ಹಲಸಂಗಿ ಗೆಳೆಯರು ಜನಪದ ಶಕ್ತಿ
ಶಿವನಾಮ ಜಪಿಸಿದರೆ ಕಷ್ಟಗಳು ಮಾಯವಾಗುತ್ತವೆಂಬ ನಂಬಿಕೆವೈಶಿಷ್ಟ್ಯ : ಡಾ| ಪಡಶೆಟ್ಟಿ
Team Udayavani, Jan 24, 2020, 1:45 PM IST
ವಿಜಯಪುರ: ಕನ್ನಡ ನಾಡಿನ ಜನಪದ ಸಾಹಿತ್ಯದ ಸಿರಿಯನ್ನು ಅನಾವರಣಗೊಳಿಸಿ ಕನ್ನಡಿಗರಿಗೆ ಉಣಬಡಿಸಿದ ಶ್ರೇಯಸ್ಸು ಜಿಲ್ಲೆಯ ಹಲಸಂಗಿ ಗೆಳೆಯರ ಬಳಗಕ್ಕೆ ಸಲ್ಲುತ್ತದೆ. ಬಾಯಲ್ಲಿ ನಲಿದಾಡುತ್ತಿದ್ದ ಜನಪದವನ್ನು ಸಂಗ್ರಹಿಸಿ, ಕನ್ನಡಿಗರಿಗೆ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನುಪಮ ಎಂದು ಜಾನಪದ ಅಕಾಡೆಮಿ ಮಾಜಿ ಸದಸ್ಯ ಪ್ರಕಾಶ ಅಂಗಡಿ ಬಣ್ಣಿಸಿದರು.
ವೀರಶೈವ ಮಹಾಸಭೆಯ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ| ಎಂ.ಎನ್. ವಾಲಿ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಲಸಂಗಿ ಗೆಳೆಯರ ಮಾದರಿಯಲ್ಲಿ ಜಿಲ್ಲೆಯ ಸಾಹಿತ್ಯ ಸಂಗ್ರಹದ ಜೊತೆಗೆ ಜಾನಪದದ ಎಲ್ಲ ಕಲಾಪ್ರದರ್ಶನ, ಸಂಶೋಧನೆ ಹಾಗೂ ಕೃತಿ ರಚನೆಗೆ ಆದ್ಯತೆ ನೀಡಬೇಕು ಎಂದರು.
ಜನಪದ ತಜ್ಞ ಡಾ| ಎಂ.ಎಂ. ಪಡಶೆಟ್ಟಿ ಮಾತನಾಡಿ, ಅಪಾರ ದೈವಿಭಕ್ತಿಯ ಜನಪದರು ನಡು ನೀರಿನಲ್ಲಿ ಮನುಷ್ಯ ಕೈಬಿಟ್ಟರೂ ನಂಬಿದ ದೇವರು ರಕ್ಷಿಸುತ್ತಾನೆಂಬ ಅದಮ್ಯ ನಂಬಿಕೆ ಹೊಂದಿದ್ದಾರೆ. ಶಿವನಾಮ ಜಪಿಸಿದರೆ ಸಿಡಿಲಿನಂಥ ಕಷ್ಟಗಳು ಮಾಯವಾಗುತ್ತವೆ ಎಂಬ ವಿಶ್ವಾಸದ ಪರಿಣಾಮವೇ ಭೂಮಿಯನ್ನು ಕೂಡ ದೇವರೆಂದೇ ಭಾವಿಸಿ, ಎಳ್ಳು-ಜೀರಿಗೆ ಬೆಳೆಯುವ ಭೂಮಿತಾಯಿ ಎಂದು ಕೃತಜ್ಞತೆ ಸಲ್ಲಿಸುವ ಪರಿಯೇ ವಿಶಿಷ್ಟ ಎಂದು ಅಭಿಪ್ರಾಯಪಟ್ಟರು.
ಗರತಿಯ ಹಾಡುಗಳಲ್ಲಿ ತನ್ನ ಬದುಕಿನಲ್ಲಿ ವಿಘ್ನಗಳು ಬರದಂತೆ ತಡೆಯಲು ಪರಶಿವನಲ್ಲಿ ಮೊರೆ ಇಡುತ್ತಾಳೆ. ಜನಪದ ಹಾಡುಗಳಲ್ಲಿ ಸಾವಿರಾರು ಸಂಖ್ಯೆ ಭಕ್ತಿಯ ಸೊಲ್ಲುಗಳು ತುಂಬಿಕೊಂಡಿವೆ. ಭಾರತೀ ಸಂಸ್ಕೃತಿ ಸ್ಥಿರವಾಗಿ ನಿಂತಿದ್ದೇ ಭಕ್ತಿಯ ವಿಶ್ವಾಸ ಹಾಗೂ
ನಂಬಿಕೆಯ ಮೇಲೆ ಎಂದು ವಿಶ್ಲೇಷಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಜನಪದ ಭಕ್ತಿಯ ಹಾಡುಗಳಲ್ಲಿ ಅನುಭಾವ ಹಾಸು ಹೊಕ್ಕಾಗಿರುವುದರಿಂದ ಪಂಡಿತರೂ ಕೂಡಾ ಜನಪದ ಸಾಹಿತ್ಯದೆಡೆಗೆ ಆಕರ್ಷಿತರಾಗಿದ್ದಾರೆಂದು ