Tragedy; ಎಮ್ಮೆಗೆ ನೀರು ಕುಡಿಸಲು ಹೋದಾಗ ಹೊಂಡದಲ್ಲಿ ಬಿದ್ದು ಮೂವರ ಸಾವು


Team Udayavani, Jun 18, 2024, 9:34 PM IST

Tragedy; ಎಮ್ಮೆಗೆ ನೀರು ಕುಡಿಸಲು ಹೋದಾಗ ಹೊಂಡದಲ್ಲಿ ಬಿದ್ದು ಮೂವರ ಸಾವು

ಮುದ್ದೇಬಿಹಾಳ: ಎಮ್ಮೆಗೆ ನೀರು ಕುಡಿಸಲು ಹೋದ ವೇಳೆ ಕಾಲು ಜಾರಿ ಹೊಂಡದಲ್ಲಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಹಡಲಗೇರಿಯ ನೀಲಮ್ಮ ಹುಲಗಪ್ಪ ಕಿಲಾರಹಿಟ್ಟಿ (16), ಲಡ್ಡುಮುತ್ಯಾ ಮಹಾನಿಂಗಪ್ಪ ಕಿಲಾರಹಟ್ಟಿ (25) ಮತ್ತು ಯಲ್ಲಪ್ಪ ಶಿವಪ್ಪ ಯಾಳವಾರ (30) ಎಂದು ಗುರುತಿಸಲಾಗಿದೆ.

ನೀಲಮ್ಮ ಎಂದಿನಂತೆ ಎಮ್ಮೆಗಳನ್ನು ಹೊಡೆದುಕೊಂಡು ನೀರು ಕುಡಿಸಲೆಂದು ಹೊಂಡಕ್ಕೆ ತೆರಳಿದ್ದಳು. ಆಗ ಏಕಾಏಕಿ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾಳೆ. ಅಲ್ಲಿಯೇ ದನ ಮೇಯಿಸುತ್ತಿದ್ದ ನೀಲಮ್ಮಳ ಸೋದರ ಸಂಬಂ ಧಿ ಲಡ್ಡುಮುತ್ಯಾ ಮತ್ತು ಯಲ್ಲಪ್ಪ ಇಬ್ಬರೂ ಆಕೆಯನ್ನು ರಕ್ಷಿಸಲು ಹೊಂಡಕ್ಕೆ ಧುಮುಕಿದ್ದಾರೆ.

ಆದರೆ ಮೇಲೆ ಬರಲಾಗದೆ ಹೊಂಡದಲ್ಲೇ ಮುಳುಗಿ ಉಸಿರುಗಟ್ಟಿ ಮೂವರೂ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಕಿಲಾರಹಟ್ಟಿ ಕುಟುಂಬದವರೂ ಸೇರಿದಂತೆ ಇಡೀ ಗ್ರಾಮದ ಜನತೆ ಹೊಂಡದ ಬಳಿ ಜಮಾಯಿಸಿದರು. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಮೂವರ ಶವಗಳನ್ನು ಹೊಂಡದಿಂದ ಮೇಲೆ ತಂದರು.

ಮೃತ ಕುಟುಂಬದವರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wew-e-weewqewq

Muddebihal; 2 ಮರಿಗಳ ಸಮೇತ ಬೃಹತ್ ಹೆಣ್ಣು ಮೊಸಳೆ ಸೆರೆ

dinesh-gu

GST ವಿಚಾರದಲ್ಲಿ ಟೀಕೆ: ನಿರ್ಮಲಾ ಸೀತಾರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ

yatnal

BJP ಹೈಕಮಾಂಡ್ ಗೆ ದೊಡ್ಡವರ ಪಕ್ಷ ವಿರೋಧಿ ಚಟುವಟಿಕೆ ಮಾಹಿತಿ: ಯತ್ನಾಳ್

1-Yat

B.S.Y.; ವೀರಶೈವ ಮಹಾಸಭಾ ಮೂರು ಕುಟುಂಬಗಳ ಆಸ್ತಿಯಂತಾಗಿದೆ: ಯತ್ನಾಳ್ ಕಿಡಿ

1-babay

Vijayapura: ವಿದ್ಯಾರ್ಥಿನಿಯರ ರೂಮ್ ಎದುರು ನವಜಾತ ಶಿಶುವಿನ ಶವ ಪತ್ತೆ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.