ವಾಣಿಜ್ಯ ಬೆಳೆಯಿಂದ ಪಾರಂಪರಿಕ ಸಿರಿಧಾನ್ಯ ಮಾಯ: ಶೈಲಜಾ
Team Udayavani, Nov 19, 2018, 12:59 PM IST
ವಿಜಯಪುರ: ಹಣದ ಹಿಂದೆ ಬಿದ್ದಿರುವ ಆಧುನಿಕ ಕೃಷಿ ವ್ಯವಸ್ಥೆಯ ರೈತರು ವಾಣಿಜ್ಯೋತ್ಪನ್ನಗಳ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮ ರೋಗನಿಗ್ರಹ ಶಕ್ತಿ ಹೊಂದಿದ್ದ ನಮ್ಮ ಪೂರ್ವಜರ ಆಹಾರ ಕ್ರಮವಾಗಿದ್ದ ಸಿರಿಧಾನ್ಯಗಳ ಬೆಳೆಗಳನ್ನು ಮರೆತಿರುವುದೇ ನಮ್ಮ ತಲೆಮಾರಿನಲ್ಲಿ ಅನಾರೋಗ್ಯ ಹೆಚ್ಚು ಕಾಡಲು ಕಾರಣ ಎಂದು ಶೈಲಜಾ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.
ರವಿವಾರ ನಗರದ ಪ್ರಗತಿ ಮಂಗಲ ಕಾರ್ಯಾಲಯದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು
ಕೃಷಿ ಇಲಾಖೆ ಆತ್ಮ ಯೋಜನೆ ಸಹಕಾರದೊಂದಿಗೆ ಆಯೋಜಿಸಿದ್ದ ಸಿರಿ ಧಾನ್ಯಗಳ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟ ಮತ್ತು ಅಡುಗೆ ಪ್ರಾತ್ಯಕ್ಷಿಕೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಜೀವನ ಶೈಲಿ ಕರಿದ ಜಿಡ್ಡು ಹಾಗೂ ಪ್ಯಾಕಿಂಗ್ ಮಾಡಿದ ದಾಸ್ತಾನು ಆಹಾರ ಸೇವನೆಯಿಂದ ಪ್ರಸಕ್ತ ಸಂದರ್ಭದಲ್ಲಿ ಖಾಯಿಲೆಗಳು ಹೆಚ್ಚಾಗಿ ಆಸ್ಪತ್ರೆಗೆ ಹಣ ಸುರಿಯುವಂತಾಗಿದೆ ಎಂದು ಪ್ರಸಕ್ತ ಕೃಷಿ ಹಾಗೂ ಆಹಾರ ಪದ್ಧತಿ ವಿಶ್ಲೇಷಿಸಿದರು.
ಜಿಲ್ಲೆಯಲ್ಲಿ 12 ಸಾವಿರ ಸ್ವಸಹಾಯ ಸಂಘವಿದ್ದು, ಇವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 218 ಕೋಟಿ ರೂ. ಬ್ಯಾಂಕ್‌ನಿಂದ ಆರ್ಥಿಕ ನೆರವು ಸಂಸ್ಥೆ ಕೊಡಿಸಿದೆ. ಧರ್ಮಸ್ಥಳದ ಈ ಸಂಸ್ಥೆಯ ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದ್ದು, ಈ ಎಲ್ಲ ಯೋಜನೆಗಳ ಸಫಲತೆ ಪಡೆಯಬೇಕು. ಸಿರಿ ಧಾನ್ಯಗಳ ಬೆಳೆ ಬೆಳೆಯಲು ಅವುಗಳನ್ನು ಉಪಯೋಗಿಸಲು ಮತ್ತು ಅವುಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಜನರಲ್ಲಿ ಸಿರಿಧಾನ್ಯಗಳ ಸೇವನೆಯ ಮನವರಿಕೆ ಮಾಡಿಕೊಡಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರುವುದು ಅನುಕರಣೀಯ ಎಂದರು. ಕೃಷಿ ವಿಸ್ತೀರ್ಣಾಧಿಕಾರಿ ಡಾ| ಆರ್.