ಕಳ್ಳಭಟ್ಟಿ ಮಾರುತ್ತಿದ್ದ ಮೂವರ ಸೆರೆ
Team Udayavani, Feb 13, 2022, 6:11 PM IST
ಕೊಲ್ಹಾರ: ತಾಲೂಕಿನ ತೆಲಗಿ ತಾಂಡಾದಲ್ಲಿ ಅಬಕಾರಿ ದಾಳಿ ಮಾಡಲಾಗಿದ್ದು ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರೆನ್ನಲಾದ ಮೂವರು ಮಹಿಳೆಯರನ್ನು ಬಂಧಿಸಿ 31 ಲೀ. ಕಳ್ಳಭಟ್ಟಿ ಜಪ್ತಿ ಮಾಡಲಾಗಿದೆ.
ತೆಲಗಿ ತಾಂಡಾದ ಶಾಂತಾಬಾಯಿ ಶಿವಪ್ಪ ನಾಯಕ, ರೇಣುಕಾ ಚನ್ನಪ್ಪ ರಾಠೊಡ, ಲಲಿತಾಬಾಯಿ ಗಂಗಾರಾಮ ಚವ್ಹಾಣ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೋರ್ವ ಆರೋಪಿ ನೀಲಪ್ಪ ಗುಂಡಪ್ಪ ರಾಠೊಡ ಪರಾರಿಯಾಗಿದ್ದಾನೆ. ಬಕಾರಿ ಉಪ ಆಯುಕ್ತ ಅಯಿದಾ ಆಪ್ರೀನ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಜಿ.ಎಸ್. ಪಾಟೀಲ, ಮಹಾದೇವ ಪೂಜಾರಿ, ಅಬಕಾರಿ ಉಪ ನಿರೀಕ್ಷಕರಾದ ಎಂ.ಬಿ. ಹೊಸಮನಿ, ಪ್ರಕಾಶ ಜಾಧವ ಅವರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ದಾಳಿಯಲ್ಲಿ ಸುಲೋಚನಾ ಲಸ್ಕರಿ, ಪ್ರಭಾಕರ ಬನಸೋಡೆ, ಅನಿಲ ಕರ್ಜಗಿ, ಈರಣ್ಣ ಹಟ್ಟಿ, ಶಿವಮಗಮ ಕಬಾಡೆ, ಅಮೀರ ಚಪ್ಪರಬಂದ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.