2-4ರಂದು ಸಂಚಾರಿ ಕಾನೂನು ಸಾಕ್ಷರತಾ ಬಸ್ ಸಂಚಾರ
Team Udayavani, Dec 29, 2017, 2:08 PM IST
ಹೂವಿನಹಿಪ್ಪರಗಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಕಂದಾಯ
ಇಲಾಖೆ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಂಚಾಯತ್ ಇಲಾಖೆಗಳ ಸಹಯೋಗದಲ್ಲಿ ಜ. 2 ಮತ್ತು 4 ರಂದು ಸಂಚಾರಿ ಕಾನೂನು ಸಾಕ್ಷರತಾ ಬಸ್ ಆಗಮಿಸುವ ಹಿನ್ನೆಲೆಯಲ್ಲಿ ಹೂವಿನಹಿಪ್ಪರಗಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಂಕನಾಳ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಬಿ.ಆರ್.
ಅಡ್ಡೋಡಗಿ, ಗ್ರಾಮಕ್ಕೆ ರಾಜ್ಯ ಪ್ರಾಧಿಕಾರ ದಿಂದ ಜನವರಿ 2ರಂದು ಮಧ್ಯಾಹ್ನ 2ಕ್ಕೆ ಸಾಕ್ಷರತಾ ರಥ ಆಗಮಿಸಲಿದೆ. ಕಾನೂನು ಅರಿವು ನೆರವು ತಾಲೂಕು ನ್ಯಾಯಾಧೀಶರಾದ ಶಿವರಾಜು ಹಾಗೂ ರೇಣುಕಾ ರಾಯ್ಕರ್ ಸೇರಿದಂತೆ ಉಪನ್ಯಾಸಕರು, ವಕೀಲರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ದಂಡು ನಿಮ್ಮೂರಿಗೆ ಆಗಮಿಸಲಿದೆ. ಹೀಗಾಗಿ ಶಿಸ್ತಿನಿಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಹಿರಿಯ ನ್ಯಾಯವಾದಿ ನಾನಾಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು ಕಾನೂನಿನ
ಬಗ್ಗೆ ಅರಿವು ಮೂಡಿಸಬೇಕೆಂಬ ತವಕವಿದೆ. ಆದರೂ ಸಹ ತಮ್ಮ ಜೀವನಾಧಾರಕ್ಕಾಗಿ ಬಿಡುವಿಲ್ಲದೇ ದುಡಿಯಬೇಕಿದೆ ಎಂದರು.
ಕಾನೂನಿನ ಬಗ್ಗೆ ಮಾಹಿತಿ ಪಡೆಯಲು ಅದಕ್ಕಾಗಿ ಇರುವ ಕೇಂದ್ರಗಳಿಗೆ ಭೇಟಿ ನೀಡಲು ಅಶಕ್ತರಾಗಿರುತ್ತಾರೆ.
ಇಂತಹ ಜನರನ್ನು ಗಮನದಲ್ಲಿಕೊಂಡು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಂಚಾರಿ ಕಾನೂನು ಸಾಕ್ಷರತಾ ಬಸ್ ಮೂಲಕ ನ್ಯಾಯ ಒದಗಿಸುತ್ತಿದೆ ಎಂದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಕಾನೂನು ಸೇವೆಗಳ ಮೂಲಕ ಜನಸಾಮಾನ್ಯರನ್ನು ಕಾನೂನು ಸಾಕ್ಷರರನ್ನಾಗಿ ಮಾಡುವಲ್ಲಿ ಯಶಸ್ಸನ್ನು ಸಾಧಿಸುತ್ತಿದೆ. ಈ ಬಸ್‌ನಲ್ಲಿ ಲೋಕ ಅದಾಲತ್‌ಗಳನ್ನು ಸಹ ಏರ್ಪಾಡು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಜಿ.ಬಿ ಓಲೇಕಾರ, ಜಿ.ಆರ್.ಬೀಳಗಿ, ವೀರಣ್ಣ ಮರ್ತುರ, ಎನ್.ಎಸ್. ಬಿರಾದಾರ, ಈಶ್ವರಪ್ಪ ಪರಮಗೊಂಡ,
ಅಶೋಕ ಮೂರಮಾನ, ಗುರುರಾಜ ಕನ್ನೂರ, ನಿಂಗಪ್ಪ ಚೌಧರಿ, ಸೋಮನಿಂಗಪ್ಪ ದಿಡ್ಡಿ, ಸಿದ್ದನಗೌಡ ಬಿರಾದಾರ ಇತರರು ಇದ್ದರು.
ಜ. 2ರಂದು ಹುಣಶ್ಯಾಳ ಪಿಬಿ ಗ್ರಾಮಕ್ಕೆ ಬೆಳಗ್ಗೆ ಬಸ್ ಆಗಮಿಸಿ ಅಲ್ಲಿ ಮೊದಲ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಹೂವಿನಹಿಪ್ಪರಗಿ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂಬಳನೂರು: ಜ. 4ರಂದು ಮಧ್ಯಾಹ್ನ ಕಾನೂನು ಸಾಕ್ಷರತಾ ಬಸ್ ಅಂಬಳನೂರು ಗ್ರಾಮಕ್ಕೆ ಆಗಮಿಸುವ
ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಬಿ.ಎಂ. ಹೊಸಳ್ಳಿ,ಶೇಖನಗೌಡ ಬಿರಾದಾರ, ಸೋಮನಗೌಡ ಹೊಸಳ್ಳಿ, ಯಮನಪ್ಪ ಚಲವಾದಿ ಇತರರಿದ್ದರು.
ಹಂಚಿನಾಳ: ಜ. 4 ರಂದು ಬೆಳಗ್ಗೆ ಹಂಚಿನಾಳ ಗ್ರಾಮಕ್ಕೆ ಬಸ್ ಆಗಮಿಸುವ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು.
ಇವಣಗಿ: ಜ. 4 ರಂದು ಸಂಜೆ ಕಾನೂನು ಸಾಕ್ಷರತಾ ರಥ ಆಗಮಿಸುವ ಹಿನ್ನೆಲೆಯಲ್ಲಿ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ರೀತಿಯಾಗಿ ಹೂವಿನಹಿಪ್ಪರಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾನೂನು ಸಾಕ್ಷರತಾ ರಥ ಸಂಚರಿಸಿ ಕಾನೂನು ಅರಿವು ಮೂಡಿಸುತ್ತದೆ. ವಿವಿಧ ಕಾಯ್ದೆಗಳ ಕುರಿತಾಗಿ ಉಪನ್ಯಾಸ ನೀಡಲಾಗುವುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಕೀಲರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.