ಅಕಾಲಿಕ ಮಳೆ: ಜನಜೀವನ ಅಸ್ತವ್ಯಸ್ಥ
Team Udayavani, May 12, 2018, 4:36 PM IST
ನಿಡಗುಂದಿ: ಶುಕ್ರವಾರ ಸಂಜೆ ಸುರಿದ ಮಳೆ, ಬೀಸಿದ ಭಾರಿ ಗಾಳಿಗೆ ಪಟ್ಟಣ ಸೇರಿದಂತೆ ನಾನಾ ಕಡೆ ಪತ್ರಾಸ್‌ಗಳು ಹಾರಿ, ಗಿಡಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಪಟ್ಟಣದ ಹೊರವಲಯದ ಮುದ್ದೇಬಿಹಾಳ ಕ್ರಾಸ್ ಬಳಿ ಇರುವ ಅಂಗಡಿಯ ಪತ್ರಾಸ್‌ಗಳು ಹಾರಿ ಹೋಗಿವೆ. ಸುರಿದ ಮಳೆ ಕಮದಾಳ ಪುನರ್ವಸತಿ ಕೇಂದ್ರದ ಹಲವಾರು ಮನೆಗಳಿಗೆ
ಚರಂಡಿ ನೀರು ಒಮ್ಮಲೆ ನುಗ್ಗಿದೆ. ಶಂಕ್ರಯ್ಯ ಹಿರೇಮಠ ಅವರಿಗೆ ಸೇರಿದ ಮನೆಗಳು, ಅಂಗಡಿಗಳಿಗೆ ನೀರು ಹೊಕ್ಕಿದೆ. ಕೆಲ ಗಿಡಗಳು ಕೂಡಾ ನೆಲಕ್ಕುರುಳಿವೆ. ಇನ್ನೂ ಆಲಮಟ್ಟಿ, ಬೇನಾಳ, ವಂದಾಲ, ಗೊಳಸಂಗಿ ಭಾಗದಲ್ಲಿಯೂ ಭಾರಿ
ಪ್ರಮಾಣದಲ್ಲಿ ಗಾಳಿ ಬೀಸಿದ್ದು, ಮಳೆ ಕೂಡಾ ಸುರಿದಿದೆ. ಸಂಜೆಯವರೆಗೂ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರಿದಿತ್ತು. ನಿಡಗುಂದಿ ಪಟ್ಟಣದಲ್ಲಿ ಹಲವೆಡೆ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿ¨
ಅಪಾರ ಹಾನಿ
ಆಲಮಟ್ಟಿ: ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಮಿಂಚು ಮಿಶ್ರಿತ ಬಿರುಗಾಳಿ ಸಮೇತ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ಚಿಮ್ಮಲಗಿ, ವಂದಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿಗೆ ಗಿಡ, ಮರ, ವಿದ್ಯುತ್ ಕಂಬಗಳು
ಧರೆಗುರುಳಿದ್ದಲ್ಲದೇ ಶೆಡ್ಡುಗಳಿಗೆ ಹಾಕಲಾಗಿದ್ದ ತಗಡು ಹಾರಿ ಎಲ್ಲೆಂದರಲ್ಲಿ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.