ಗೋಲಗುಂಬಜ,ಪಿಸುಗುಟ್ಟುವ ಗ್ಯಾಲರಿ ವಾಸ್ತು ವಿನ್ಯಾಸ ಕಂಡು ಅಚ್ಚರಿಪಟ್ಟ ಡಾ.ವೀರೇಂದ್ರ ಹೆಗ್ಗಡೆ
Team Udayavani, Nov 12, 2021, 9:46 PM IST
ವಿಜಯಪುರ: ಧರ್ಮಸ್ಥಳ ಮಂಜುನಾಥೇಶ್ವರ ಶ್ರೀಕ್ಷೇತ್ರದ ಧರ್ಮದರ್ಶಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಜಗದ್ವಿಖ್ಯಾತ ಪಾರಂಪರಿಕ ಗೋಲಗುಂಬಜ ಸ್ಮಾರಕ ವೀಕ್ಷಿಸಿ ಸಂಭ್ರಮಿಸಿದರು.
ಶುಕ್ರವಾರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಐತಿಹಾಸಿಕ ಗೋಲಗುಂಬಜ ಸ್ಮಾರಕವನ್ನೂ ವೀಕ್ಷಿಸಿದರು.
ಕುಟುಂಬದ ಸದಸ್ಯೆ ಶ್ರಧ್ದಾ ಹೆಗ್ಗಡೆ ಅವರೊಂದಿಗೆ ಗೋಲಗುಂಬಜ ಸ್ಮಾರಕ ಆವರಣಕ್ಕೆ ಆಗಮಿಸುತ್ತಲೇ ಡಾ.ಹೆಗ್ಗಡೆ ಅವರು ಸ್ಮಾರಕದ ವಾಸ್ತು ವಿನ್ಯಾಸ ಕಂಡು ಮೂಕ ವಿಸ್ಮಿತರಾದರು.
ನಂತರ ಯಾರ ಸಹಾಯವೂ ಇಲ್ಲದೇ ಯುವಕರಂತೆ ಗುಮ್ಮಟವನ್ನು ಏರಿದ ಡಾ.ಹೆಗ್ಗಡೆ ಅವರು, ತಮ್ಮ ಮೊಬೈಲ್ ನಲ್ಲಿ ಗುಮ್ಮಟದ ಮೇಲಿಂದ ವಿಜಯಪುರ ನಗರದ ಸುಂದರ ನೋಟವನ್ನು ಕುತೂಹಲದಿಂದ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದರು.
ನಂತರ ಗುಮ್ಮಟದಲ್ಲಿ ಹೊರಹೊಮ್ಮುವ ಸಪ್ತಧ್ವನಿ ಕೇಳಿ, ಬಾಲ್ಯದಲ್ಲಿ ಈ ಸ್ಮಾರಕ ವೀಕ್ಷಣೆಗೆ ಆಗಮಿಸಿದ ನೆನಪಿನ ಬುತ್ತಿ ಬಿಚ್ಚಿದರು.
ಒಂದೇ ಒಂದು ಕಂಬದ ಆಸರೆ ಇಲ್ಲದೇ ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಿಸಿರುವ ಸ್ಮಾರಕ ಜಾಗತಿಕ ಆಕರ್ಷಣೆ ಆಗಿರುವಲ್ಲಿ ಅಚ್ಚರಿ ಪಡುವಂತಿದೆ ಎಂದರು.
ಎಲ್ಲಕ್ಕಿಂತ ಹೆಚ್ಚಾಗಿ ಗುಮ್ಮಟದ ಗೋಡೆಯ ಗ್ಯಾಲರಿಯ ಕಿಂಡಿಗಳಿಂದ ಹೊರ ಹೊಮ್ಮುವ ಪಿಸುಮಾತಿನ ವಿನ್ಯಾಸದಿಂದ ಹೊರ ಹೊಮ್ಮಿದ ಧ್ವನಿಯನ್ನು ಆಲಿಸಿ ಅಚ್ಚರಿ ವ್ಯಕ್ತಪಡಿಸಿದರು.
ತಾವು ಗುಮ್ಮಟ ವೀಕ್ಷಣೆಗೆ ಬರುವ ಸಂದರ್ಭದಲ್ಲಿ ಗೋಲಗುಂಬಜ ಸಿಬ್ಬಂದಿ, ಪ್ರವಾಸಿ ಮಾರ್ಗದರ್ಶಿಗಳು ಜನರನ್ನು ದೂರ ಸರಿಸುವಾಗ, ನನ್ನಿಂದಾಗಿ ಯಾವ ಪ್ರವಾಸಿಗರಿಗೂ ತೊಂದರೆ ಆಗುವುದು ಬೇಡ. ಅವರು ಕೂಡ ನಮ್ಂಮತೆಯೇ ಸ್ಮಾರಕ ವೀಕ್ಷಣೆಗೆ ಬಂದಿದ್ದಾರೆ. ಹೀಗಾಗಿ ಯಾರಿಗೂ ತಮ್ಮಿಂದ ತೊಂದರೆ ಆಗಬಾರದು ಎಂದು ತಮಗೆ ವಿಶೇಷ ಆದ್ಯತೆ ನೀಡುವುದನ್ನು ನಿರಾಕರಿಸಿ, ಸರಳತೆ ಮೆರೆದರು.
ವಿಜಯಪುರ ಇತಿಹಾಸ, ಗೋಲಗುಮ್ಮಟ ಸ್ಮಾರಕ ನಿರ್ಮಾಣದ ಹಿನ್ನೆಲೆ, ಗುಮ್ಮಟದ ಹೊರತಾಗಿ ವಿಜಯಪುರ ನಗರದಲ್ಲಿ ಶಾಹಿ ಅರಸರು ನಿರ್ಮಿಸಿರುವ ನೂರಾರು ಸ್ಮಾರಕಗಳು ಒಂದಕ್ಕಿಂತ ಒಂದು ವಿಭಿನ್ನ, ವಿಶಿಷ್ಟ ವಾಸ್ತು ವಿನ್ಯಾಸ ಹೊಂದಿರುವುದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.
ಇದಲ್ಲದೇ ತಮಗೆ ವಿಜಯಪುರ ಇತಿಹಾಸ, ಸ್ಮಾರಕಗಳ ವೈಶಿಷ್ಟ್ಯದ ಕುರಿತು ವಿವರಿಸಿದ ಪ್ರವಾಸಿ ಮಾರ್ಗದರ್ಶಿ ರಾಜಶೇಖರ ಕಲ್ಯಾಣಮಠ ಅವರ ನಿರೂಪಣಾ ಶೈಲಿಯನ್ನು ಶ್ಲಾಘಿಸಿದ ಧರ್ಮಸ್ಥಳ ಧರ್ಮದರ್ಶಿ ಡಾ.ಹೆಗ್ಗಡೆ ಅವರು, ಶ್ರೀ ಮಠದ ಶಾಲು ನೀಡಿ ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.