ವಿಜಯಪುರ: ದೆಹಲಿ ರೈತರ ಹೋರಾಟಕ್ಕೆ ಬೆಂಬಲ
ರೈತ ಸಂಘಟನೆಗಳ ಹೋರಾಟವನ್ನೇ ಒಡೆಯುವ ಹುನ್ನಾರ ನಡೆಯುತ್ತಿದೆ.
Team Udayavani, Feb 1, 2021, 6:30 PM IST
ವಿಜಯಪುರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು. ಎಐಕೆಎಸ್‌ಸಿಸಿ, ಪ್ರಗತಿಪರ ಸಂಘಟನೆಗಳ ವೇದಿಕೆ, ವಿಜಯಪುರ ವಿದ್ಯಾರ್ಥಿ, ಯುವಜನ ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪಿತ ಗಾಂಧೀಜಿ ಹುತಾತ್ಮರಾದ ದಿನದ ಸ್ಮರಣೆ ಹಾಗೂ ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರೈತರ ನ್ಯಾಯಯುತ ಹೋರಾಟ ಯಶಸ್ವಿಯಾಗಲಿ. ದೆಹಲಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪಿಗಳನ್ನು ಬಂ ಧಿಸಿ ಶಿಕ್ಷಿಸಬೇಕು. ರೈತರ ಹೋರಾಟ ಹತ್ತಿಕ್ಕುತ್ತಿರುವ ಪ್ರಜಾತಂತ್ರದ ವಿರೋಧಿ ಸರ್ಕಾರ ಪ್ಯಾಸಿಸ್ಟ್ ವಾದವನ್ನು ಬೆಳೆಸುತ್ತಿದೆ. ಪ್ರಜಾತಂತ್ರದ ಮೌಲ್ಯಗಳು ಎತ್ತಿ ಹಿಡಿಯಲು ಎಲ್ಲರೂ ರೈತರ ಹೋರಾಟ ಬೆಂಬಲಿಸಬೇಕು. ರೈತ ಹುತಾತ್ಮರಿಗೆ ಸ್ಮರಣೆಯ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ನಾಯಕ ಭೀಮಶಿ ಕಲಾದಗಿ ಮಾತನಾಡಿ, ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ನಡೆಸಿದ ಶಾಂತ ರೀತಿಯಿಂದ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕೆಂಪು ಕೋಟೆಗೆ ಪ್ರವೇಶಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ರೀತಿಯಲ್ಲಿ ವರ್ತಿಸಿದ್ದಾರೆ. ದುರುದ್ದೇಶದಿಂದ ನಡೆದ ಇಂಥ ರಾಷ್ಟ್ರದ್ರೋಹದ ಕೆಲಸವನ್ನು ಇಡಿ ದೇಶವೇ ಖಂಡಿಸುತ್ತದೆ. ರೈತರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಿದವರು ಇದೀಗ ಸಿಕ್ಕಿಬಿದ್ದಿದ್ದು, ಅವರ ಹಿನ್ನೆಲೆಯೂ ಬಹಿರಂಗವಾಗಿದೆ. ಇಂಥ ದೇಶದ್ರೋಹಿ ಕೃತ್ಯ ಎಸಗಿದವರಿಗೆ ಉಗ್ರ ಶಿಕ್ಷೆ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಆರ್‌ಕೆಎಸ್ ರೈತ ಸಂಘಟನೆ ರಾಜ್ಯ ಮುಖಂಡ ಬಿ.ಭಗವಾನ್ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಹುನ್ನಾರದಿಂದಾಗಿ ಬಹುರಾಷ್ಟ್ರೀಯ-ಕಾರ್ಪೊರೇಟ್ ಕಂಪನಿಗಳ ಮೋಸ, ಶೋಷಣೆಗೆ ರೈತರು ಬಲಿಯಾಗುತ್ತಾರೆ. ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿ ಕಿತ್ತುಕೊಳ್ಳಲಾಗುತ್ತದೆ. ಕೃಷಿಯನ್ನು ಖಾಸಗಿ ಕಂಪನಿಗಳ ನಿಯಂತ್ರಣಕ್ಕೆ ತರುವ ಮೂಲಕ ರೈತರು ಸಂಪೂರ್ಣ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ, ಬಂಡವಾಳಶಾಹಿ ಉದ್ಯಮಿಗಳಿಗೆ ಭೂಮಿ ಪಾಲಾಗುತ್ತಿದ್ದು ಭಾರತದ ಭವಿಷ್ಯದ ಕೃಷಿ ಹಾಗೂ ಆಹಾರ ಸ್ಥಿತಿ ಗಂಭೀರ ಸ್ವರೂಪ ಪಡೆಯಲಿದೆ ಎಂದು ದೂರಿದರು.
ರೈತ ಮುಖಂಡ ಪ್ರಕಾಶ ಹಿಟ್ನಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ರೈತ ನಾಯಕರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದರೂ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ಮುಂದಾಗದೇ ಹಠಮಾರಿ ಧೋರಣೆ ಅನುರಿಸಿದೆ. ಮತ್ತೂಂದೆಡೆ ಹೋರಾಟವನ್ನು ಹತ್ತಿಕ್ಕಿ, ರೈತ ಸಂಘಟನೆಗಳ ಹೋರಾಟವನ್ನೇ ಒಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ಹೋರಾಟದ ದಿಕ್ಕು ತಪ್ಪಿಸಲು ಕುತಂತ್ರ ನಡೆಸುತ್ತಿದ್ದು, ಚಳವಳಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಕೆಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಗಣರಾಜ್ಯೋತ್ಸವ ನಂತರವೂ ಇನ್ನೂ ಹೆಚ್ಚು ರೈತರು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಮಾಧ್ಯಮಗಳು ಮಾತ್ರ ರೈತ ಹೋರಾಟದ ಸುದ್ದಿಯನ್ನು ಪ್ರಕಟಿಸುವ, ಬಿತ್ತರಿಸದೇ ಸರ್ಕಾರದ ಪರ ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ಲಕ್ಷಾಂತರ ರೈತರು ತಮ್ಮ ಟ್ರಾಕ್ಟರ್‌ಗಳೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದರೂ ರೈತರ ಹೋರಾಟದ ವಾಸ್ತವ ಚಿತ್ರಣ ವರದಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಗಳ ವೇದಿಕೆಯ ಅಣ್ಣಾರಾಯ ಈಳಗೇರ, ಶಕ್ತಿಕುಮಾರ, ಸುಜಾತಾ ಶಿಂಧೆ, ಸಿದ್ದಲಿಂಗ ಬಾಗೇವಾಡಿ, ಇರ್ಫಾನ್ ಶೇಖ, ಸದಾನಂದ ಮೋದಿ, ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ, ಸುರೇಖಾ ರಜಪೂತ, ಸಿ.ಬಿ. ಪಾಟೀಲ, ಭರತಕುಮಾರ, ದಸ್ತಗೀರ್ ಸಾಲೋಟಗಿ, ಶಂಕರಗೌಡ ಲಿಗಾಡೆ, ಆಕಾಶ, ಸಂಗಪ್ಪ ಕಪಾಳೆ, ಶೋಭಾ ಬಗಲಿ, ಲತಾ ಇಟಿ, ಗೌರಿ, ಕಾವೇರಿ ಸಂದೀಪ ವಠಾರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.