Vijayapura: ಅತಿಥಿ ಉಪನ್ಯಾಸಕರಿಂದ ಸೇವೆ ಖಾಯಂಗೆ ರಕ್ತದಾನ ಚಳವಳಿ
34ನೇ ದಿನಕ್ಕೆ ಕಾಲಿರಿಸಿದ ಅನಿರ್ಧಿಷ್ಟಾವಧಿ ಮುಷ್ಕರ
Team Udayavani, Dec 27, 2023, 7:14 PM IST
ವಿಜಯಪುರ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂ ಮಾಡುವಂತೆ ಆಗ್ರಹಿಸಿ ರಕ್ತದಾನ ಚಳವಳಿ ಮಾಡಿ ಗಮನ ಸೆಳೆದಿದ್ದಾರೆ. ಈ ಮಧ್ಯೆ ಅನಿರ್ಧಿಷ್ಟಾವಧಿ ಮುಷ್ಕರ ಬುಧವಾರ 34ನೇ ಕಾಲಿರಿಸಿದೆ.
ರಾಜ್ಯದ 420 ಕ್ಕೂ ಹೆಚ್ಚು ಕಾಲೇಜಿನಲ್ಲಿ ಕಳೆದ 15-20 ರ್ವಗಳಿಂದ ಸೇವೆ ಸಲ್ಲಿಸುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಉಪನ್ಯಾಸಕರು ತಮ್ಮ ಸೇವೆ ಖಾಯಂ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳು ಹಾಗೂ ಹಾಲಿ ಸರ್ಕಾರ ಸೇರಿದಂತೆ ಎಲ್ಲರೂ ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ಸೇವೆ ನಮ್ಮ ಸೇವೆ ಪಡೆಯುತ್ತಿರುವ ಸರ್ಕಾರ ನಮಗೆ ಉದ್ಯೋಗ ಭಧ್ರತೆ ನೀಡಬೇಕು. ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರೂ ಸರ್ಕಾರ ಗಂಭೀರವಾಗಿಲ್ಲ ಎಂದು ಕಿಡಿ ಕಾರಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಡಾ.ಆನಂದ ಕುಲಕರ್ಣಿ, ರಮೇಶ ಕಡೇಮನಿ, ಡಾ.ರಾಜು ಚವ್ಹಾಣ, ಎಂ.ಬಿ.ಪಾಟೀಲ, ರಮೇಶ ತೇಲಿ, ರಮೇಶ ನಾಗರಡ್ಡಿ, ರಾಜು ದಾಯಗೊಂಡ, ರೇಣುಕಾ ಹೆಬ್ಬಾಳ, ಸುರೇಖಾ ಪಾಟೀಲ, ಭಾರತಿ ಇನಾಮದಾರ, ಭಾರತಿ ಹಿರೇಮಠ, ಶಿಲ್ಪಾ ಉಕ್ಕಲಿ, ವೀಣಾ ಕಡಕೆ, ಭಾರತಿ ಹೊನವಾಡ, ಕೆ.ಎ.ಪಾಟೀಲ, ಎಸ್.ಐ.ಯಂಭತ್ನಾಳ, ಎಲ್.ಎ.ಪಾಟೀಲ, ಎಂ.ಆರ್. ತಿಪಶೆಟ್ಟಿ, ಮಂಜುಳಾ ಭಾವಿಕಟ್ಟಿ, ಉಮೇಶ ಹಿರೇಮಠ, ಮಹಾಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಮೊರೆ, ಆನಂದ ಹಿರೇಮಠ, ಸುನೀಲ ಅಂಗಡಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.