ಮನಃ ಪರಿವರ್ತನೆಗೆ ವಚನಗಳು ಸಹಕಾರಿ; ಡಾ| ಚನ್ನವೀರ ದೇವರು
ಮನುಷ್ಯ ಬದಲಾವಣೆಯ ಬದುಕಿಗಾಗಿ ವಚನಗಳನ್ನು ಅರಿತು ಬಾಳುವುದು ಮುಖ್ಯ.
Team Udayavani, Aug 15, 2022, 6:19 PM IST
ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಬಸವನಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿ, ಕುಂಟೋಜಿ ಯಶಸ್ವಿನಿ ಮಹಿಳಾ ಬಳಗದ ಸಹಯೋಗದಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ರುದ್ರಾಕ್ಷಿ ದೀಕ್ಷೆ, ವಿಭೂತಿ ವಿತರಣೆ, ವಚನ ಪುಸ್ತಕಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಪ್ಪು ಮಾಡುವುದು ತಪ್ಪಲ್ಲ. ತಪ್ಪು ಅಂತಾ ತಿಳಿದ ಮೇಲೂ ಮಾಡುವ ತಪ್ಪೇ ತಪ್ಪು. ಮಹಾತ್ಮ ಗಾಂಧಿಜಿ ಜೈಲಿನಲ್ಲಿ ಇದ್ದುಕೊಂಡೇ ಆತ್ಮ ಕಥನ ಬರೆದರು. ಸುಭಾಷ್‌ಚಂದ್ರ ಬೋಸ್, ಭಗತಸಿಂಗ್ ಅವರ ಆದರ್ಶಗಳು, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಿದಲ್ಲಿ ಜೀವನದಲ್ಲಿ ಮಹಾ ಮಾನವರಾಗಲು ಸಾಧ್ಯವಿದೆ ಎಂದು ಮಾರ್ಗದರ್ಶನ ಮಾಡಿದರು.
ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಜೆ.ಐ. ಮ್ಯಾಗೇರಿ ಮಾತನಾಡಿ, ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆದರದ ಮೇಲೆ ಕೆಲವರು ಈ ವರ್ಷ ಬಿಡುಗಡೆ ಆಗಲಿದ್ದಾರೆ. ಇತರೆ ಕೈದಿಗಳು ಸಹ ಸನ್ನಡನೆ ಮೂಲಕ ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿವಿಧ ಕಾರಣಗಳಿಂದಾಗಿ ಜೈಲುಗಳಲ್ಲಿ ಬಂಧಿಗಳಾಗಿರುವ ಕೈದಿಗಳು ಮಾನಸಿಕ ವೇದನೆ ಅನುಭವಿಸುತ್ತಿದ್ದಾರೆ. ಅಂಥ ಬಂಧಿಗಳು ನೈತಿಕ ಮೌಲ್ಯಗಳ ಧಾರ್ಮಿಕ ಮಾರ್ಗ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೈದಿಗಳು ಸನ್ನಡತೆ ಮೈಗೂಡಿಸಿಕೊಳ್ಳಲು ಧಾರ್ಮಿಕ ಮಾರ್ಗಗಳ ಸರಳ ಸೂತ್ರಗಳನು ಹೇಳಿಕೊಟ್ಟಿದ್ದಾರೆ. ಇದನ್ನು ಕೈದಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮನುಷ್ಯ ಬದಲಾವಣೆಯ ಬದುಕಿಗಾಗಿ ವಚನಗಳನ್ನು ಅರಿತು ಬಾಳುವುದು ಮುಖ್ಯ. ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದಯೆ, ತಾಳ್ಮೆ, ಸಹನೆ ಹೀಗೆ ಸದ್ಗುಣಗಳು ನಿಮ್ಮದಾಗಲಿವೆ. ಸದರಿ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೈಲು ಬಂಧಿಗಳು ಭವಿಷ್ಯದಲ್ಲಿ ಸಮಾಜದ ಉತ್ತಮ ನಾಗರಿಕರಾಗಿ ಜೀವಿಸಬೇಕು ಎಂದು ವಿಶ್ವ ಬಸವ ಬಂಧು ಸಮಿತಿಯ ಡಾ| ಅಮರೇಶ ಮಿಣಜಿಗಿ ಸಲಹೆ ನೀಡಿದರು.
ಉಪನ್ಯಾಸಕ ರಾಜೇಂದ್ರಕುಮಾರ ಮಾತನಾಡಿ, ಮನುಷ್ಯನಿಗೆ ಕ್ಷಮಾಗುಣ ಅವಶ್ಯ. ದಯೆ ಕರುಣೆ ತ್ಯಾಗದಿಂದಲೇ ಎಲ್ಲವನ್ನು ಗೆಲ್ಲಬೇಕು ಎಂದರು. ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ಡಾ| ಅಮರೇಶ ಮಿಣಜಗಿ ಪ್ರಾಸ್ತಾವಿಕ ಮಾತನಾಡಿದರು.
ಐ.ಎಸ್. ಹಿರೇಮಠ, ಸುರೇಶ ಪೂಜಾರಿ ವೇದಿಕೆಯಲ್ಲಿದ್ದರು. ಬಂಧಿಖಾನೆಯಲ್ಲಿರುವ ಕೈದಿಗಳಿಗೆ ಹಣೆಗೆ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿ ವಚನ ಪುಸ್ತಕ ನೀಡಿ ಪ್ರಸಾದ ವಿತರಿಸಲಾಯಿತು. ಯಶಸ್ವಿನಿ ಮಹಿಳಾ ಸಂಘದವರು ಎಲ್ಲ ಕೈದಿಗಳಿಗೆ ರಾಖಿ ಕಟ್ಟಿ ಸಿಹಿ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಂಗಮೇಶ ಗುತ್ತೇದಾರ, ದೇವೇಂದ್ರ ಪತ್ತಾರ, ಶಿವಪುತ್ರ ಯಶರದಾ, ಶಂಕ್ರಮ್ಮ ಹೂಗಾರ, ಸ್ನೇಹಾ ಹಿರೇಮಠ, ಸಿದ್ದಮ್ಮ ಒಣರೊಟ್ಟಿ, ರೇಖಾ ಹೂಗಾರ, ಶಿವಮ್ಮ ಹೂಗಾರ ಇದ್ದರು. ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಶಕೀಲಾ ಬೇಗಂ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.