Vijayapur; ಶಿಕ್ಷಕರ ನೇಮಕಾತಿಯಲ್ಲಿ ನಿರ್ಲಕ್ಷ್ಯ ಆರೋಪ: ಡಿಡಿಪಿಐ ಕಛೇರಿಯ ಇಬ್ಬರು ಸಸ್ಪೆಂಡ್
Team Udayavani, Dec 24, 2023, 3:30 PM IST
ವಿಜಯಪುರ: ಶಿಕ್ಷಕ ಹುದ್ದೆಗೆ ನೇಮಕವಾದ ಅಭ್ಯರ್ಥಿಗಳ ದಾಖಲೆ ಪರಿಶೀಲಿಸಿ, ಆದೇಶ ನೀಡುವ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಉಪ ನಿರ್ದೇಶಕರ ಕಛೇರಿ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಕರ್ತವ್ಯ ನಿರ್ಲಕ್ಷ್ಯದಿಂದಾಗಿ ವಿಜಯಪುರ ಡಿಡಿಪಿಐ ಕಛೇರಿ ಅಧೀಕ್ಷಕ ಆರ್.ಬಿ.ಅಗರಖೇಡ್, ಪತ್ರಾಂಕಿತ ಸಹಾಯಕ ಎಸ್.ಎಂ. ಕೋಟಿ ಇವರನ್ನು ಸೇವೆಯಿಂದ ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಅಪರ ಆಯುಕ್ತೆ ಜಯಶ್ರೀ ಶಿಂತ್ರೆ ಡಿ.22 ರಂದು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಪ್ರಾಥಮಿಕ ಶಾಲೆಗೆ 719 ಶಿಕ್ಷಕರ ನೇಮಕ ಆಗಿದ್ದು, ನೇಮಕಗೊಂಡವರ ಶೈಕ್ಷಣಿಕ ಹಾಗೂ ಇತರೆ ಅಗತ್ಯ ದಾಖಲೆ ಪರಿಶೀಲಿಸುವಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡದೆ ಅನಗತ್ಯ ವಿಳಂಬ ಮಾಡಿದ್ದಾರೆ. ನೇಮಕಾತಿ ಹೊಂದಿದ ಅಭ್ಯರ್ಥಿಗಳನ್ನು ಅನಗತ್ಯವಾಗಿ ಕಛೇರಿಗೆ ಅಲೆಯುವಂತೆ ಮಾಡಿದ್ದಾರೆ. ಅಪರ ಆಯುಕ್ತೆ ದಿ.22-11-2023 ರಂದು ವಿಜಯಪುರ ಡಿಡಿಪಿಐ ಕಛೇರಿಗೆ ಭೇಟಿ ನೀಡಿದಾಗ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ, ಕರ್ತವ್ಯಕ್ಕೆ ಹಾಜರಾಗದೆ, ಸ್ವೀಕೃತ ಕಡತಗಳ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ತೊರಿದ್ದು ಕೂಡ ಕಂಡು ಬಂದಿದೆ.
ದಿ.16-11-2023 ರಂದು ಶಿಕ್ಷಣ ಸಚಿವರು ನಡೆಸಿದ ರಾಜ್ಯ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಿಕ್ಷಕ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಅದೇಶ ನೀಡುವಂತೆ ಡಿಡಿಪಿಐ ಅವರಿಗೆ ನೀಡಿದ ನಿರ್ದೇಶನ ಪಾಲಿಸುವಲ್ಲಿಯೂ ಈ ಇಬ್ಬರು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇಲೆ ಈ ಇಬ್ಬರೂ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾಗಿ ಅಮಾನತು ಆದೇಶದಲ್ಲಿ ಕಾರಣ ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.