ಹಾಸ್ಯದಲ್ಲಿ ವಿಮರ್ಶೆ ಸ್ಪರ್ಶಿಸಿದರೆ ಮೆರುಗು


Team Udayavani, Sep 12, 2017, 12:50 PM IST

vij-1.jpg

ವಿಜಯಪುರ: ಅನೇಕರ ಅಪಸ್ವರದ ಮಧ್ಯೆಯೂ ನಾನು ವಿಮರ್ಶೆಯಲ್ಲಿ ಹಾಸ್ಯದ ಸ್ಪರ್ಶ ಅನುಸರಿಸಿದ್ದು, ವಿಮರ್ಶೆ ಸರಳವಾಗಿ, ಅರ್ಥಗರ್ಭಿತವಾಗಿ ಅದರಲ್ಲೂ ಎಲ್ಲರಿಗೂ ತಿಳಿಯುವಂತೆ ಇರಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಖ್ಯಾತ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು,

ಸೋಮವಾರ ಸಂಜೆ ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಕೊಡ ಮಾಡುವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನವೋದಯ ಕಾಲಘಟ್ಟದಲ್ಲಿ ವಿಮರ್ಶಕರು ಸರಳ, ಸುಲಭ ಪದ ಬಳಕೆ ಮೂಲಕ ವಿಮರ್ಶಿಸುತ್ತಿದ್ದರು. ಪಾರಿಭಾಷಿಕ ಪದಗಳ ಬಳಕೆಯೂ ಇತಿಮಿತಿಯಲ್ಲಿತ್ತು. ಆದರೆ ನವ್ಯ ಕಾಲಘಟ್ಟದಲ್ಲಿ ವಿಮರ್ಶೆಯ ಸ್ವರೂಪಕ್ಕೆ ಹೊಸ ರೂಪ ಪಡೆದುಕೊಂಡಿತು ಎಂದು ವಿವರಿಸಿದರು.

ವಿಮರ್ಶೆ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಹೊಸ ಪ್ರಯತ್ನ, ಬದಲಾವಣೆಯ ಕಾಲಘಟ್ಟದಲ್ಲಿ ವಿಮರ್ಶೆಯ ಸ್ವರೂಪದಲ್ಲೂ ಬದಲಾವಣೆ ಇಂದಿನ ಅಗತ್ಯ. ವಿಮರ್ಶೆ ಸರಳ ಅಥವಾ ಕಠಿಣ ಆಗಿರಬೇಕು. ಹಾಸ್ಯದ ಸುಳಿವು ಇರಬಾರದೆಂದು ಹಳೆ ಶೈಲಿಯ ಮಡಿವಂತಿಕೆ ಮಾಡುತ್ತಾರೆ. ವಿಮರ್ಶಕ್ಕೂ ಹಾಸ್ಯದ ಸ್ಪರ್ಶ ನೀಡಿದರೆ ವಿಮರ್ಶೆ ವಿಭಿನ್ನವಾಗಿ ಮೂಡಿ ಬರುತ್ತದೆ. ಸರಳ, ಅರ್ಥಗರ್ಭಿತವಾಗಿ ಸುಲಭವಾಗಿ ಅರ್ಥವಾಗುವಂತೆ ವಿಮರ್ಶೆ ಆರ್ಥವಾಗಬೇಕು ಎಂದು ನನ್ನ ಅಭಿಪ್ರಾಯ ಎಂದರು. 

