ಸಾಮಾನ್ಯರಲ್ಲೂ ಇರುತ್ತೆ ಅಸಾಮಾನ ಪ್ರತಿಭೆ
Team Udayavani, Jul 16, 2018, 11:23 AM IST
ವಿಜಯಪುರ: ಸಾಮಾನ್ಯ ಮನುಷ್ಯನರಲ್ಲೂ ಯಾರೂ ನಿರೀಕ್ಷಿಸದಂತಹ ಅದ್ಭುತ ಕಲಾ ಪ್ರತಿಭೆಗಳಿರುತ್ತವೆ ಎಂದು ಮಹೇಶ ಕ್ಯಾತನ ಹೇಳಿದರು.
ರವಿವಾರ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾವಿದ ರುದ್ರೇಶ ಕುಂಬಾರ ಅವರ ಡಿಜಿಟಲ್ ಮತ್ತು ಮಿಶ್ರಮಾಧ್ಯಮ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸಕ್ತ ಸಂದರ್ಭದಲ್ಲಿ ಕಲಾವಿದರಿಗೆ ಅನೇಕ ಅವಕಾಶಗಳಿವೆ. ಇಂಥ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿಯೇ ಸರ್ಕಾರ ಹೊಸ ಹೊಸ ಕಲಾವಿದರಿಗೆ ಪ್ರೋತ್ಸಾಹಿಸುತ್ತಿದೆ ಎಂದರು.
ಎಸ್.ಟಿ. ಸೊಲಬಕ್ಕನವರ ಎಂಬ ಸಾಮಾನ್ಯ ಕಲಾವಿದರ ಕಲಾತ್ಮಕ ದೃಷ್ಟಿ ಹಾಗೂ ಸೃಷ್ಟಿಯಿಂದ ಆಲಮಟ್ಟಿ ಉದ್ಯಾನ ಅತ್ಯಂತ ಪ್ರಸಿದ್ಧಿ ಪಡೆದಿದೆ. ಕಲಾವಿದನ ಕೈಚಳಕ ಯಾವುದೇ ಇರಲಿ ಅದು ಉತ್ತಮವಾಗಿದ್ದಲ್ಲಿ ಆಕರ್ಷಣೆ ಆಗಲಿದೆ ಎಂದರು.
ಡಾ| ಎಂ.ಬಿ. ಭಿರಡಿ ಮಾತನಾಡಿ, ಕಲೆಯನ್ನು ನಂಬಿದ ಯಾವ ಕಲಾವಿದನ ಕುಟುಂಬ ಆರ್ಥಿಕವಾಗಿ ಶ್ರೀಮಂತವಾಗಿಲ್ಲ. ಆದರೆ ಅವರ ಕಲಾಕೃತಿಗಳು ಅತ್ಯಂತ ಶ್ರೀಮಂತವಾಗಿರುತ್ತವೆ. ಇದಕ್ಕೆ ಇದೀಗ ಮತ್ತೂಂದು ಜೀವಂತ ಉದಾಹರಣೆ ಕುಂಬಾರ ಎಂದರು.
ಈ ವೇಳೆ ಹೊಟೇಲ್ ಉದ್ಯಮಿ ನಾಗೇಶ ಶೆಟ್ಟಿ ಕಲಾಕೃತಿಗಳ ಪುಸ್ತಕ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಲಿಟ್ ಪದವಿ ಪಡೆದ ಡಾ| ಎಸ್.ಟಿ. ಮೇರವಾಡೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ಲಿಂಗರಾಜ ಕಾಚಾಪುರ, ವಿದ್ಯಾಧರ ಸಾಲಿ, ಬಿ.ಎಸ್. ಪಾಟೀಲ, ಮಂಜುನಾಥ ಮಾನೆ, ಎಂ.ಎಂ. ಕನ್ನೂರ, ಅಯಾಜ್ ಪಟೇಲ್, ದಿನೇಶ ಭಜಂತ್ರಿ, ಶ್ರೀಶೈಲ ಹೂಗಾರ, ಮದನ್,
ಮಲ್ಲಿಕಾರ್ಜುನ ಚಿಂಚೋಲಿ, ಗಂಗಾಧರ ಮಾಯಾಚಾರಿ, ಮಾಸ್ತಿಕ ತಿಕೋಟ, ಅನಂತ ಝಂಡೆ ಭಾಗವಹಿಸಿದ್ದರು. ರಮೇಶ ಚವ್ಹಾಣ ಸ್ವಾಗತಿಸಿ ಪರಿಚಯಿಸಿದರು. ಕಲಾವಿದ ರುದ್ರೇಶ ಕುಂಬಾರ ವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.