ರಾಜ್ಯದ ಸಮಗ್ರ ಅಭಿವೃದ್ಧಿಗೆ ಟಿಪ್ಪು ಕೊಡುಗೆ ಅಪಾರ: ಚೌರ
Team Udayavani, Nov 11, 2018, 2:46 PM IST
ಬಸವನಬಾಗೇವಾಡಿ: ಬ್ರಿಟಿಷ್‌ರ ವಿರುದ್ಧ ಹೋರಾಟ ಮಾಡುವುದರ ಜೊತೆಗೆ ತನ್ನ ರಾಜ್ಯದ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಹಾಗೂ ನೀರಾವರಿ ಯೋಜನೆ ಸೇರಿದಂತೆ ಅನೇಕ ಕೆಲಸ ಕಾರ್ಯದಲ್ಲಿ ಟಿಪ್ಪು ಸುಲ್ತಾನ್ ಕೊಡುಗೆ ಅಪಾರವಾಗಿದೆ ಎಂದು ನ್ಯಾಯವಾದಿ, ಸಾಹಿತಿ ರಾಜಶೇಖರ ಚೌರ ಹೇಳಿದರು.
ಶನಿವಾರ ಪಟ್ಟಣದ ತೆಲಗಿ ರಸ್ತೆಯ ನಂದಿ ಮಾರುಕಟ್ಟೆ ಬಳಿ ಇರುವ ಡಾ| ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬ್ರಿಟಿಷ್‌ರಿಗೆ ಕಪ್ಪು ಕಾಣಿಕೆ ನೀಡದೆ ಅವರ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯಾ ದೊರಕಿಸಿಕೊಡುವಲ್ಲಿ ಟಿಪ್ಪು ಸುಲ್ತಾನ್ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅನೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗಾಗಿ ಪ್ರತಿವರ್ಷ ಅನುದಾನ ನೀಡುವ ಮೂಲಕ ಅನೇಕ ಹಿಂದೂ ದೇವಾಲಯಗಳ ಜಿರ್ಣೋದ್ಧಾರ ಮಾಡಿದ
ಕೀರ್ತಿ ಟಿಪ್ಪು ಸುಲ್ತಾನ್ ಅವರಿಗೆ ಸಲ್ಲುತ್ತದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಟಿಪ್ಪು ಸುಲ್ತಾನ್ ಅವರ ಇತಿಹಾಸ ಮರೆ ಮಾಚಿ ಅವರೊಬ್ಬ ಹಿಂದೂ ವಿರೋಧಿ ದೇಶದ್ರೋಹಿ ಹಾಗೂ ಮತಾಂತರ ಎಂದು ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ತಹಶೀಲ್ದಾರ್ ಎಂ.ಎನ್. ಚೋರಸಗ್ತಿ ಮಾತನಾಡಿ, ಸಮಾಜಕ್ಕೆ ಉತ್ತಮ ಕೆಲಸ ಕಾರ್ಯ ಹಾಗೂ ತಮ್ಮದೆಯಾದ ಕೊಡುಗೆ ನೀಡಿದ ಅನೇಕ ಮಹಾತ್ಮರ ಜಯಂತಿಯನ್ನು ರಾಜ್ಯ ಸರಕಾರ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು.
ಮಹಾತ್ಮರನ್ನು ನಾವು ನೀವುಗಳು ಕೇವಲ ಒಂದು ಜಾತಿ ಮತ್ತು ಕೋಮಿಗೆ ಮೀಸಲಾಗಬಾರದು. ಅವರ ಆದರ್ಶ ತತ್ವಗಳು ಎಲ್ಲ ಜನರಿಗೂ ತಲುಪಬೇಕು. ಮಹಾಪುರುಷರ ಆದರ್ಶ ತತ್ವಗಳು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಸಮಾಜದ ಪರಿರ್ವತನೆಗೆ ಎಲ್ಲರೂ ದಾರಿದೀಪವಾಗಬೇಕು. ಅಂದಾಗ ಮಾತ್ರ ಅವರಿಗೆ ನಾವು ನೀವು ನೀಡಿವ ಗೌರವವಾಗುತ್ತದೆ. ಆ ದೃಷ್ಟಿಕೋನ ಇಟ್ಟುಕೊಂಡು ರಾಜ್ಯಸರಕಾರ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಿಸಾರ್ ಬೈರವಾಡಗಿ, ನಿಸಾರ್ ಚೌಧರಿ, ಖಾಚೆಸಾಬ ಚಳ್ಳಿಗಿಡದ, ಖಾಜಂಬರ ನಧಾಪ್, ಅಶೋಕ ಚಲವಾದಿ, ಆರ್.ಬಿ. ಹಳ್ಳಿ, ಅರವಿಂದ ಸಾಲವಾಡಿ, ತಮವ್ಣುಕಾನಾಕಡ್ಡಿ, ಖಾಜಂಬರ ಚಳ್ಳಿಗಿಡದ,
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ, ಹಿಂದುಳಿದ ವರ್ಗದ ಇಲಾಖೆ ಅಧಿಕಾರಿ ಎಸ್.ಎ.ಕುಂಟೊಜಿ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಎಸ್.ಎ. ಜಮಾದರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಹೇಶ ಹತ್ತರಕಾಳ ಸ್ವಾಗತಿಸಿದರು. ಸಿ.ಜಿ. ಬಿರಾದಾರ ನಿರೂಪಿಸಿದರು. ಎಸ್.ಬಿ. ಪೊಲೀಸ್ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.