ಯಂಕಂಚಿ ರೈತನ ಆಕಳು ಕೊಂದ ವನ್ಯಜೀವಿ
ಚಿರತೆಯೋ ? ಹೈನಾವೋ ? ರೈತರು ಅರಣ್ಯಾಧಿಕಾರಿಗಳ ನಡುವೆ ಸಂಶಯ
Team Udayavani, Feb 5, 2021, 4:40 PM IST
ವಿಜಯಪುರ : ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಯಂಕನಗೌಡ ಬಿರಾದಾರ ಎಂಬವರ ಕರುಗಳ ಮೇಲೆ ಹಿಂಬದಿಯಿಂದ ದಾಳಿ ಮಾಡಿರುವ ವನ್ಯಜೀವಿ, ಕರುವನ್ನು ಹತ್ಯೆ ಮಾಡಿ, ಕರುವಿನ ಕೆಲಭಾಗವನ್ನು ತಿಂದು ಹಾಕಿದೆ. ರೈತರ ಸಾಕುಪ್ರಾಣಿಗಳ ಹಂತಕ ವನ್ಯಜೀವಿಯ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿದ್ದಾರೆ.
ಓದಿ:ವಟಗಲ್ ಏತ ನೀರಾವರಿ ಜಾರಿಗೆ ಹೋರಾಟ
ಶುಕ್ರವಾರ(ಫೆ.5) ಬೆಳಿಗ್ಗೆ ಎರಡು ಕರುಗಳನ್ನು ಕೊಂದು ಹಾಕಿರುವ ವನ್ಯಜೀವಿ, ನಂತರ ನಾಪತ್ತೆಯಾಗಿದೆ. ಕರುಗಳ ಮೇಲೆ ದಾಳಿ ಮಾಡಿದ್ದು ಚಿರತೆ ಎಂದು ಹೇಳಲಾಗುತ್ತಿದೆ. ಆದರೇ, ಮೃತ ಕರುಗಳ ದೇಹದ ಮೇಲಿನ ಗಾಯದ ಗುರುತುಗಳು, ಹಿಂಬದಿಯಿಂದ ದಾಳಿ ಮಾಡಿರುವ ಕ್ರಮ, ಮೃತ ಕರುವಿನ ದೇಹದ ಮೇಲಾಗಿರುವ ಉಗುರಿನ ಗಾಯದ ಕಲೆಗಳ ಆಧಾರದಲ್ಲಿ ಇದು ಹೈನಾ ಎಂಬ ವನ್ಯಜೀವಿ ಕೃತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಸದ್ಯ, ರೈತರ ಕರುಗಳನ್ನು ಹತ್ಯೆ ಮಾಡಿದ ಸ್ಥಳದಲ್ಲಿ ಬೋನು ಇರಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ವನ್ಯಜೀವಿಗಳ ಸೆರೆಗೆ ಮುಂದಾಗಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಆಹೇರಿ, ಬೊಮ್ಮನಹಳ್ಳಿ ಭಾಗದಲ್ಲಿ ವನ್ಯಜೀವಿಗಳಿಂದ ಹಲವು ಬಾರಿ ಸಾಕು ಪ್ರಾಣಿಗಳ ಮೇಲೆ ಇಂತಹ ದಾಳಿ ನಡೆದಿದೆ.
ನೀರಾವರಿ ಸೌಲಭ್ಯ ಬಂದಿದ್ದೇ ವನ್ಯ ಜೀವಿಗಳ ನಾಡ ಪ್ರವೇಶಕ್ಕೆ ಕಾರಣನಾ..?
ಸಿಂದಗಿ, ಇಂಡಿ ತಾಲೂಕಗಳಲ್ಲಿ ಕಬ್ಬು ಹೇರಳವಾಗಿ ಬೆಳೆಯಲಾಗುತ್ತಿದೆ. ಕನಿಷ್ಟ 8-10 ತಿಂಗಳ ಅವಧಿಯಲ್ಲಿ ಕಬ್ಬಿನ ಗದ್ದೆಗಳು ನಿರ್ಜನವಾಗಿರುತ್ತವೆ. ಅಲ್ಲದೇ ಈ ಪ್ರದೇಶದ ಹಳ್ಳಗಳ ಪರಿಸರದಲ್ಲಿ ದಟ್ಟ ಮುಳ್ಳುಕಂಟಿ, ಕುಡಿಯಲು ನೀರು ಸಿಗುತ್ತಿದೆ. ಹೀಗಾಗಿ ಈ ಪರಿಸರದಲ್ಲಿ ಮುಳ್ಳುಹಂದಿ, ಕಾಡುಹಂದಿ, ಹೈನಾ, ಚಿರತೆ ಸೇರಿದಂತೆ ವನ್ಯಜೀವಿಗಳ ವಾಸಕ್ಕೆ ಪ್ರಶಸ್ತ ಸ್ಥಳವಾಗಿ ಪರಿಣಮಿಸಿದೆ. ಹೀಗಾಗಿ ಈ ಪರಿಸರದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಿದೆ ಎನ್ನಲಾಗುತ್ತಿದೆ.
ಇದಲ್ಲದೇ ಯಾದಗಿರಿ ಜಿಲ್ಲೆಯ ಸುರಪುರ ಬೆಟ್ಟಗಳಲ್ಲಿ ಚಿರತೆ ನೆಲೆ ಇದ್ದು, ಗಡಿಯಲ್ಲಿ ಇರುವ ವಿಜಯಪುರ ಜಿಲ್ಲೆಗೂ ಆಹಾರ ಹಾಗೂ ಸುರಕ್ಷಿತ ಸ್ಥಳ ಹುಡುಕಿಕೊಂಡು ಬರತೊಡಗಿವೆ. ಈ ಪ್ರದೇಶದ ಬಳಗಾನೂರ ಬಳಿ ಕೆಲ ತಿಂಗಳ ಹಿಂದೆ ಆಹಾರಕ್ಕಾಗಿ ಚಿರತೆ ಅಲೆದಾಟ ಮಾಡಿದ್ದನ್ನು ಜನರು ಕಂಡಿದ್ದಾರೆ. ಹೀಗಾಗಿ ದಾಳಿಯ ಲಕ್ಷಣಗಳನ್ನು ಹೊರತುಪಡಿಸಿಯೂ ಚಿರತೆ ದಾಳಿ ಅಲ್ಲಗಳೆಯಲಾಗದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜನರ ಮೇಲೆ ದಾಳಿ ಮಾಡಿ ಜೀವಹಾನಿ ಮಾಡುವ ಮುನ್ನ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.