ಹಲಸಂಗಿ ಗ್ರಾಮದೊಂದಿಗಿನ ನಾನು ಹಲವು ದಶಕಗಳಿಂದ ಹಲವಾರು ದಶಕಗಳ ನಂತರ ಮೊನ್ನೆ ಹಲಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಅನುಭವ ಇನ್ನೂ ನನ್ನ ಮನಸ್ಸಿನಲ್ಲಿ ಮಾಸದ ಸ್ಮರಣೆಯಂತಿದೆ. ಕಳೆದ ದಿನಗಳ ಹಿಂದೆ ಮತ್ತೆ ಹಲಸಂಗಿ ಗ್ರಾಮಕ್ಕೆ ಭೇಟಿ ನೀಡುವ ಪ್ರಸಂಗದಿಂದಾಗಿ ಅಲ್ಲಿಗೆ ಹೋಗಿದ್ದೆ. ಸಮಯ ಸರಿದಂತೆ ಪರಿಸರಲ್ಲೂ ಸಾಕಷ್ಟು ಬದಲಾವಣೆಳಾಗಿವೆ. ಹಿಂದೆಲ್ಲ ಹಲಸಂಗಿ ಹಳ್ಳದಲ್ಲಿ ಕಂಡು ಬರುತ್ತಿದ್ದ ಝುಳು ಝುಳು ಸದ್ದು ಈಗಿಲ್ಲ, ಮುಕ್ತವಾಗಿ ಹಾಡಿ, ಆಡಿ, ನಲಿಯುತ್ತಿದ್ದ ನವಿಲು ಮಾಯವಾಗಿವೆ. ಪಕ್ಕದಲ್ಲೇ ಹರಿಯುವ ಭೀಮೆ ಕೂಡ ಬರಿದಾಗಿದ್ದಾಳೆ ಎಂದು ಖೇದ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತ ಇನ್ನೊನ್ನ ಸಾಹಿತಿ ಪ್ರೊ| ಕೆ.ಸಿ. ಶಿವಪ್ಪ ಮಾತನಾಡಿ, ಹಲಸಂಗಿ ಗೆಳೆಯರ ಬಳಗದ ಸಾಧಕ ಸಾಹಿತಿಗಳು ಜನ್ಮ ತಳೆದ ಕಾರಣಕ್ಕೆ ಈ ನೆಲ ವಿಚಾರವಂತರ ಸುಗ್ರಾಮ ಎನಿಸಿಕೊಂಡಿದೆ. ಅವರ ಬಾಳಿ ಬದುಕಿದ ಈ ನೆಲ ಪಾವನ ನೆಲೆಯಾಗಿದೆ ಎಂದರು.

ನವೋದಯ ಕಾಲಘಟ್ಟದಲ್ಲಿ ಜಾನಪದ ದೇಶಿ ಸಾಹಿತ್ಯದ ಕೀರ್ತಿ ಹೆಚ್ಚಿಸಿದವರಲ್ಲಿ ಹಲಸಂಗಿ ಗೆಳೆಯರ ಕಾರ್ಯ ಸ್ಮರಣಾರ್ಹವಾಗಿದೆ. ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಹಲಸಂಗಿ ಗೆಳೆಯರು ನೀಡಿದ ಕೊಡುಗೆ ಅಪರೂಪದ್ದು. ಮಧುರಚನ್ನರು ಆಧ್ಯಾತ್ಮ ಸಾಧನೆಯ ಉನ್ನತ ಶಿಖರದಲ್ಲಿ ಇದ್ದುಕೊಂಡು ಮನೋಜ್ಞ ಸಾಹಿತ್ಯ ಸೃಷ್ಟಿಸಿದರೆ, ಮಧುರಚನ್ನ ಎಂಬ ಮಹಾತ್ಮ ಅಂತರಂಗದ ನಿಜಾನಂದ ದರ್ಶನ ಮಾಡಿಸಿ, ಮನುಕುಲದ ದಿಕ್ಸೂಚಿ ಎನಿಸಿದ್ದರು ಎಂದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಸಾರಸ್ವತ ಲೋಕದಲ್ಲಿ ಕೊಡುಗೆ ಸಲ್ಲಿಸಿದ ಖ್ಯಾತ ಸಾಹಿತಿ ಪ್ರೊ| ಕೆ.ಸಿ. ಶಿವಪ್ಪ, ಖ್ಯಾತ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ, ಜಾನಪದ ಸಾಹಿತಿ, ಸಂಶೋಧಕ ಡಾ| ಎಂ.ಎನ್‌. ವಾಲಿ, ಸಾಹಿತಿ ಡಾ| ಜೆ. ಕುಮಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಡಾ| ಗುರುಲಿಂಗ ಕಾಪ್ಸೆ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಸಂಶೋಧಕ ಡಾ| ಎಸ್‌.ಕೆ. ಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ, ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ, ಮಹಾಂತ ಗುಲಗಂಜಿ, ಡಾ| ಎಂ.ಎಸ್‌. ಮದಭಾವಿ, ಜಂಬುನಾಥ ಕಂಚ್ಯಾಣಿ, ಸಂಗಮೇಶ ಬಾದಾಮಿ ಇದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ
ಪೋತದಾರ ಸ್ವಾಗತಿಸಿದರು.

ಟಾಪ್ ನ್ಯೂಸ್

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

I don’t know about Kharge returned plot : Minister MB Patil

Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.