ಒಣದ್ರಾಕ್ಷಿ ಬಹಿರಂಗ ಹರಾ‌ಜು ವ್ಯವಸ್ಥೆಗಿಲ್ಲ ಅವಕಾಶ


Team Udayavani, Jun 21, 2020, 7:21 AM IST

ಒಣದ್ರಾಕ್ಷಿ ಬಹಿರಂಗ ಹರಾ‌ಜು ವ್ಯವಸ್ಥೆಗಿಲ್ಲ ಅವಕಾಶ

ವಿಜಯಪುರ: ಬಹಿರಂಗ ಹರಾಜಿನಿಂದ ಜಿಲ್ಲೆಯ ಒಣದ್ರಾಕ್ಷಿ ಬೆಳೆಗಾರ ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ವಿಜಯಪುರ ಎಪಿಎಂಸಿ ಪ್ರತಿ ಶನಿವಾರ ನಡೆಸುವ ಇ-ಟ್ರೇಡಿಂಗ್‌ ಇನ್ನು ಮಂಗಳವಾರವೂ ನಡೆಸಲಿದೆ.  ಇದರಿಂದ ವಾರದಲ್ಲಿ ಈ ಎರಡು ದಿನವೂ ಒತ್ತಡ ಹೆಚ್ಚಿದರೆ ಮೂರು ದಿನ ಆನ್‌ಲೈನ್‌ ಟ್ರೇಡಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಹಿರಂಗ ಹರಾಜು ವ್ಯವೆಸ್ಥೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಎಪಿಎಂಸಿ ಸ್ಪಷ್ಟಪಡಿಸಿದೆ.

ಈ ಕುರಿತು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ ಹಾಗೂ ದ್ರಾಕ್ಷಿ ಬೆಳೆಗಾರರಾದ ಕೆ.ಎಚ್‌. ಮುಂಬಾರಡ್ಡಿ, ಎಂ.ಎಸ್‌. ರುದ್ರಗೌಡರ, ರೈತರಿಗೆ ಆಗುತ್ತಿರುವ ಹಲವು ತೀರಿಯ ಸಮಸ್ಯೆ ನೀಗಲು ಬಹಿರಂಗ ಹರಾಜು ಸ್ಥಗಿತಗೊಳಿಸಿ ಇ-ಟ್ರೇಟಿಂಗ್‌ ಮಾಡಿ ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಏಳೆಂಟು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಆನ್‌ಲೈನ್‌ ಮಾರಾಟಕ್ಕೆ ಶಾಸಕ ಬಸನಗೌಡ ಪಾಟೀಲ ಅವರ ಒತ್ತಾಸೆಯಂತೆ ಮರಳಿ ಆರಂಭಿಸಿದ್ದು, ರೈತರಿಗೆ ಇದರಿಂದ ಅನುಕೂಲವಿದೆ ಎಂದರು.

ಒಣದ್ರಾಕ್ಷಿ ಖರೀದಿಗಾಗಿ ಲೈಸೆನ್ಸ್‌ ಹೊಂದಿರುವ 10 ಖರೀದಿದಾರರಲ್ಲಿ 8 ಜನರು ಮಾತ್ರ ಸಕ್ರೀಯವಾಗಿದ್ದು, ಇವರು ಮಾಡುವ ವಂಚನೆಯಿಂದ ರೈತರಿಗೆ ಸೂಕ್ತ ಬೆಲೆ ನೀಡಿಕೆಯಲ್ಲಿ ಭಾರಿ ನಷ್ಟವಾಗುತ್ತಿತ್ತು. ಮಾರುಕಟ್ಟೆಗೆ ತರವು ಒಣದ್ರಾಕ್ಷಿಯನ್ನು ಪರೀಕ್ಷೆ ಮಾಡುವ ನೆಪದಲ್ಲಿ ನಾಲ್ಕಾರು ಕೆ.ಜಿ. ದ್ರಾಕ್ಷಿಯನ್ನು ನೆಲಕ್ಕೆ ಚೆಲ್ಲುವ, ಮಾರುಕಟ್ಟೆಗೆ ದ್ರಾಕ್ಷಿ ತಂದ ರೈತರಿಗೆ ಖರೀದಿಯಲ್ಲಿ ವಂಚಿಸಲು ಲೈಸೆನ್ಸ್‌ದಾರರು ಪಾರಮ್ಯ ಮೆರೆಯುವುದು. ಸರ್ಕಾರಕ್ಕೆ ಮಾರುಕಟ್ಟೆ ಶುಲ್ಕ ವಂಚಿಸಲು ದ್ರಾಕ್ಷಿ ಖರೀದಿಸಿದ್ದಕ್ಕೆ ಜಿಎಸ್‌ಟಿ ಬಿಲ್‌ ನೀಡದಿರುವುದು, ಖರೀದಿ ನಂತರ 50 ದಿನಕ್ಕೆ ಬಿಲ್‌ ಪಾವತಿಸುವ, 50 ದಿನದೊಳಗೆ ಹಣಕಾಸಿನ ತುರ್ತು ಇರುವ ರೈತರಿಗೆ ಶೇ. 2 ಬಡ್ಡಿ ದರದಲ್ಲಿ ಸಾಲ ನೀಡುವಂಥ ಹಲವು ರೀತಿಯ ವಂಚನೆ ಆಗುತ್ತಿತ್ತು ಎಂದು ವಿವರಿಸಿದರು.

