“ಕನ್ನಡದ ಜಗದ್ಗುರು”ವಾದ ಸಿಂದಗಿಯ ಸಿದ್ದರಾಮ


Team Udayavani, Oct 21, 2018, 6:10 AM IST

181020kpn57.jpg

ವಿಜಯಪುರ: ಕನ್ನಡದ ಜಗದ್ಗುರು ಎಂದೇ ಖ್ಯಾತಿ ಪಡೆದಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ಸಿದ್ದಲಿಂಗ ಶ್ರೀಗಳು ಬಸವೈಕ್ಯರಾದ ಸುದ್ದಿ ತಿಳಿಯುತ್ತಲೇ ಶ್ರೀಗಳ ತವರು ಜಿಲ್ಲೆ ವಿಜಯಪುರದಲ್ಲಿ ಶೋಕ ಮಡುಗಟ್ಟಿದೆ. ಹುಟ್ಟೂರು ಸಿಂದಗಿ ಪಟ್ಟಣದ ಹಿರೇಮಠದಲ್ಲಿ ದುಃಖದ ಕಟ್ಟೆ ಒಡೆದಿದೆ.

1949ರ ಫೆ.21ರಂದು ಸಿಂದಗಿಯ ಹಿರೇಮಠದ ಮರಯ್ಯ ಹಾಗೂ ಶಂಕರಮ್ಮ ಅವರ ದ್ವಿತೀಯ ಪುತ್ರನಾಗಿ ಜನಿಸಿದ್ದ ಸಿದ್ದರಾಮ ಎಂಬ ಮಗು ಭವಿಷ್ಯದಲ್ಲಿ ಕನ್ನಡ ನಾಡೇ ಕನ್ನಡದ ಜಗದ್ಗುರು ಎಂದು ಕರೆಯುವ ಮಟ್ಟಿಗೆ ಬೆಳೆದು ನಿಂತಿದ್ದನ್ನು ತವರಿನ ಜನ ಸ್ಮರಿಸುತ್ತಾರೆ. ಹೆತ್ತವರ ಊರು ಸಿಂದಗಿ ಪಟ್ಟಣವಾದರೂ, ಗರ್ಭಿಣಿಯಾಗಿದ್ದ ತಾಯಿ ಶಂಕರಮ್ಮ ಅವರು ತಮ್ಮ ಅಕ್ಕ ಶಿವಬಯಿ ಅವರ ಊರು ಕೋರವಾರಕ್ಕೆ ಹೋದಾಗ ಸಿದ್ದರಾಮರ ಹೆರಿಗೆ ಆಗಿತ್ತು. ಹೀಗಾಗಿ, ಕೋರವಾರದ ಜನರು ಶ್ರೀಗಳು ನಮ್ಮೂರಲ್ಲಿ ಜನ್ಮ ಪಡೆದ ಪುಣ್ಯಭೂಮಿ ಎಂದು, ಇದನ್ನೇ ಅವರ ಹುಟ್ಟೂರು, ತವರು ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸಿದ್ದರಾಮರು ಮಲ್ಲಿಕಾರ್ಜುನ ಎಂಬ ಅಣ್ಣ, ಕುಮಾರಸ್ವಾಮಿ, ಪತ್ರಕರ್ತ ಶಾಂತು ಹಿರೇಮಠ, ಸಿಂದಗಿ-ಹಾವೇರಿ ಮಠದ ಪೀಠಾಧಿಪತಿ ಶಿವಾನಂದ ಶ್ರೀಗಳು ಹಾಗೂ ಗಂಗಾಬಾಯಿ ಮತ್ತು ನಿರ್ಮಲಾ ಎಂಬ ಸಹೋದರಿಯರನ್ನು ಹೊಂದಿದ್ದ ದೊಡ್ಡ ಕುಟುಂಬದಿಂದ ಬಂದವರು.

ಸಿಂದಗಿ ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಲೇ ಎಸ್‌.ಎಂ.ಮಣೂರ ಅವರ ಮೆಚ್ಚಿನ ಶಿಷ್ಯನಾಗಿ ಹೊರ ಹೊಮ್ಮಿದ್ದ ಸಿದ್ದರಾಮರು, ಶಿಕ್ಷಣದ ಪಠ್ಯ ಪುಸ್ತಕವನ್ನೆಲ್ಲ ಬಾಯಿ ಪಾಠ ಮಾಡಿ ನಿರರ್ಗಳವಾಗಿ ಹೇಳುವ ಛಾತಿ ಹೊಂದಿದ್ದರು. ನಂತರ, ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಶ್ರೀಗಳ ಕೃಪೆಯಲ್ಲಿ ಉನ್ನತ ಶಿಕ್ಷಣ ಪಡೆದು, ಕನ್ನಡದಲ್ಲಿ ಪ್ರಾವೀಣ್ಯತೆ ಪಡೆದರು. ಅಷ್ಟರಲ್ಲಾಗಲೇ ಅವರು ಸಿಂದಗಿ ಊರಿನ ಹಿರೇಮಠದ ಶಾಂತವೀರ ಶ್ರೀಗಲು ಲಿಂಗೈಕ್ಯರಾದ ಕಾರಣ ಪಟ್ಟಾ ಧಿಕಾರಕ್ಕೆ ನಿಯೋಜಿತರಾಗಿದ್ದರು.

