ವಿಜಯಪುರ: ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ
ಸರಕಾರದ ಅಂಗ ಸಂಸ್ಥೆಗಳನ್ನೆಲ್ಲಾ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
Team Udayavani, Feb 11, 2021, 5:55 PM IST
ವಿಜಯಪುರ: ಕೇಂದ್ರದ ಬಿಜೆಪಿ ಸರಕಾರ ರೈತ ವಿರೋ ಧಿಯಾಗಿರುವ ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಜಲನಗರ ಬ್ಲಾಕ್ ಸಮಿತಿಯ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಅಬ್ದುಲ್ ಹಮೀದ ಮುಶ್ರಿಫ್, ಜಮೀರ ಅಹ್ಮದ ಬಕ್ಷಿ ಹಾಗೂ ಆರತಿ ಶಹಪೂರ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಮನಬಂದಂತೆ ವರ್ತಿಸುತ್ತಿದೆ. ಪರಿಣಾಮ ದೇಶದಲ್ಲಿ ಜನ ಹಾಗೂ ಕೃಷಿ ವಿರೋಧಿ ಯಾಗಿರುವ ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದವರ ವಿರುದ್ಧ ದೇಶದ ರೈತರು 75 ದಿನಗಳಿಂದ ದೆಹಲಿ ಸುತ್ತಲೂ ಚಳವಳಿ ನಡೆಸಿದ್ದರೂ ಸ್ಪಂದಿಸುವ ಸೌಜನ್ಯ ತೋರಿಲ್ಲ. ಹೋರಾಟದಲ್ಲಿ ಸುಮಾರು 155 ಕ್ಕೂ ಹೆಚ್ಚು ರೈತರು ಬಲಿದಾನ ಮಾಡಿದರೂ ಸರ್ಕಾರ ಕಣ್ತೆರೆದು ನೋಡಿಲ್ಲ ಎಂದು ಹರಿಹಾಯ್ದರು.
ಒಂದೆಡೆ ರೈತರು ಇಂತಹ ಕರಾಳ ಕಾನೂನುಗಳ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರ ಲಾಭದಲ್ಲಿ ಮಗ್ನವಾಗಿದೆ. ಇದಕ್ಕಾಗಿ ಇಂಧನ ಬೆಲೆ ಏರಿಕೆ ಮಾಡುತ್ತಲೇ ಇದ್ದು, ಸಾಮಾನ್ಯ ಜನರ ಜೀವನಕ್ಕೆ ಕುತ್ತು ತಂದಿದೆ. ತಕ್ಷಣ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿ ತೈಲ ಬೆಲೆ ಏರಿಕೆ ಇಳಿಸಿ ಜನ ಸಾಮಾನ್ಯರ ಮೇಲೆ ಹೊರೆಯಾಗದಂತೆ ಸ್ಪಂದಿಸಿ ಜನರ ದ್ವನಿಯಾಗಬೇಕು ಎಂದು ಆಗ್ರಹಿಸಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶಾಕೀರ ಸನದಿ ಮಾತನಾಡಿ, ಕೇಂದ್ರ ಬಿ.ಜೆ.ಪಿ ಸರಕಾರ ತಂದಿರುವ ಕರಾಳ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ದೇಶದ ಜಿ.ಡಿ.ಪಿ ಬೆಳವಣಿಗೆ ಸಂಪೂರ್ಣ ರೈತರ ಮೇಲೆ ನಿಂತಿದ್ದನ್ನು ಕೇಂದ್ರ ಸರಕಾರ ಗಂಭಿರವಾಗಿ ಪರಿಗಣಿಸಬೇಕು. ಲೋಕಸಭೆ ಚುನಾವಣೆಗಳಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೊದಿ, ದೇಶದಲ್ಲಿ ಸರಕಾರದ ಅಂಗ ಸಂಸ್ಥೆಗಳನ್ನೆಲ್ಲಾ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕೆಪಿಸಿಸಿ ಬ್ಲಾಕ್ ಉಸ್ತುವರಿ ಸುನೀತಾ ಐಹೊಳ್ಳಿ, ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರಮಠ, ಸುರೇಶ ಘೊಣಸಗಿ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಕಾಂತ ಛಾಯಾಗೋಳ, ವಿದ್ಯಾವತಿ ಅಂಕಲಗಿ, ಶಬ್ಬೀರ್ ಜಾಗೀರದಾರ, ರುಕ್ಮಿಣಿ ಲಮಾಣಿ ಸೇರಿದಂತೆ
ಇತರರು ಉಪಸ್ಥಿತರಿದ್ದರು.
ಚಾಂದಸಾಬ ಗಡಗಲಾವ, ಕೆ.ಪಿ.ಸಿ.ಸಿ ಸಂಚಾಲಕರಾದ ಮಲ್ಲನಗೌಡ ಬಿರಾದಾರ, ಶಹಜಾನ ದುಂಡಸಿ, ವಿನೋದ ವ್ಯಾಸ, ಮೊಹಮದ್ ರಫೀಕ್ ಟಪಾಲ್, ಸಾಹೇಬಗೌಡ ಬಿರಾದಾರ, ನಾಗಠಾಣ ಬ್ಲಾಕ್ ಅಧ್ಯಕ್ಷ ಇಲಿಯಾಸ ಬಗಲಿ, ಪೀರಪ್ಪ ನಡುವಿನಮನಿ, ಡಿ.ಎಚ್.ಕಲಾಲ, ವಸಂತ ಹೊನಮೋಡೆ, ಮೈನುದ್ದೀನ್ ಬೀಳಗಿ, ಅಜೀಮ ಇನಾಮದಾರ, ರೌಫ್ ಶೇಖ, ಅನ್ವರ ದ್ರಾಕ್ಷಿ, ಶರಣಪ್ಪ ಯಕ್ಕುಂಡಿ, ಜಾಕೀರ ಬಾಗವಾನ, ಹಾಜಿಲಾಲ್ ದಳವಾಯಿ, ಚನ್ನಬಸ್ಪಪ್ಪ ನಂದರಗಿ, ದಾವಲಸಾಬ ಬಾಗವಾನ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.