ತೋಟದವಸ್ತಿ ಮನೆಗಳ್ಳತನ :18.36 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಮೂವರು ಆರೋಪಿಗಳ ಬಂಧನ
Team Udayavani, Dec 13, 2022, 2:41 PM IST
ವಿಜಯಪುರ: ತೋಟದ ವಸ್ತಿಯ ಒಂಟಿ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 18.36 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಈಚೆಗೆ ತೋಟದ ವಸ್ತಿ ಮನೆಗಳ ಕಳ್ಳತನಗಳು ಹೆಚ್ವುತ್ತಿದ್ದು, ತಿಕೋಟಾ, ಬಬಲೇಶ್ವರ, ಹೋರ್ತಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಎಚ್.ಡಿ. ಆನಂದಕುಮಾರ, ಡಿಎಸ್ಪಿ ಸಿದ್ಧೇಶ್ವರ ಕೃಷ್ಣಪುರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು. ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಪಿಎಸೈಗಳಾದ ಬಿ.ಎ..ತಿಪರಡ್ಡಿ, ಆರ್.ಡಿ.ಕುಸೂರು ಹಾಗೂ ಇತರೆ ಪೊಲೀಸರಿದ್ದ ತನಿಖಾ ತಂಡ ಕೊನೆಗೂ ಮೂವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಿಂದಗಿ ಕಲ್ಯಾಣ ನಗರದ ಶ್ರೀಕಾಂತ ಬಡಿಗೇರ, ಹಿಟ್ನಳ್ಳಿ ಜೈಭೀಮ ವಿಠಲ ಪಡಕೋಟಿ, ಆಕಾಶ ವಿಠೋವಾ ಕಲ್ಲವ್ಬಗೋಳ ಎಂದು ಗುರುತಿಸಲಾಗಿದೆ.
ಆರೋಪಿಗಳು ಬಬಲೇಶ್ವರ ತಾಲೂಕ ಕಾರಜೋಳ ಬಳಿ ಸಂಶಯಾಸ್ಪದ ರೀತಿಯಲ್ಲಿ ಕಾರಿನಲ್ಲಿ ಓಡಾಡುತ್ತಿದ್ದಾಗ ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.
ಬಂಧಿತರಿಂದ 12.50 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನಾಭರಣ, 36 ಸಾವಿರ ರೂ. ಮೌಲ್ಯದ 600 ಗ್ರಾಂ ಬೆಳ್ಳಿಯ ವಸ್ತುಗಳು, ಕೃತ್ಯಕ್ಕೆ ಬಳಸಿದ 5.50 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ 18.36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆನಂದಕುಮಾರ ಮಾಧ್ಯಮ ಗೋಷ್ಠಿಯಲ್ಲಿ ವಿವರ ನೀಡಿದರು.
ಬೈಕ್ ಕಳ್ಳರ ಬಂಧನ : ಇದಲ್ಲದೆ ಡಿಎಸ್ಪಿ ಸಿದ್ಧೇಶ್ವರ ಕೃಷ್ಣಾಪುರ ನೇತೃತ್ವದಲ್ಲೇ ಗೋಲಗುಂಬಜ ಸಿಪಿಐ ವಿಜಯಮಹಾಂತೇಶ ಮಠಪತಿ, ಪಿಎಸೈಗಳಾದ ಸೀತಾರಾಮ, ಅರವಿಂದ ಅಂಗಡಿ ಸೇರಿದಂತೆ ಇತರೆ ಪೊಲೀಸರ ತಂಡ ಬೈಕ್ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರಂಗಿನ ಮಸೀದಿ ಪರಿಸರ ನಿವಾದಿ ನಜೀರ ಸಾಹೇಬಲಾಲ್ ಜಾತಗಾರ, ಇಂಡಿ ರಸ್ತೆಯ ಸುಣ್ಣದ ಭಟ್ಟಿ ಪರಿಸರದ ನಿವಾಸಿ ಅಭಿನಾಶ ಮದರಸಾಬ್ ವಜ್ಜಣ್ಣವರ ಎಂದು ಗುರುತಿಸಲಾಗಿದೆ. ಬಂಧಿತರಿಂದ 3.60 ಲಕ್ಷ ರೂ. ಮೌಲ್ಯದ 7 ಬೈಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.