ಆದರೆ, ಸಿದ್ದರಾಮರು ಶಿಸ್ತು, ಸಂಯಮ, ಬದ್ಧತೆ, ಆಧ್ಯಾತ್ಮಿಕ ಚಿಂತನೆ, ಸಾಹಿತ್ಯ ಅಧ್ಯಯನದ ಗೀಳು, ವಿಜ್ಞಾನ, ಮನೋವಿಜ್ಞಾನ, ಭೂಗರ್ಭ, ಗಣಿತ, ವಚನ ಸಾಹಿತ್ಯದ ಸಂಶೋಧನೆಯಲ್ಲಿ ಆಳವಾದ ಅರಿವು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹುಚ್ಚು ಹಿಡಿದವರಂತೆ ಅದ್ಭುತ ಪ್ರತಿಭೆ ಸಂಪಾದಿಸಿದ್ದರು. ಇವರಲ್ಲಿನ ಪ್ರತಿಭೆಯನ್ನು ಗುರುತಿಸಿದ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರರು, ಸಿದ್ದರಾಮ ದೇವರನ್ನು ಸಿದ್ದಲಿಂಗ ಮಹಾಸ್ವಾಮಿಗಳೆಂದು ನಾಮಕರಣ ಮಾಡಿ ಗದಗ ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ನೇಮಿಸಿದರು.

ನಿಯೋಜಿತ ಸಿಂದಗಿ ಹಿರೇಮಠದ ಬದಲಾಗಿ ಗದಗ ತೋಂಟದಾರ್ಯ ಮಠಕ್ಕೆ ಪಟ್ಟಾಧಿಕಾರಕ್ಕೆ ನೇಮಿಸಿದಾಗ ಸಿಂದಗಿ ಹಿರೇಮಠದ ಭಕ್ತರು ಸಿಂದಗಿ ಮಠವನ್ನು ಅನಾಥವಾಗಿ ಮಾಡಿದಿರಿ ಎಂದು ಮರುಗಿದರು. ಬಳಿಕ, ಶ್ರೀಗಳ ಪೂರ್ವಾಶ್ರಮದ ತಮ್ಮ ಶಿವಾನಂದ ಶ್ರೀಗಳನ್ನು ಸಿಂದಗಿ-ಹಾವೇರಿ ಮಠಕ್ಕೆ ಪೀಠಕ್ಕೆ ನೇಮಿಸಲಾಯಿತು. ಗದಗ-ಡಂಬಳ ಮಠಕ್ಕೆ ಪೀಠಾ ಧೀಕಾರಕ್ಕೆ ಬರುತ್ತಲೇ ಶ್ರೀಗಳಲ್ಲಿದ್ದ ವೈಚಾರಿಕ ಪ್ರಜ್ಞೆ ಜಗತ್ತಿಗೆ ಪರಿಚಯವಾಗತೊಡಗಿತು. ಕನ್ನಡದಲ್ಲಿ ಅದರಲ್ಲೂ, ವಚನ ಸಾಹಿತ್ಯದ ವೈಚಾರಿಕ ವಿಷಯಗಳನ್ನು ವೈಜ್ಞಾನಿಕ ಪ್ರಜ್ಞೆ ಮೂಲಕ ವಿಶ್ಲೇಷಿಸುವ ಪರಿ ನಾಡಿನ ಕನ್ನಡ ಸಾಹಿತ್ಯ ವಲಯದ ಗಣ್ಯರನ್ನೂ ಹುಬ್ಬೇರಿಸುವಂತೆ ಮಾಡಿತು.

ತಮ್ಮ ಪ್ರವಚನದಿಂದ ಬಂದ ಹಣವನ್ನು ಮಠಕ್ಕೆ ಖರ್ಚು ಮಾಡದೆ, ಅಪ್ರಕಟಿತ ವಚನ ಸಾಹಿತ್ಯ ಮುದ್ರಣಕ್ಕೆ ವಿನಿಯೋಗಿಸಿದರು. ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಸ್ಟ್‌ ರಚಿಸಿ ಅದರ ಮೂಲಕ ಸಾಹಿತ್ಯದ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡರು. ಪರಿಣಾಮ ಡಾ| ದ.ರಾ.ಬೇಂದ್ರೆ, ಬೀಚಿ, ಕಾರಂತ ಅವರಂಥ ನಾಡಿನ ದಿಗ್ಗಜ ಸಾಂಸ್ಕೃತಿಕ ಅತಿರಥ-ಮಹಾರಥರು ಇವರ ಒಡನಾಟಕ್ಕೆ ಬಂದರು.

ಸಿದ್ದಲಿಂಗ ಜಗದ್ಗುರುಗಳಿಗೆ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿ ನೀಡಿ ಹಿರಿಮೆ ಹೆಚ್ಚಿಸಿಕೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನಾಡಿನ ಜನತೆ ಡಾ| ಸಿದ್ದಲಿಂಗ ಶ್ರೀಗಳನ್ನು ಕನ್ನಡದ ಜಗದ್ಗುರು ಎಂದೇ ಪ್ರೀತಿ, ಅಭಿಮಾನದಿಂದ ಕರೆದರು.

– ಜಿ.ಎಸ್‌. ಕಮತರ

ಟಾಪ್ ನ್ಯೂಸ್

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.