ಆಲಮಟ್ಟಿಗೆ ಹರಿದು ಬಂತು ಪ್ರವಾಸಿಗರ ದಂಡು


Team Udayavani, Jan 16, 2018, 1:30 PM IST

vij-5.jpg

ಆಲಮಟ್ಟಿ: ವಿಜಯಪುರದ ಸಿದ್ದೇಶ್ವರ ಜಾತ್ರೆ ಹಾಗೂ ಕೂಡಲಸಂಗಮದಲ್ಲಿ ನಡೆದ ಶರಣ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಕಿ.ಮೀ.ಗಳ ದೂರದಿಂದ ಆಗಮಿಸಿದ್ದ ಭಕ್ತರು ಸೋಮವಾರ ತಂಡೋಪತಂಡವಾಗಿ
ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ವಿವಿಧ ಉದ್ಯಾನಗಳಿಗೆ ಭೇಟಿ ಸಂಭ್ರಮಿಸಿದರು.

ದಕ್ಷಿಣಾಯನ ಮುಗಿದು ಉತ್ತರಾಯಣ ಪ್ರಾರಂಭದ ಸೂಚಿಯಾದ ಮಕರ ಸಂಕ್ರಮಣದಂದು ವಿಜಯಪುರದ
ಸಿದ್ದೇಶ್ವರಜಾತ್ರೆ, ಕೂಡಲಸಂಗಮದ ಶರಣಮೇಳ, ಬನಶಂಕರಿದೇವಿ ಜಾತ್ರೆ ಹಾಗೂ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ ಸಾವಿರಾರು ಭಕ್ತರು ಆಲಮಟ್ಟಿಗೆ ಆಗಮಿಸಿದ್ದರು. ಮೊಘಲ್‌ ಉದ್ಯಾನದಲ್ಲಿ ಸಾಯಂಕಾಲ ಪ್ರಾರಂಭವಾಗುವ ವಿವಿಧ ಬಗೆ ಕಾರಂಜಿಗಳು ಮತ್ತು ಸಂಜೆ ನಡೆಯುವ ಸಂಗೀತ ನೃತ್ಯ ಕಾರಂಜಿಯನ್ನು ವೀಕ್ಷಿಸಿ ಆನಂದಪರವಶರಾಗಿ ಅವುಗಳ ಬಗ್ಗೆಯೇ ಚರ್ಚೆ ಮಾಡುತ್ತಾ ಸಾಗಿದರು. 

ರವಿವಾರ ಹಾಗೂ ಸೋಮವಾರ ಮಕರ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಆಲಮಟ್ಟಿಗೆ ಆಗಮಿಸಿದ್ದ ಭಕ್ತರ ದಂಡು ಇಲ್ಲಿರುವ ಎಲ್ಲ ಉದ್ಯಾನಗಳಿಗೆ ಭೇಟಿ ನೀಡಿದರು. ಉದ್ಯಾನಗಳಲ್ಲಿ ಕರಕುಶಲ ಕಲಾವಿದರಿಂದ ನಿರ್ಮಾಣಗೊಂಡಿರುವ ವಾಸ್ತವ ಎನ್ನುವಷ್ಟರ ಮಟ್ಟಿಗೆ ಪಿಒಪಿಯಿಂದ ನಿರ್ಮಾಣವಾದ ಶಿಲಾಕೃತಿ ವೀಕ್ಷಿಸಿದರು.

ವಿಶೇಷವಾಗಿ ತಯಾರಿಸಲಾಗಿರುವ ಸಾಕುಪ್ರಾಣಿ, ಪಕ್ಷಿ, ಗ್ರಾಮೀಣ ಜಾತ್ರೆಗಳ ಸೊಗಡು, ಕಾಡು ಪ್ರಾಣಿಗಳು, ಜಲಚರಗಳು, ಸರಿಸೃಪಗಳು, ಗೋಪಾಲಕೃಷ್ಣನ ಜೀವನಚರಿತ್ರೆ ಸಾರುವ ವಿವಿಧ ದೃಶ್ಯಗಳು, ಅಶ್ವಮೇಧಯಾಗದ ಕುದುರೆ ಕಟ್ಟಿದ ಲವ-ಕುಶರು ನಂತರ ಹನುಮಂತ ಹಾಗೂ ಲವಕುಶರ ನಡುವೆ ನಡೆಯುವ ಯುದ್ಧದ ಸನ್ನಿವೇಶ, ಶತೃಘ್ನ ಹಾಗೂ ಲವ-ಕುಶರ ನಡುವೆ ನಡೆದ ಯುದ್ಧ ಸನ್ನಿವೇಶ, ಅಲುಗಾಡುವ ಹಸಿರುಗೋಡೆ ಹೀಗೆ ಹಲವಾರು ಸನ್ನಿವೇಶಗಳನ್ನು ಕಣ್ತುಂಬಿಕೊಂಡರು.
 
