ಬಯಲು ಶೌಚಮುಕ್ತ ದಾಖಲೆಗಷ್ಟೇ ಸೀಮಿತ
Team Udayavani, Dec 10, 2021, 6:20 PM IST
ಇಂಡಿ: ಸರಕಾರಿ ವೆಬ್‌ಸೈಟ್ ಪ್ರಕಾರ ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಸ್ವತ್ಛ ಭಾರತ್ ಮಿಷನ್ ಮೂಲಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಉಪಯೋಗ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲ.
ಶೌಚಾಲಯ ನಿರ್ಮಾಣದ ಬಹುದೊಡ್ಡ ಆಂದೋಲನಕ್ಕೆ ದೇಶದ ಪ್ರಧಾನಮಂತ್ರಿ ಮೋದಿ ಅವರು ಚಾಲನೆ ನೀಡಿ ಕೆಲವು ವರ್ಷಗಳೇ ಕಳೆದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇನ್ನೂ ಅನುಷ್ಠಾನ ಆಗಿಲ್ಲ ಎಂಬುವುದಕ್ಕೆ ಇಂಡಿ ತಾಲೂಕಿನ ಕೆಲವೊಂದು ಗ್ರಾಮಗಳೇ ಸಾಕ್ಷಿ ಆಗಿವೆ.
ತಾಲೂಕಿನಲ್ಲಿ 2014ರಿಂದ ಇಲ್ಲಿಯವರೆಗೆ 2021 ನವೆಂಬರ್ ಅಂತ್ಯದವರೆಗೆ ಝಳಕಿ ಗ್ರಾಮದಲ್ಲಿ 882, ಅಂಜುಟಗಿ ಗ್ರಾಮದಲ್ಲಿ 1282, ಬಸನಾಳ 1011, ಕೊಳುರಗಿ 833, ಪಡನೂರ 797, ಅಗರಖೇಡ 603, ಅರ್ಥಗಾ 1389, ತೆನಿಹಳ್ಳಿ 1130, ಭತಗುಣಕಿ 1016, ಬೆನಕನಹಳ್ಳಿ 1021, ಹಂಹಗಿ 829, ಬಬಲಾದ 1022, ಹೊರ್ತಿ 922, ಹಡಲಸಂಗ 631, ರೂಗಿ 569, ಆಳೂರ 755, ಶಿರಶ್ಯಾಡ 648, ಲಚ್ಯಾಣ 646, ಸಾಲೋಟಗಿ 932, ನಾದ ಕೆ.ಡಿ. 1003, ಬಳೊಳ್ಳಿ 912, ಮಿರಗಿ 814, ಮಸಳಿ ಬಿ.ಕೆ. 1108, ಹಿರೇಬೇವನೂರ 855, ಅಹಿರಸಂಗ 719, ತಾಂಬಾ 1120, ಖೇಡಗಿ 674, ಲಾಳಸಂಗಿ 853, ನಿಂಬಾಳ ಕೆ.ಡಿ 1115, ಚಿಕ್ಕಬೇವನೂರ 748, ತಡವಲಗಾ 1272, ಅರ್ಜುಣಗಿ 238, ಚವಡಿಹಾಳ 456, ಗುಬೇವಾಡ 406, ಹಂಜಗಿ 372, ಇಂಗಳಗಿ 610, ಕಪನಿಂಬರಗಿ 364, ಸಂಗೋಗಿ 671 ಸೇರಿ ತಾಲೂಕಿನಾದ್ಯಂತ ಒಟ್ಟು 31228 ಶೌಚಾಲಯ ನಿರ್ಮಾಣವಾಗಿವೆ.
ಶೌಚಮುಕ್ತ ಗ್ರಾಮಗಳು ಎಂದು ಕಾಗದ ಪತ್ರದಲ್ಲಿ ದಾಖಲಾಗಿವೆ. ಆದರೆ ವಾಸ್ತವದಲ್ಲಿ ಪ್ರತಿಶತ 80ರಷ್ಟು ಜನ ಇನ್ನೂ ಬಹಿರ್ದೆಸೆಯನ್ನೇ ಅವಲಂಬಿಸಿದ್ದಾರೆ. ಅಲ್ಲದೆ ವೈಯಕ್ತಿಕ ಶೌಚಾಲಯಗಳು ಬಳಕೆ ಮಾಡಲು ಸದ್ಯವಾಗದಂತೆ ನಿರ್ಮಾಣಗೊಂಡಿವೆ. ಅದಕ್ಕಾಗಿಯೇ ಜನ ಬಯಲು ಆವರಣವನ್ನೇ ಶೌಚಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ.
ಗ್ರಾಮೀಣ ಭಾಗ ಅಷ್ಟೇ ಅಲ್ಲದೆ ಮುಂದುವರೆದು ನಗರಗಳನ್ನು ಸೂಕ್ಷವಾಗಿ ಗಮನಿಸಲಾಗಿ, ನಗರದ ಕೆಲವೊಂದು ಓಣಿಯಲ್ಲಿ ದರ್ಗಾಗಲ್ಲಿ, ಒಂದನೆ ವಾರ್ಡ್, ಎರಡನೆ ವಾರ್ಡ್, ರೇವಪ್ಪನಮಡ್ಡಿ ಸೇರಿದಂತೆ ಸಂಸದರ ಸ್ವ ಗ್ರಾಮ ಅಥರ್ಗಾ ಮತ್ತು ಶಾಸಕರ ಸ್ವ ಗ್ರಾಮ ಪಡನೂರ ಹೀಗೆ ಎಲ್ಲೆಡೆ ಮಹಿಳೆಯರು ಬಯಲು ಬಹಿರ್ದೆಸೆ ಹೋಗುತ್ತಾರೆ. ಆದರೆ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಶೌಚಾಲಯ ಬಳಸುತ್ತಾರೆ. ಇದನ್ನು ಹೊರತುಪಡಿಸಿದರೆ ಬಹುತೇಕ ಜನ ಬಹಿರ್ದೆಸೆಗಾಗಿ ಬಯಲನ್ನೇ ಅವಲಂಬಿಸಿದ್ದಾರೆ.
ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಆಗಿದೆಯೋ ಅಲ್ಲೆಲ್ಲಿ ಶೌಚಾಲಯದ ಉಪಯೋಗ ಆಗುತ್ತಿಲ್ಲ. ಮಾತ್ರವಲ್ಲದೆ ಗ್ರಾಮೀಣ ಸಮುದಾಯದ ಜನರಲ್ಲಿ ಶೌಚಾಲಯದ ಬಳೆಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಲಾಗಿಲ್ಲ. ಗ್ರಾಮ ಪಂಚಾಯತ್‌ಗಳಲ್ಲಿ ಸಂಚಾರಿ ವಾಹನದ ಮೂಲಕ, ಕಲಾ ಜಾಥಾ, ದೃಶ್ಯ ಮಾಧ್ಯಮ, ಬೀದಿ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ ಜಾಹೀರಾತುಗಳ ಮೂಲಕ ಪ್ರದರ್ಶನ ಆಯೋಜಿಸಿದ ಬದಲಾವಣೆ ಮಾತ್ರ ಕಂಡಿಲ್ಲ.
ಗ್ರಾಪಂ ವ್ಯಾಪ್ತಿಯ ಅದೇಷ್ಟೋ ಹಳ್ಳಿಯ ಜನರು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರೂ ಮತ್ತೆ ಬಯಲನ್ನೇ ಶೌಚಕ್ಕೆ ಬಳಸಿಕೊಳ್ಳುತ್ತಿದ್ದು, ಇಡೀ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಇದರ ಜೊತೆಗೆ ತಾಲೂಕಲ್ಲಿ ಕೆಲವೂ ಪಂಚಾಯಿತಿಯ ಪಿಡಿಒಗಳು ಶೌಚಾಲಯವನ್ನು ಕಡಿಮೆ ಬೆಲೆಯ ಸಿದ್ಧಪಡಿಸಿದ ಶೌಚಾಲಯಗಳನ್ನು ತಂದು ಆ ಹಣವನ್ನು ಲೂಟಿ ಮಾಡಿದ್ದರ ಪರಿಣಾಮವಾಗಿ ಗ್ರಾಮಸ್ಥರಿಗೆ ಬಯಲೇ ಗತಿಯಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಬಯಲು ಬಹಿರ್ದೆಸೆಗೆ ಹೋಗಿ ಕಾಲುಜಾರಿ ಬಿದ್ದು ಅದೆಷ್ಟೋ ಜನ ಕೈಕಾಲು ಮುರಿದುಕೊಂಡಿದ್ದಾರೆ. ರಾತ್ರಿ ವೇಳೆ ಹಾವು, ಚೇಳುಗಳತಂಹ ವಿಷಜಂತುಗಳು ಕಚ್ಚಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡಾ ಅವರು ಶೌಚಾಲಯವನ್ನು ಮಾತ್ರ ಬಳಕೆ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸರಕಾರ ನಿರ್ಮಿಸಿದ ಶೌಚಾಲಯಗಳು ಯೋಗ್ಯವಾಗಿಲ್ಲ ಮತ್ತು ನೀರಿಲ್ಲ. ಹೀಗಾಗಿ ಶೌಚಾಲಯವನ್ನು ಬಳಕೆ ಮಾಡುತ್ತಿಲ್ಲ. -ಮಲ್ಲಿಕಾರ್ಜುನ ಹಾವಿನಾಳಮಠ, ಇಂಡಿ ಪಟ್ಟಣದ ನಿವಾಸಿ.
ಇಂಡಿ ಪಟ್ಟಣದಲ್ಲಿ ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳು ಯಾಕೆ ಬಂದ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಎಲ್ಲ ಶೌಚಾಲಯಗಳು ಸುರಕ್ಷಿತವಾಗಿವೆ. ಅಲ್ಲಿ ನೀರು ಶೌಚಗೃಹ ಬಳಕೆದಾರರು. ಅಚ್ಚುಕಟ್ಟಾಗಿವೆ. ಇನ್ನೂ ವೈಯಕ್ತಿಕ ಶೌಚಾಲಯಗಳು ಸಾರ್ವಜನಿಕರು ಅರ್ಜಿ ಬಂದರೆ ಸರಕಾರದ ಅನುಮೋದನೆಗೆ ಪತ್ರ ಬರೆಯುತ್ತೇನೆ. -ಲಕ್ಷ್ಮೇಶ ಎಸ್. ಪುರಸಭೆ ಮುಖ್ಯಾಧಿಕಾರಿ ಇಂಡಿ.
ಶೌಚಾಲಯ ಉಪಯೋಗಕ್ಕೆ ಬಾರದಂತೆ ಆಗಿದ್ದು ನನ್ನ ಗಮನಕ್ಕಿವೆ. ವಿಧಾನಪರಿಷತ್ ಚುನಾವಣೆ ಮುಗಿದ ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. -ಸುನೀಲ ಮದ್ದಿನ್, ತಾಪಂ ಇಒ ಇಂಡಿ.
-ಯಲಗೊಂಡ ಬೇವನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.