ಬಿ. ಬೆಳ್ಳಿ ಮಾತನಾಡಿ, ಕಡಿಮೆ ನೀರಿನಲ್ಲಿ ಯಾವ ರಾಸಾಯನಿಕ ಬಳಸದೆ ಸುಲಭವಾಗಿ ಬೆಳೆಯುವ ನವಣೆ, ಉದಲು, ಹಾರಕ, ರಾಗಿ ಇನ್ನಿತರ ಸಿರಿಧಾನ್ಯಗಳಿಂದ ರುಚಿಕರವಾದ ಅಡುಗೆಗಳನ್ನು ತಯಾರಿಸಬಹುದು. ದಿನ ನಿತ್ಯ ಇವುಗಳನ್ನು ಬಳಸುವುದರಿಂದ ದೇಹವನ್ನು ಸಮತೋಲನದಲ್ಲಿ ಇರಿಸಲು ಸಾಧ್ಯವಿದೆ. ಕಾರಣ ರೈತರು ಆರ್ಥಿಕ ಲಾಭವನ್ನು ನೆಚ್ಚಿಕೊಳ್ಳದೆ ತಮಗಿರುವ ಜಮೀನಿನಲ್ಲಿ ಸ್ವಲ್ಪ ಭಾಗವಾದರೂ ಸಿರಿ ಧಾನ್ಯಗಳನ್ನು ಬೆಳೆದು, ಜನಪರ ಯೋಗಿ ಆಗಬೇಕು ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಮಾತನಾಡಿ, ಇಂದು ಮಡಿಕೆ, ಕುಡುಕೆಗಳನ್ನು ಮರೆತು ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚಾಗಿಸಿಕೊಂಡು, ರಾಸಾಯನಿಕ ಭರತಿ ಪದಾರ್ಥಗಳಿಗೆ ಮಾರು ಹೋದ ಯುವ ಜನತೆ ಇಂತಹ ಅಮೂಲ್ಯವಾದ ಅಮೃತ ಸಿರಿಧಾನ್ಯಗಳನ್ನು ಮರೆಯುತ್ತಿರುವುದು ಆತಂಕದ ಸಂಗತಿ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಮಾತನಾಡಿ, ನೀರು, ನೆರಳಿಲ್ಲದ ಜಿಲ್ಲೆ ವಿಜಯಪುರ ಎಂಬ ಹಣೆಪಟ್ಟಿ ಹೊತ್ತಿಕೊಂಡಿದ್ದರೂ ಫಲವತ್ತತೆ ಜಮೀನು ಇಲ್ಲಿಯ ಜನರ ಸಹನೆ ರೈತರ ಶ್ರಮ ಹಿರಿದಾಗಿದೆ. ಬಟ್ಟೆ ಗರಿಗರಿಯಾಗಬೇಕಾದರೆ ಅದಕ್ಕೆ ಇಸ್ತ್ರೀ ಬೇಕು. ಸಮಾಜದ ಅಂಕು,ಡೊಂಕು ತಿದ್ದಬೇಕಾದರೆ ಸ್ತ್ರೀ ಬೇಕು ಎಂದು ಮಾರ್ಮಿಕವಾಗಿ ನುಡಿದರು.
ರಾಸಾಯನಿಕ ಆಹಾರ ಸೇವನೆ ದೇಹಕ್ಕೆ ಅಪಾಯಕಾರಿ. ಈ ಕಾರಣಕ್ಕಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎರಡು ದಿನಗಳ ಕಾಲ ಜನರಿಗಾಗಿ ಸಿರಿಧಾನ್ಯಗಳ ಉಪಯೋಗ ಅದರ ಮಹತ್ವ, ಮತ್ತು ಅಡುಗೆ ತಯಾರಿಯ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗ ಪಡೆದುಕೊಂಡ ಜನತೆ ಧನ್ಯ ಎಂದರು.
ಮೇಳದಲ್ಲಿ ಸ್ಥಳದಲ್ಲೇ ಸಿರಿಧಾನ್ಯಗಳಿಂದ ಮಾಡದ ವಿವಿಧ ಬಗೆಯ ಅಡುಗೆ ತಯಾರಿಕೆ, ಸಿರಿ ಧಾನ್ಯಗಳ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಮಾರಾಟ ಕುರಿತು ಜನರಿಗೆ ತಿಳಿಸಲಾಯಿತು.
ಕೃಷಿ ಪಂಡಿತರಾದ ಎಸ್.ಟಿ. ಪಾಟೀಲ, ಮಾಜಿ ಉಪ ಮೇಯರ್ ಲಕ್ಷ್ಮೀ ಕನ್ನೊಳ್ಳಿ, ಎಂ.ಬಿ. ಪಟ್ಟಣಶೆಟ್ಟಿ, ಆರ್.ಟಿ. ಉತ್ತರಕರ ವೇದಿಕೆಯಲ್ಲಿದ್ದರು. ನಾಗರಾಜ ಸ್ವಾಗತಿಸಿದರು. ಮಹ್ಮದ್ ಅಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.