ಹದಿನೆಂಟನ್ನು ಅದ್ಧೂರಿ ಸ್ವಾಗತಿಸಿದ ವಿಜಯಪುರ
Team Udayavani, Jan 1, 2018, 3:13 PM IST
ವಿಜಯಪುರ: ನೋವು-ನಲಿವುಗಳನ್ನು ಸಮಾನವಾಗಿ ಮಡಿಲಲ್ಲಿ ಮಲಗಿಸಿಕೊಂಡು ಹದಿನೇಳನ್ನು ಬೀಳ್ಕೊಟ್ಟ ಗುಮ್ಮಟ ನಗರಿ ವಿಜಯಪುರದ ಜನತೆ ಹದಿನೆಂಟನ್ನು ಕೂಡ ಮತ್ತದೇ ಹೊಸ ನಿರೀಕ್ಷೆಯ ಭರವಸೆಯೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಹೊಸ ವರ್ಷವನ್ನು ಬಲೂನ್ ಹಾರಿಸಿ ಬಿಟ್ಟು, ಕೇಕ್ ಕತ್ತರಿಸಿ, ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಹೊಸ ವರ್ಷದ ಆಚರಣೆಗೆ ಬರುವ ತನ್ನ ಗ್ರಾಹಕರನ್ನು ಸಂತೃಪ್ತಿ ಪಡಿಸಲು ನಗರದ ಹಲವು ಹೋಟೆಲ್‌ಗಳು ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದವು. ಇದರಿಂದಾಗಿ ಬಹುತೇಕ ಹೋಟೆಲ್‌ಗಳು ಮಧ್ಯರಾತ್ರಿವರೆಗೂ ಭರ್ತಿಯಾಗಿದ್ದು ಗ್ರಾಹಕರಿಗೆ ಸೇವೆ ನೀಡಿದವು.
ಹೊಸ ವರ್ಷ ಎಂದರೆ ಮದ್ಯ ಸೇವಿಸಿ ಬರಮಾಡಿಕೊಳ್ಳುವುದು ಎಂಬ ಸಾಮಾನ್ಯ ಸ್ಥಿತಿ. ಆದರೆ ಇದಕ್ಕೆ ಬದಲಾಗಿ ನಗರದ ಹಲವು ಹೋಟೆಲ್‌ಗಳು ಮದ್ಯ ರಹಿತವಾದ ಹಾಗೂ ಪರಿಶುದ್ಧ ತರೆವಾರಿ ಸಸ್ಯಹಾರದೊಂದಿಗೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದವು. ಹೊಸ ವರ್ಷದಲ್ಲಿ ಸಂತಸವನ್ನು ಮೈದುಂಬಿಕೊಂಡು ಬರುವಂತಾಗುವ ಆಶಯದೊಂದಿಗೆ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಬಂದು ಸಂತಸದಿಂದ ಹೊಸ ವರ್ಷವನ್ನು ಆಚರಿಸಿದರು.
ಹೊಸ ವರ್ಷಕ್ಕಾಗಿ ಜಿಲ್ಲೆಯ ಬಹುತೇಕ ಬೇಕರಿ ಕೇಂದ್ರಗಳು ಮಧ್ಯ ರಾತ್ರಿವರೆಗೂ ತಾವು ತಯಾರಿಸಿದ್ದ ತರೆವಾರಿ ಕೇಕ್ ಮಾರುತ್ತಿದ್ದವು. ಪರಿಣಾಮ ಬೇಕರಿ ಕೇಂದ್ರಗಳು ರಾತ್ರಿಯಾದರೂ ಜನರಿಂದ ತುಂಬಿ ತುಳಕುತ್ತಿದ್ದವು.
ವಿಭಿನ್ನ ಹಾಗೂ ವಿವಿಧ ಖಾದ್ಯಗಳ ಊಟ ಹಾಗೂ ಹೊಸ ವರ್ಷಕ್ಕಾಗಿ ಇತರೆ ವಿಶೇಷ ಸೇವೆ ನೀಡಲು ಹೋಟೆಲ್‌ಗಳು ಕೂಡ ನಿಗದಿಗಿಂತ ಹೆಚ್ಚಿನ ಹಾಗೂ ವಿಶೇಷ ಶುಲ್ಕವನ್ನೂ ವಿಧಿಸಿದ್ದವು.
ನಗರದ ಆಶ್ರಮ ರಸ್ತೆಯ ಸಾಯಿ ವಿಹಾರದಲ್ಲಿ ಎಫ್-ಎಫ್ ಗ್ರೂಫ್‌ನವರು ದೊಡ್ಡ ವೇದಿಕೆ ನಿರ್ಮಿಸಿ, ಸಿಹಿ ಹಾಗೂ ಖಾರದ ವಿವಿಧ ವೈವಿಧ್ಯಮಯ ಊಟದ ವ್ಯವಸ್ಥೆ ಮಾಡಿದ್ದರು. ಹಳೆಯ ವರ್ಷ ನಿರ್ಗಮಿಸಿ ಹೊಸ ವರ್ಷ ದರ್ಶನ ನೀಡುತ್ತಲೇ ವೇದಿಕೆ ಏರಿದ ಜನರು ಸಂಭ್ರಮಿಸಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಎಂದು ಪುರುಷ-ಮಹಿಳೆ, ಮಕ್ಕಳು, ಯುವಕರು-ಹಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
ಆಧುನಿಕ ತಂತ್ರಜ್ಞಾನ ಮೊಬೈಲ್ ಮೂಲಕ ಸಚಿತ್ರ ಸಂದೇಶ ಕಳಿಸಿ, ಕರೆ ಮಾಡಿ ಹೊಸ ವರ್ಷದ ಶುಭಾಶಯ ವಿನಯಮ ಮಾಡಿಕೊಂಡು ನವ ವರ್ಷವಾದರೂ ತಮ್ಮ ಬಾಳಲ್ಲಿ ಸಂತಸದ ಬೆಳಕು ಹರಿಯಲಿ ಎಂದು ಜಿಲ್ಲೆಯ ಜನರು ಸಂತಸ ಹಾಗೂ ಸಂಭ್ರಮದಿಂದ ಬರಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.