ವೈದ್ಯಕೀಯ ವರದಿ ಬರುವ ಮುನ್ನವೇ ಶಂಕಿತರು ಮನೆಗೆ
Team Udayavani, Jun 1, 2020, 6:14 AM IST
ಆಲಮೇಲ: ಸರ್ಕಾರ ಬೇರೆ ರಾಜ್ಯದಿಂದ ಬಂದವರನ್ನು 14 ದಿಗಳ ಕ್ವಾರಂಟೈನ್ ಬದಲಿಗೆ 7 ದಿನಗಳ ಸಡಲಿಕೆ ಮಾಡಿದೆ. 7 ದಿನ ಪೂರೈಸಿದವರನ್ನು ವರದಿ ಬರುವ ಮೊದಲೆ ಮನೆಗೆ ಕಳುಹಿಸಿದ್ದು ಮನೆಗೆ ಹೋದ ಒಂದೆರಡು ದಿನಕ್ಕೆ ಪಾಸಿಟಿವ್ ವರದಿ ಬಂದ ಪರಿಣಾಮ ಅಕ್ಕ ಪಕ್ಕದ ಜನರಲ್ಲಿ ಭಯ ಶುರವಾಗಿದೆ.
ಮಹಾರಾಷ್ಟ್ರದಿಂದ ಬಂದ ವಲಸಿಗರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಅವರ ವರದಿ ಬರುವ ಮುನ್ನ ಸರ್ಕಾರದ ಆದೇಶದಂತೆ 7 ದಿನ ಕ್ವಾರಂಟೈನ್ ಮುಗಿದವರನ್ನು ಮನೆಗೆ ಕಳುಹಿಸಿದ ಪರಿಣಾಮ ಅಧಿಕಾರಿಗಳು ತಪ್ಪಿತಸ್ಥರಾಗುತ್ತಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದಿದೆ, ತನಗೆ ಯಾವುದೆ ಸಮಸ್ಯೆ ಇಲ್ಲ ಎಂದುಕೊಂಡು ಸೊಂಕಿತ ವ್ಯಕ್ತಿಗಳೂ ಎಲ್ಲಂದರಲ್ಲಿ ತಿರುಗಾಡಿದ್ದಾರೆ. ವರದಿ ಬಂದ ಬಳಿಕ ಸೋಂಕಿತರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಕರೆದೊಯ್ದರೆ, ಇತ್ತ ಆತನ ಜೊತೆ ಸಂಪರ್ಕದಲ್ಲಿದ್ದವರು ಆತಂಕಗೊಂಡ ಘಟನೆ ಆಲಮೇಲ, ಮದನಹಳ್ಳಿ, ಕೋರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಆರೋಗ್ಯ ಇಲಾಖೆ ವರದಿ ಬಂದ ಬಳಿಕ ಆಲಮೇಲದಲ್ಲಿ 1, ಮದನಹಳ್ಳಿಯಲ್ಲಿ 4, ಕೋರಹಳ್ಳಿ ಗ್ರಾಮದಲ್ಲಿ 3 ಜನ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ಪ್ರಾಥಮಿಕ ಸಂಪರ್ಕ ಹೊಂದಿದ ಕುಟುಂಬಸ್ಥರನ್ನು ಸಿಂದಗಿ ಆಸ್ಪತ್ರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ಇಡಲಾಗಿದೆ. ಮದನಹಳ್ಳಿ ಗ್ರಾಮಲ್ಲಿ ತಲಾ ಇಬ್ಬರು ಮಹಿಳೆಯರು ಮತ್ತು ಪುರುಷರು ಒಂದೆ ಕುಟುಂಬದವರಾಗಿದ್ದಾರೆ. ಕೋರಹಳ್ಳಿ ಗ್ರಾಮದ ಮೂರು ಜನರಲ್ಲಿ ಓರ್ವ ಪುರುಷ, ಇಬ್ಬರು ಮಹಿಳೆಯರು ಒಂದೆ ಕುಟುಂಬದವರು ಎಂದು ತಿಳಿದು ಬಂದಿದೆ.
ಮದನಹಳ್ಳಿಯ ಸೊಂಕಿತ ವ್ಯಕ್ತಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ. ಕಡಣಿ ಗ್ರಾಪಂಗೆ, ಆಲಮೇಲ ಬ್ಯಾಂಕ್‌ಗೆ ಹೋಗಿ ಬಂದಿರುವ ಮಾಹಿತಿ ಇದೆ. ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದ ಕೆಲವು ಯುವಕರು ಆತಂಕದಿಂದ ಮನೆ ಬಿಟ್ಟು ಹೊಲಗಳಿಗೆ ಹೋಗಿ ನೆಲೆಸಿದ್ದಾರೆ ಎಂದು ಮದನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.