Black And White ಮನಿ ದಂಧೆ: 20 ಲಕ್ಷ ರೂ. ವಂಚನೆ, ಬೆಳಗಾವಿ ಮಹಿಳೆ ಸೇರಿ ನಾಲ್ವರ ಬಂಧನ
Team Udayavani, Sep 5, 2023, 7:36 PM IST
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಇಡೀ ಪ್ರಕರಣ ವಿವರ ನೀಡಿದ ಎಸ್ಪಿ ಆನಂದಕುಮಾರ, ಕಪ್ಪುಹಣವನ್ನು ಬಿಳಿಯಾಗಿ ಮಾಡಿಕೊಡುವ ದಂಧೆಯ ಹೆಸರಿನಲ್ಲಿ ವಂಚನೆಗೊಳಗಾದ ವ್ಯಕ್ತಿ ಬಬಲೇಶ್ವರ ಮೂಲದ ಚಂದ್ರಶೇಖರ ಬಸಪ್ಪ ಕನ್ನೂರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದರು.
ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಗಾಕ ತಾಲೂಕಿನ ಸಂಗಣಕೇರಿ ಗ್ರಾಮದ ಮಹಿಳೆ ಲಕ್ಷ್ಮೀ ರಾಮಪ್ಪ ಕಂಕಣವಾಡಿ (22), ಬೈಲಹೊಂಗಲ ತಾಲೂಕಿನ ಕೊಳದೂರಿನ ಈರಣ್ಣ ರುದ್ರಪ್ಪ ಕೌಜಲಗಿ (46), ಹಲಗಾ ಬಸ್ತಿಗಲ್ಲಿಯ ಅಪ್ಪಾಸಾಹೇಬ್ ಬಾಬು ಇಂಚಲ್ (66) ಹಾಗೂ ಚಿಕ್ಕೋಡಿ ಮಾತಂಗಿಕೇರಿಯ ಸುನೀಲ ಕಾಶಿನಾಥ ದೊಡಮನಿ (37) ಎಂದು ಗುರುತಿಸಲಾಗಿದೆ.
20 ಲಕ್ಷ ರೂ. ನೀಡಿದರೆ 1 ಕೋಟಿ ರೂ. ನಗದು ಹಣವನ್ನು ನೀಡುವುದಾಗಿ ಹೇಳಿ ಚಂದ್ರಶೇಖರ ಅವರಿಂದ 20 ಲಕ್ಷ ರೂ. ಪಡೆದಿದ್ದರು. ಬಳಿಕ ಬಂಡಲ್‍ನಲ್ಲಿ ಮೇಲೆ ಮೇಲೆ ಮಾತ್ರ ಒಂದು ಸುತ್ತು ಅಸಲಿ ನೋಟುಗಳ್ನು ಇರಿಸಿ, ಉಳಿದಂತೆ ಖಾಲಿ ಪೇಪರ್, ನೋಟ್‍ಬುಕ್ ಹಾಕಿ ರಟ್ಟಿನ ಡಬ್ಬದಲ್ಲಿ ಪ್ಯಾಕ್ ಮಾಡಿ ನೀಡಿದ್ದರು.
ತಾವು ವಂಚನೆಗೊಳಗಾದ ವಿಷಯ ತಿಳಿಯುತ್ತಲೇ ಚಂದ್ರಶೇಖರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್ಸ್‍ಪೆಕ್ಟರ್ ರಮೇಶ ಅವಜಿ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಬಂಧಿತರಿಂದ 19 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ 9 ಮೊಬೈಲ್, 10 ಸಿಮ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇಡೀ ಪ್ರಕರಣವನ್ನು ಚಾಣಾಕ್ಷತನದಿಂದ ಬೇದಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಪೊಲೀಸರಿಗೆ ಶ್ಲಾಘನೀಯ ಪತ್ರ ನೀಡಲಾಗಿದೆ ಎಂದು ವಿವರಿಸಿದರು.
ಎಎಸ್ಪಿ ಶಂಕರ ಮಾರಿಹಾಳ, ಸದರಿ ಪ್ರಕರಣ ತನಿಖಾಧಿಕಾರಿ ರಮೇಶ ಅವಜಿ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Realme C-51: ಫೋನ್ ಬಿಡುಗಡೆ- 1 ಗಂಟೆಯಲ್ಲಿ ಶೇ.100 ಚಾರ್ಜಿಂಗ್ ಖಾತರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.