ಸಾಹಿತ್ಯ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆ ಕೊಡುಗೆ ಅಪಾರ
Team Udayavani, Jan 1, 2022, 6:17 PM IST
ವಿಜಯಪುರ: ಸದಾ ಕಾಲ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ವಿಶಿಷ್ಠ ಕೊಡುಗೆ ನೀಡುತ್ತಿರುವ ವಿಜಯಪುರ ಜಿಲ್ಲೆ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ, ಜಾನಪದ ಹೀಗೆ ಎಲ್ಲ ಕ್ಷೇತ್ರಗಳಿಗೂ ತನ್ನ ಪ್ರತಿಭೆಗಳನ್ನು ಧಾರೆ ಎರೆದಿದೆ. ಅಪಾರ ಪ್ರಮಾಣದ ವೈವಿಧ್ಯಪೂರ್ಣ ಜ್ಞಾನ ಸಂಪತ್ತಿನ ಕೃತಿಗಳನ್ನು ನಾಡಿಗೆ ನೀಡಿದ ನೆಲವಿದು ಎಂದು ವಿವೇಕಾನಂದ ಸಬರದ ಅಭಿಪ್ರಾಯಪಟ್ಟರು.
ನಗರದ ಖ್ಯಾತ ಆಯುರ್ವೇದ ವೈದ್ಯೆ ಡಾ| ಸನ್ಮತಿ ಕುರಂದವಾಡೆ ರಚಿಸಿದ ಎ ಯೂನಿಕ್ ಹ್ಯಾಂಡ್ ಬುಕ್ ಆಫ್ ಇಂಟಿಗ್ರೇಟೆಡ್ ಮೆಡಿಕಲ್ ಪ್ಯಾಕ್ಟೀಸನರ್ ಆ್ಯಂಡ್ ಆಯುರ್ವೇದ ಕೃತಿ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಆ ಸಾಹಿತ್ಯ ಕ್ಷೇತ್ರ ಮುಂದುವರಿದು ಆಯುರ್ವೇದ ವೈದ್ಯಕೀಯ ವಿಷಯಗಳು ಸಾಹಿತ್ಯಿಕವಾಗಿ ಓದುಗರಿಗೆ ಮುಟ್ಟಿಸುವ ಹಿನ್ನೆಲೆ ಹೊಂದಿದೆ ಎಂದರು.
ಪತ್ರಿಕಾ ಪ್ರಕಟಿತ ವಿವಿಧ ಲೇಖನಗಳನ್ನು ಕ್ರೋಢೀಕರಿಸಿ ಉತ್ತಮ ಕೃತಿ ಹೊರ ತಂದಿರುವುದು ಅರ್ಥಪೂರ್ಣ ಕಾರ್ಯ. ಆಯುರ್ವೇದ ಒಂದು ಅದ್ಭುತವಾದ ಪ್ರಪಂಚ. ಅನೇಕ ರೋಗಗಳಿಗೆ ಆಯುರ್ವೇ ದದಲ್ಲಿ ಮದ್ದು ಅಡಗಿದೆ ಎಂದರು.
ಇಡಿ ಜಗತ್ತು ಆಯುರ್ವೇದದ ಶಕ್ತಿಯನ್ನು ಮೆಚ್ಚಿಕೊಳ್ಳುತ್ತಿದೆ, ಯಾವುದೇ ಅಡ್ಡಪರಿಣಾಮ ಗಳಿಲ್ಲದ ವೈದ್ಯ ಪದ್ಧತಿ ಆಯುರ್ವೇದ ಇಡಿ ಜಗತ್ತಿನ ಗಮನ ಸೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ಡಾ| ಪ್ರವೀಣಕುಮಾರ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಅಶೋಕಕುಮಾರ ಬಾಗಮಾ, ಗೌರವ ತಿವಾರಿ, ಡಾ| ನಿ ಧಿ ಗುಪ್ತಾ, ಆರ್. ಎಸ್. ಪಾಂಡೆ, ಎಸ್.ಎಂ. ಕರ್ಪೂರಮಠ, ಡಾ| ಓಂಕಾರ ಕಾಕಡೆ, ಕೆ.ಬಿ.ನಾಗೂರ, ಜೆ.ಸಿ. ಹುದ್ದಾರ, ವಿನಯಕುಮಾರ ತುಂಗಳ, ಅನಿತಾ ನಾಯಕ, ಆನಂದ ಕಟ್ಟಿ, ಎಸ್.ಪಿ.ಮನಗೂಳಿ, ಡಿ.ಎನ್.ಧರಿ, ಅರವಿಂದ ಢಾಣಕಶಿರೂರ, ಎ.ಎಂ.ವಾಲಿ, ರಮೇಶ ಕತ್ತಿ, ಭರತೇಶ ಕುರಂದವಾಡೆ, ವಿಜಯಮಹಾಂತೇಶ ಚೌಧರಿ, ಅಮರ ಗಡೆಕರ, ಅಮೀರುದ್ದೀನ್ ಖಾಜಿ ಸೇರಿದಮತೆ ಇತರರು ಇದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯ ಚಿತ್ರಕಾರ ಸಮೀರ್ ಹಾದಿಮನಿ, ಬಿಷಕ್ ಭೂಷಣ ರಾಜ್ಯ ಪ್ರಶಸ್ತಿ ವಿಜೇತೆ ರೇಣುಕಾ ತೆನಳ್ಳಿ, ಲಿಂಗಾರಡ್ಡಿ ಬಿರಾದಾರ, ಸದಾ ಬಸವರಾಜ ತೇಲಿ ಅವರನ್ನು ಸನ್ಮಾನಿಸಲಾಯಿತು. ಗೀತಾ ಕುಲಕರ್ಣಿ ಸಂಗೀತ ಕಾರ್ಯಕ್ರಮ ನೀಡಿದರು. ಮಂಜುನಾಥ ಜುನಗೊಂಡ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.