ಬಸವನಾಡಿನಲ್ಲಿ ಶತ ವಚನ ಸಂಗೀತ ಕ್ರಾಂತಿ
ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ಸಿಡಿಗಳು ಲೋಕಾರ್ಪಣೆಗೊಳ್ಳಲಿವೆ
Team Udayavani, Sep 9, 2021, 6:35 PM IST
ವಿಜಯಪುರ: ಏಕಕಾಲಕ್ಕೆ ನೂರು ವಚನಗಳಿಗೆ ಧ್ವನಿಮುದ್ರಣ ನಡೆಯಲಿದ್ದು, ವಚನ ಸಂಗೀತ ಕ್ಷೇತ್ರದಲ್ಲಿ ದಾಖಲೆ ಬರೆಯಲು ವೇದಿಕೆಯೊಂದು ಸೃಷ್ಟಿಯಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ “ಸಂಗೀತ ಕ್ರಾಂತಿ’ಗೆ ಬಸವಜನ್ಮಭೂಮಿ ವಿಜಯಪುರ ಸಾಕ್ಷಿಯಾಗಲಿದೆ.
ಧಾರವಾಡದ ಹಿರಿಯ ಸಂಗೀತ ಕಲಾವಿದೆ ಡಾ|ನಂದಾ ಪಾಟೀಲ ಅವರು ತಮ್ಮ ಶಿಷ್ಯ ಡಾ|ಹರೀಶ ಹೆಗಡೆ ಸಹಕಾರದಲ್ಲಿ ತಲಾ 10 ವಚನಗಳ 10 ಧ್ವನಿಸುರುಳಿಯಂತೆ 100 ವಚನಗಳಿಗೆ ರಾಗ ಸಂಯೋಜಿಸಿ, ಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಕೋವಿಡ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕುಳಿತಿದ್ದ ಡಾ|ನಂದಾ ಅವರು ತಮ್ಮ ಪತಿ ಡಾ|ಮಲ್ಲಿಕಾರ್ಜುನ ಅವರೊಡನೆ ಚರ್ಚಿಸಿ, ಶಿಷ್ಯ ಡಾ|ಹರೀಶ ಪಾಟೀಲ ಹಾಗೂ ವಿಜಯಪುರದ ಸಂಗೀತ ಕಲಾವಿದರೊಂದಿಗೆ ಗೂಗಲ್ ಮೀಟ್‌ನಲ್ಲಿ ಸಂವಾದ ನಡೆಸಿ ಈ ಯೋಜನೆಗೆ ಅಂತಿಮ ರೂಪ ಕೊಟ್ಟಿದ್ದಾರೆ.
ಐತಿಹಾಸಿಕ ದಾಖಲೆ: ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ ಶರಣರ ತಲಾ 10 ವಚನಗಳು, ಶಿವಶರಣೆಯರ 10, ಜನಪದಗಳಲ್ಲಿ ಬಸವಾದಿ ಶರಣರ 10, ಹರಿಹರ, ಚಾಮರಸ, ಕುವೆಂಪು, ಜಿ.ಎಸ್.ಶಿವರುದ್ರಪ್ಪ , ಚನ್ನವೀರ ಕಣವಿ ಕವಿಗಳಂಥ ಮೇರು ಪ್ರತಿಭೆಗಳು ಕಂಡಂತೆ ಶರಣರ ಕುರಿತ 10 ವಚನಗಳು, ಬಸವೋತ್ತರ ಯುಗದ 10 ವಚನಗಳು ಹೀಗೆ ವರ್ಗೀಕರಣ ಮಾಡಿಕೊಂಡು ವಚನಗಳು ಇದೇ ಮೊದಲ ಬಾರಿಗೆ ರಾಗದ ತೆಕ್ಕೆಗೆ ಸಿಗುತ್ತಿರುವುದೂ ಐತಿಹಾಸಿಕ ದಾಖಲೆಯೇ ಸರಿ. ಈ ನೂರು ವಚನಗಳಿಗೆ ಯುವ ಪ್ರತಿಭೆಗಳಾದ ಯಲ್ಲಾಪುರದ ಕವಿತಾ ಹೆಗಡೆ, ಡಾ|ಹರೀಶ ಹೆಗಡೆ, ಗಂಗಾವತಿಯ ವಿದ್ಯಾಶ್ರೀ ಸಾಲಿಮಠ, ಬೆಂಗಳೂರಿನ ದೀಪ್ತಿ ಭಟ್, ವಿಜಯಪುರದ ಗೀತಾ ಕುಲಕರ್ಣಿ, ಸಾಕ್ಷಿ ಹಿರೇಮಠ, ದರ್ಶನ ಮೆಳವಂಕಿ, ಗಣೇಶ ವಾರದ ಅವರು ಈ ಶತ ವಚನಗಳಿಗೆ ಧ್ವನಿಯಾಗಿದ್ದಾರೆ.