ಆದರೆ ಇ-ಟ್ರೇಡಿಂಗ್‌ನಿಂದ ಪಾರದರ್ಶಕ ಬೆಲೆಯಲ್ಲಿ ಮಾರಾಟಕ್ಕೆ ಅವಕಾಶ ಸಿಗಲಿದ್ದು, ಸ್ಪರ್ಧಾತ್ಮಕ ಬೆಲೆಯೂ ಸಿಗಲಿದೆ. ರೈತರಿಗೆ ಮಾರಾಟ ಮಾಡಿದ 4 ದಿನಗಳಲ್ಲಿ ಬಿಲ್‌ ಪಾವತಿ ಆಗಲಿದೆ. ಒಣದ್ರಾಕ್ಷಿ ನೆಲಕ್ಕೆ ತೂರಲು ಅವಕಾಶ ಇಲ್ಲ. ಗುಣಮಟ್ಟದ ದ್ರಾಕ್ಷಿ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲು ಹಾಗೂ ರಫ್ತುದಾರರನ್ನು ಆಕರ್ಷಿಸಲು ನೆರವಾಗಲಿದೆ. ಆದರೆ ಈ ವ್ಯವಸ್ಥೆಯಿಂದ ತಮ್ಮ ವಂಚನೆಗೆ ಕಡಿವಾಣ ಬೀಳುತ್ತಿರುವುದನ್ನು ಕಂಡು ದ್ರಾಕ್ಷಿ ಬೆಳೆಗಾರರು ರೈತರನ್ನು ಎತ್ತಿಕಟ್ಟಿ, ಬಹಿರಂಗ ಹರಾಜಿಗೆ ಒತ್ತಡ ಹೇರುತ್ತಿದ್ದಾರೆ. ಇಂಥ ಯಾವುದೇ ಒತ್ತಡಕ್ಕೆ ಮಣಿಯದೇ ಇ-ಟ್ರೇಡಿಂಗ್‌ ಮುಂದುವರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬಹಿರಂಗ ಹರಾಜು ಮರು ಆರಂಭಿಸಲು ಅವಕಾಶ ಕೋರಿ ದ್ರಾಕ್ಷಿ ಖರೀದಿ ಲೈಸೆನ್ಸ್‌ ಹೊಂದಿದ ಖರೀದಿದಾರರ ಸಂಘದಿಂದ ಸಲ್ಲಿಸಿದ್ದ ಮನವಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಜೂ. 18ರಂದು ಜರುಗಿದ ಸಭೆಯಲ್ಲಿ ತಿರಸ್ಕರಿಸಿದೆ. ಹೀಗಾಗಿ ಬಹಿರಂಗ ಹರಾಜಿಗೆ ಬದಲಾಗಿ ರೈತರ ಅನುಕೂಲಕ್ಕೆ ಅಗತ್ಯ ಬಿದ್ದರೆ ಮೂರು ದಿನ ಇ-ಟ್ರೇಡಿಂಗ್‌ ಮಾಡುವುದಾಗಿ ಹೇಳಿದರು. ದ್ರಾಕ್ಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪೀರಗೊಂಡ ಗದ್ಯಾಳ, ಎಸ್‌.ಎಚ್‌. ನಾಡಗೌಡ ಇದ್ದರು.

ಟಾಪ್ ನ್ಯೂಸ್

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.