇಎಸ್‌ ಸಂಘಟನೆಗಳು ದಬ್ಟಾಳಿಕೆ ಮಾಡುವ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕಾರ್ಯಕರ್ತರು ಗಡಿ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕರ್ನಾಟಕ ಏಕೀಕರಣವಾದ ಮೇಲೆ ಹೈದ್ರಾಬಾದ್‌ ಕರ್ನಾಟಕ, ದಕ್ಷಿಣ ಕರ್ನಾಟಕ, ಮದ್ರಾಸ್‌ ಕರ್ನಾಟಕ ಎಂಬ ಭೇದ ಭಾವ ಹುಟ್ಟು ಹಾಕುತ್ತಿರುವುದು ತಮ್ಮ ಸ್ವ ಹಿತಾಶಕ್ತಿಗೋಸ್ಕರ.

ಕರ್ನಾಟಕ ಎಂದ ಮೇಲೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳುವುದರೊಂದಿಗೆ ನೆಲ ಜಲ ಭಾಷೆ ರಕ್ಷಣೆ
ಮಾಡಬೇಕು. ಕನ್ನಡವೇ ಧರ್ಮ, ಕನ್ನಡವೇ ಜಾತಿ, ಕನ್ನಡವೇ ದೇವರು ಎಂದು ಭಾವಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಗೌರವದೊಂದಿಗೆ ಮುನ್ನಡೆದಿದೆ ಎಂದರು.

ಬಹುಜನ ಸಮಾಜವಾದಿ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಕರವೇ ತಾಲೂಕು
ಗೌರವಾಧ್ಯಕ್ಷ ಎಚ್‌.ಎಸ್‌. ಢವಳಗಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಸೂಕ್ಷ್ಮತೆ ಅಡಗಿದೆ. ಕನ್ನಡ ಭಾಷೆಯಲ್ಲಿ
ಭುವನೇಶ್ವರಿ ದೇವಿಯನ್ನು ಪೂಜಿಸುವುದರೊಂದಿಗೆ ತಾಯಿಯ ಸ್ವರೂಪವನ್ನು ಕಾಣುತ್ತಿದ್ದೇವೆ.

ಇಂದಿನ ದಿನಮಾನದಲ್ಲಿ ಕೆಲವೆಡೆ ಪ್ರಜ್ಞಾವಂತ ಪಾಲಕರೇ ಕನ್ನಡ ಭಾಷೆಯನ್ನು ಪರಕೀಯರ ಭಾಷೆಯಂಬಂತೆ
ಕಾಣುತ್ತಿರುವದು ವಿಷಾದಕರ ಸಂಗತಿಯಾಗಿದೆ. ಮಕ್ಕಳಲ್ಲಿ ತುಂಬುತ್ತಿರುವ ಇಂಗ್ಲಿಷ್‌ ವ್ಯಾಮೋಹ ಅತಿ
ಕೆಟ್ಟ ಸಂಸ್ಕೃತಿಯನ್ನು ಕಲಿಸುತ್ತಿದೆ. ಅನ್ಯಭಾಷೆ ಕಡೆಗಣಿಸಿ ದ್ವೇಷಿಸುವ ಅಗತ್ಯ ನಮಗಿಲ್ಲ. ಕನ್ನಡ ಭಾಷೆ ಮಾತನಾಡಲು ಬರೆಯಲು ಅನುಕೂಲವಾದಂತಹ ಭಾಷೆಯಾಗಿದೆ. ಕನ್ನಡ ಭಾಷೆ ಉಳಿವಿಗಾಗಿ ಬೆಳವಣಿಗೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಗಲಿರುಳು ದುಡಿಯುತ್ತಾ ಸಾಗಿದ್ದು ಶ್ಲಾಘನೀಯ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕರವೇ ತಾಲೂಕು ಉಪಾಧ್ಯಕ್ಷ
ಜೈಭೀಮ ಮುತ್ತಗಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ
ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.

ಖಾಸತೇಶ್ವರ ಮಠದ ವಿಶ್ವನಾಥ ವಿರಕ್ತಮಠ, ಮುಸ್ಲಿಂ ಧರ್ಮಗುರು ಸೈಯದ್‌ ಶಕೀಲಹ್ಮದ್‌ ಖಾಜಿ ಸಾನ್ನಿಧ್ಯ
ವಹಿಸಿದ್ದರು. ನಿಸಾರ ಬೇಪಾರಿ, ಅಕ್ಕಮಹಾದೇವಿ ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಮಂಜೂರಲಿ ಬೇಪಾರಿ, ಪ್ರಶಾಂತ ಹಾವರಗಿ, ಜಿ.ಟಿ. ಘೋರ್ಪಡೆ, ಇಬ್ರಾಹಿಂ ಮನ್ಸೂರ, ಮಶಾಕ ಚೋರಗಸ್ತಿ, ಬಸವರಾಜ ಅಗ್ನಿ, ಶಬ್ಬೀರ್‌ ಲಾಹೋರಿ, ಇಬ್ರಾಹಿಂ ಡೋಣಿ, ಇಮಿ¤ಯಾಜ್‌ ಮೀರ್‌ ಜಮಾದಾರ, ಪ್ರಭುಗೌಡ ಪಾಟೀಲ, ಮಹಾದೇವ ರಾವಜಿ, ವಿನೋದ ದಳವಾಯಿ, ಸಾವಿತ್ರಿ ತಳವಾರ, ಜಾಕೀರ್‌ ಬಡಗಣ, ನಬಿ ಲಾಹೋರಿ, ಅಬು ಲಾಹೋರಿ, ಟಿಪ್ಪು ಕಾಳಗಿ, ಮಂಜು ಬಡಿಗೇರ, ಅಜೀಜ್‌ ಮನ್ಸೂರ, ಇಬ್ರಾಹಿಂ ಪಟ್ಟೆವಾಲೆ, ಅಜೀಜ್‌ ಮನ್ಸೂರ, ಈಶ್ವರ ಹೂಗಾರ, ಅಯೂಬ ವಠಾರ, ಶೌಕತ್‌ ಲಾಹೋರಿ, ಅನಿಲ ಗೊಟಗುಣಕಿ, ಜಗನ್ನಾಥ ಮಸರಕಲ್ಲ, ಲಾಳೇಮಶಾಕ ಜಮಾದಾರ, ಭೀಮರಾಯ ಅತ್ತೂರ, ಚಂದಪ್ಪಗೌಡ ಬಿರಾದಾರ, ಆಸೀಫ್‌ ಲಾಹೋರಿ, ಇಮಾಮ ಹುಸೇನ ಸೂಳೆಭಾವಿ, ಬಂದು ಬೇಪಾರಿ, ಮದರಶಾ ಮಕಾಂದಾರ ಇದ್ದರು. ಎಚ್‌.ವೈ. ಬಸರಿಕಟ್ಟಿ ನಿರೂಪಿಸಿದರು

ಟಾಪ್ ನ್ಯೂಸ್

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.