ನಾಲತವಾಡದ ಯುವಪ್ರತಿಭೆ ವೀರೇಶ ವಾಲಿ ಸಾರಥ್ಯದ ಸ್ಪಾಟ್‌ಲೆçಟ್ ಸಂಗೀತ ಸಂಸ್ಥೆಯಲ್ಲಿ ನೂರು ವಚನಗಳಿಗೆ ಧ್ವನಿಮುದ್ರಣ ನಡೆದಿದ್ದು, ಬಸವನಬಾಗೇವಾಡಿ ದಿವ್ಯಾಂಗ ಕಲಾವಿದ ಶ್ರೀಮಂತ ಅವಟಿ ಹಿನೆ °ಲೆ-ವಾದ್ಯ ಸಂಯೋಜನೆ ಮಾಡಿದ್ದಾರೆ.
ಬಿಡುಗಡೆ ಯಾವಾಗ?: ಡಾ|ಮಲ್ಲಿಕಾರ್ಜುನ ಪಾಟೀಲ ಅವರು ಡಾ|ನಂದಾ ಪಾಟೀಲ ಸಂಗೀತ ಅಕಾಡೆಮಿ ಮೂಲಕ ಸ್ವಯಂ ಸುಮಾರು 3 ಲಕ್ಷ ರೂ. ಹಣ ತೊಡಗಿಸಿ ಈ ಐತಿಹಾಸಿಕ ದಾಖಲೆ ಯೋಜನೆ ಅನುಷ್ಠಾನಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಯುವ ಪ್ರತಿಭೆಗಳ ಈ10ಧ್ವನಿ ಸುರುಳಿಗಳಲ್ಲದೇ ಡಾ|ನಂದಾ ಪಾಟೀಲ ಅವರ ವಚನ, ಹಿಂದೂಸ್ತಾನಿ ಸೇರಿದಂತೆ ಇನ್ನೂ ಮೂರು ಧ್ವನಿ ಸುರುಗಳಿಗಳೂ ಇದೇ ವೇಳೆ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.
ಜನವರಿ ತಿಂಗಳಲ್ಲಿ ಕುಡಿಯೊಡೆದ ಧ್ವನಿಮುದ್ರಣ ಯೋಜನೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಲೋಪ ತಿದ್ದುವ ಕಾರ್ಯ ನಡೆದಿದೆ. ಅಂದುಕೊಂಡಂತಾದರೆ ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ಸಿಡಿಗಳು ಲೋಕಾರ್ಪಣೆಗೊಳ್ಳಲಿವೆ.
ಸಂಗೀತ ದಿಗ್ಗಜರ 5 ಕೃತಿಗಳ ಲೋಕಾರ್ಪಣೆ
ಇದೇ ಸಂದರ್ಭದಲ್ಲಿ ಸಂಗೀತಕ್ಷೇತ್ರದಲ್ಲಿಕನ್ನಡ ನಾಡಿನಹೆಸರನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಭಾರತರತ್ನ ಪಂ|ಭೀಮಸೇನ್ ಜೋಶಿ, ಪಂ|ಮಲ್ಲಿಕಾರ್ಜುನ ಮನ್ಸೂರ, ಡಾ|ಗಂಗೂಬಾಯಿ ಹಾನಗಲ್, ಬಾಳಪ್ಪಹುಕ್ಕೇರಿ, ಪಂ|ಬಸವರಾಜ ರಾಜಗುರು ಅವರ ಕುರಿತಾದ 5 ಕೃತಿಗಳು ಲೋಕಾರ್ಪಣೆ ಗೊಳ್ಳಲಿವೆ.