ಮಕರ ಸಂಕ್ರಮಣದ ದಿನವಾದ ಜ. 14ರಂದು ರಾಕ್‌ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಂದ 1,05,750ರೂ., ಗೋಪಾಲಕೃಷ್ಣ ಉದ್ಯಾನದಿಂದ 21,025 ರೂ., ಲವಕುಶ ಉದ್ಯಾನಗಳಿಗೆ 13,600 ರೂ. ಸೇರಿ 1,40,375 ರೂ. ಪ್ರವೇಶ ಶುಲ್ಕ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಜಮಾ ಆಗಿದೆ. ಒಟ್ಟಾರೆ  ಎಲ್ಲ ಉದ್ಯಾನಗಳಿಗೆ 13,471 ದೊಡ್ಡವರು
ಹಾಗೂ 944 ಮಕ್ಕಳು ಭೇಟಿ ನೀಡಿದ್ದಾರೆ. ಸಂಜೆ ನಡೆದ ಸಂಗೀತ ನೃತ್ಯ ಕಾರಂಜಿಗೆ ಭೇಟಿ ನೀಡಿದ ಪ್ರವಾಸಿಗರಿಂದ 87 ಸಾವಿರ ರೂ. ಕೆಬಿಜೆಎನ್‌ ಎಲ್‌ಗೆ ಜಮಾ ಆಗಿದೆ.
 
ಕಳೆದ ವರ್ಷ ಜ. 14ರಂದು ವಿವಿಧ ಉದ್ಯಾನಗಳಿಗೆ ಸುಮಾರು 17,781 ಜನ ಭೇಟಿ ನೀಡಿದ್ದು 1,78,565 ರೂ. ಹಾಗೂ ಸಂಜೆ ನಡೆದ ಸಂಗೀತ ನೃತ್ಯ ಕಾರಂಜಿಯಿಂದ 45 ಸಾರ ಒಂದೇ ಪ್ರದರ್ಶನದಿಂದ ಜಮಾ ಆಗಿತ್ತು. ಎರಡನೇ ಪ್ರದರ್ಶನ ಆರಂಭದಲ್ಲಿ ಜನಸಾಗರವೇ ಹರಿದು ಬಂದಿದ್ದರಿಂದ ಪೊಲೀಸರ ನಿಯಂತ್ರಣ ತಪ್ಪಿದ್ದರಿಂದ ಎರಡನೇ ಪ್ರದರ್ಶನವು ಪ್ರವೇಶ ಮುಕ್ತವಾಗಿ ಪ್ರದರ್ಶನ ನಡೆದಿತ್ತು. ಆದರೆ ಈ ಬಾರಿ ಟಿಕೆಟ್‌ ನೀಡುವ ಸ್ಥಳ ಬದಲಾವಣೆ ಮಾಡಿದ್ದರಿಂದ ಯಾವುದೇ ಗೊಂದಲವಾಗಲಿಲ್ಲ.

ರವಿವಾರವೂ ಜನದಟ್ಟಣೆ ಹೆಚ್ಚಾಗಿದ್ದು ರಾಕ್‌ ಉದ್ಯಾನ, ಗೋಪಾಲಕೃಷ್ಣ ಹಾಗೂ ಲವಕುಶ ಉದ್ಯಾನಗಳಿಂದ 54,610 ರೂ. ಜಮಾ ಆಗಿದ್ದು ಇನ್ನುಳಿದಂತೆ ವಾಹನ ನಿಲುಗಡೆಯನ್ನು ಗುತ್ತಿಗೆ ನೀಡಲಾಗಿರುವುದರಿಂದ ಇದರಿಂದಲೂ ಲಕ್ಷಾಂತರ ರೂ. ಜಮಾ ಆಗಿದೆ. 

ಮೊಘಲ್‌, ಇಟಾಲಿಯನ್‌, ಫ್ರೆಂಚ್‌ ಸೇರಿದಂತೆ ಕೆಲ ಉದ್ಯಾನಗಳಿಗೆ ಪ್ರವೇಶ ದರ ನಿಗದಿಪಡಿಸಿಲ್ಲ. ಅವುಗಳಿಗೆ ರವಿವಾರ ಹಾಗೂ ಸೋಮವಾರ ಭದ್ರತೆ ಹಿನ್ನೆಲೆಯಲ್ಲಿ ಸಾಯಂಕಾಲದವರೆಗೆ ಸಾರ್ವಜನಿಕ ಪ್ರವೇಶ ನಿರಾಕರಿಸಲಾಗಿತ್ತು. ಸಂಜೆಯಾಗುತ್ತಲೇ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಇದರಿಂದ ಸಂಗೀತ ನೃತ್ಯ
ಕಾರಂಜಿಗೆ ತೆರಳಲು ಅನುಕೂಲ ಕಲ್ಪಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷಕ್ಕಿಂತ ಆಲಮಟ್ಟಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದರು. 

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.