ಜೋಪಡಿಯಲ್ಲಿ ವಿವಿ ಪ್ಯಾಟ್ ಯಂತ್ರ ಪತ್ತೆ
Team Udayavani, May 21, 2018, 6:55 AM IST
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರ
ಜೋಪಡಿಯಲ್ಲಿ ವಿವಿ ಪ್ಯಾಟ್ ಯಂತ್ರಗಳು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದರಿ ಯಂತ್ರಗಳು ಯಾವುದಕ್ಕೆ ಬಳಸುವುದು ಎಂಬುದು ಗೊತ್ತಿಲ್ಲದೇ ಕಾರ್ಮಿಕರು ತಂದಿರಬಹುದು ಎನ್ನಲಾಗಿದ್ದು, ಬಳಿಕ ಇವು ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಮತ ಖಾತ್ರಿ ರಸೀದಿ ನೀಡುವ ಯಂತ್ರಗಳು ಎಂಬುದು ತಿಳಿದಿದೆ.
ಸಾಕಷ್ಟು ಭದ್ರತೆಯಲ್ಲಿ ಇರಬೇಕಾದ ಹಾಗೂ ಸಶಸ್ತ್ರ ಕಾವಲಿನಲ್ಲಿದ್ದ ಈ ಯಂತ್ರಗಳು ಹೀಗೆ ಬೀದಿ ಬದಿಯಲ್ಲಿ
ಬೀಳಲು ಕಾರಣವೇನು, ಇವು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರಗಳು, ಇವುಗಳನ್ನು ಎಸೆದವರು ಯಾರು
ಎಂಬೆಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ವಿಷಯ ತಿಳಿಯುತ್ತಿದ್ದಂತೆ ಬಸವನಬಾಗೇವಾಡಿ ಕ್ಷೇತ್ರದ ಚುನಾವಣಾ ಧಿಕಾರಿ ದುರುಗೇಶ ರುದ್ರಾಕ್ಷಿ, ವಿಜಯಪುರ ಉಪ ವಿಭಾಗಾಧಿ ಕಾರಿ, ಬಸವನಬಾಗೇವಾಡಿ ತಹಶೀಲ್ದಾರ್ ಎಚ್.ಎಸ್. ಸಂಪಗಾಂವಿ, ಮನಗೂಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.