ಉತ್ತಮ ಗೆಲುವು ಆಕೈತಿ, ಅರ್ಹ ವ್ಯಕ್ತಿಯ ಮರ್ದನ ಆಕೈತಿ.. ಬಬಲಾದಿ ಮುತ್ಯಾನ ಕಾಲಜ್ಞಾನದ ಭವಿಷ್ಯ
Team Udayavani, Mar 12, 2024, 7:33 PM IST
ವಿಜಯಪುರ : 2024 ರಲ್ಲಿ ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಕೈತಿ, ಉತ್ತಮ ವ್ಯಕ್ತಿಯ ಗೆಲುವೂ ಆಕೈತಿ. ಗಡಿ ಕಾಯುವ ಯೋಧರಿಗೆ ನೋವು ಉಂಟಾಕೈತಿ, ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಐತಿ…
ಇದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿ ಹೊಳೆ ಬಬಲಾದಿಯ ಚಂದ್ರಗಿರಿಸದಾಶಿವ ಮುತ್ಯಾನ ಜಾತ್ರೆಯಲ್ಲಿ ಶ್ರೀಮಠದ ಮಠಾಧೀಶರಾದ ಸಿದ್ಧರಾಮಯ್ಯ ಹೊಳಿಮಠ ಕಾಲಜ್ಞಾನದ ಭವಿಷ್ಯ ನುಡಿದಿದ್ದು, ಅಲ್ಲಲ್ಲಿ ರಾಜಕೀಯ ಗೊಂದಲ ಉಂಟಾಗಲಿದೆ. ಅವರವರಲ್ಲೇ ಕಾಲು ಎಳೆಯುವ ಜನರು ಹೆಚ್ಚಾಗುತ್ತಾರೆ ಎಂದು ಹೇಳಿದ್ದಾರೆ.
ರಾಜಕೀಯ ಸಂಘರ್ಷ ಹೆಚ್ಚಲಿದೆ ಎಂದಿರುವ ಕಾಲಜ್ಞಾನದ ಭವಿಷ್ಯ, ಸಾಧಾರಣ ಮಳಿ ಐತಿ, ಬೆಳಿಗೆ ಕೀಟಬಾಧೆ ಹೆಚ್ಚೈತಿ. ಮಕ್ಕಳಿಗೆ ರೋಗಬಾಧೆ ಹೆಚ್ಚು, ಕಣ್ಣಿನ ಕಾಯಿಲೆ ಕಾಡುತ್ತದೆ. ಬರವೂ ಇದೆ, ಕೇಡೂ ಇದೆ. ಭಯೋತ್ಪಾದನೆ, ನೈಸಗಿರ್ಕ ವಿಕೋಪವೂ ಇರಲಿದೆ. ಜೇಷ್ಠ ಮಾಸದಲ್ಲಿ ಲಿಂಗ ಸಮಾನತೆ ಇರಲಿದೆ ಎಂದೂ ಹೇಳಿದ್ದಾರೆ.
ಸದಾಶಿವ ಮುತ್ಯಾನ ಮಠದಲ್ಲಿ ಈ ವರೆಗೆ ನುಡಿರುವ ಕಾಲಜ್ಞಾನದ ಭವಿಷ್ಯ ಸುಳ್ಳಾಗಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಹೀಗಾಗಿ ಸಿದ್ಧರಾಮಯ್ಯ ಶ್ರೀಗಳು ನುಡಿದಿರು ಈ ಬಾರಿಯ ಕಾಲಜ್ಞಾನವನ್ನೂ ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಕ್ರೋಧಿನಾಮ ಸಂವತ್ಸರದಲ್ಲಿ ಕೋಪ ಹೆಚ್ಚಾಗುತ್ತದೆ, ಸಿಟ್ಟಿನವರು ಹೆಚ್ಚಾಗುತ್ತಾರೆ. ವ್ಯಾಪಾರಸ್ಥರಿಗೆ ಮಧ್ಯಮ ಫಲವಿದೆ. ಮಳೆ ಬೆಳೆ ಫಲ ಸಸಿಗಳು ಖಂಡ ಮಂಡಳವಾಗುತ್ತದೆ. ಧವಸ ಧಾನ್ಯಗಳು ರಸಗಳು ಮಾರಾಟವಾಗುತ್ತವೆ ಎಂದಿದ್ದಾರೆ.
ಉತ್ತರ ಭಾಗಕ್ಕೆ ಬರಗಾಲ ಹಾಗೂ ಕೇಡಾಗುತ್ತದೆ. ದೊಡ್ಡ ದೊಡ್ಡ ಮಹಾನರ ಯೋಗ ಅಳಿಯಲಿವೆ. ಕುಲ ಜಾತಿಗಳಲ್ಲಿ ಕಹ ಜಾಸ್ತಿ ಇರಲಿದೆ. ಶಿಶುಗಳಿಗೆ ಆರೋಗ್ಯ ಬಾಧೆ ಹೆಚ್ಚಾಗುತ್ತದೆ. ಆಡಂಬರದ ಜೀವನ ನಡೆಸುವವರು ಸಾಲದ ಬಾಧೆ ಎದುರಿಸಬೇಕಾಗುತ್ತದೆ. ಸಕ್ಕರೆ, ಬೆಣ್ಣೆ, ಕುಸುಬೆ, ಸೇಂಗಾ ಬೆಲೆ ಹೆಚ್ಚುತ್ತವೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ಗೆ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ… ತಾಲೂಕು ಆಡಳಿತ ಸೌಧ ಬಳಿ ಘಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.