ನೂರು ವಚನಗಳಿಗೆ ರಾಗ ಸಂಯೋಜಿಸಿ, ಧ್ವನಿಮುದ್ರಿಸಿ, ಏಕಕಾಲಕ್ಕೆಹೊರತರುವಯೋಜನೆ ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತಿರುವುದು ನಮ್ಮ ಸೌಭಾಗ್ಯ. ನಮ್ಮ ಮೇಲೆ ವಿಶ್ವಾಸ ಇರಿಸಿ ಡಾ|ಪಾಟೀಲ ದಂಪತಿ ಅವಕಾಶ ನೀಡಿರುವುದು ನಮ್ಮ ಪುಣ್ಯ.
ವೀರೇಶ ವಾಲಿ, ಸ್ಪಾಟ್‌ಲೈಟ್ ಸ್ಟುಡಿಯೋ, ವಿಜಯಪುರ
ನಮ್ಮಗುರುಗಳ ಮಾರ್ಗದರ್ಶನದಲ್ಲಿ ಎಲ್ಲೂ ಹಾಡದ ನೂರು ವಚನಗಳಿಗೆ ರಾಗ ಸಂಯೋಜಿಸುವ ಮಹತ್ವದ ಕಾರ್ಯದಲ್ಲಿ ನನಗೆಅವಕಾಶ ಸಿಕ್ಕಿದ್ದು, ನನ್ನ ಮೇಲೆ ಅವರಿಗಿರುವ ವಿಶ್ವಾಸಕ್ಕೆ ಸಾಕ್ಷಿ. ಡಾ|ನಂದಾ,ಡಾ|ಮಲ್ಲಿಕಾರ್ಜುನದಂಪತಿ ಪರಿಶ್ರಮಕ್ಕೆಬೆಲೆ ಕಟ್ಟಲಾಗದು.
ಡಾ| ಹರೀಶ ಹೆಗಡೆ,
ಯಲ್ಲಾಪುರ, ಶತ ವಚನಗಳ ರಾಗ ಸಂಯೋಜಕರು
ನನ್ನ ಧ್ವನಿ ಹಾಡಿಗೆ ಸಹಕರಿಸದ ಕಾರಣಯುವ ಪ್ರತಿಭೆಗಳ ಧ್ವನಿಗಳ ಮೂಲಕ ಶರಣರ ವಚನಗಳನ್ನು ಮನೆ-ಮನಗಳಿಗೆ ತಲುಪಿಸುವಯೋಚನೆ ಮಾಡಿದ್ದೆ. ನನ್ನ ಪತಿ ನೀಡಿದ ಪ್ರೋತ್ಸಾಹ, ಕಲಾವಿದರು ನೀಡಿದ ಬೆಂಬಲ, ಸಹಕಾರದಿಂದ ಇದು ಸಾಧ್ಯವಾಗಿದೆ.
ಡಾ|ನಂದಾ ಪಾಟೀಲ, ಶತ ವಚನಗಳ ಸಂಗೀತ ಸಂಯೋಜಕಿ, ಧಾರವಾಡ
ಹೊಸದಾಗಿ ಬೆಳಕುಕಾಣದ ವಚನಗಳಿಗೆ ರಾಗ ಸಂಯೋಜಿಸಿ ಹೊರತರುವ ಪ್ರಯತ್ನಗಳೇ ನಡೆಯುತ್ತಿಲ್ಲ. ಹೀಗಾಗಿ ಸಂಗೀತದಯುವ ಪ್ರತಿಭೆಗಳಲ್ಲಿ ಸೃಜನಶೀಲತೆ ಮೂಡಿಸಲು ಈ ಯೋಜನೆಗೆ ಮುಂದಾಗಿದ್ದೇನೆ. ಜನರಿಗೆ ಮೆಚ್ಚುಗೆಯಾದರೆ ಸಾಕು.
ಡಾ| ಮಲ್ಲಿಕಾರ್ಜುನ ಪಾಟೀಲ, ಶತ ವಚನಗಳಯೋಜನೆ ನಿರ್ಮಾಪಕ
*ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.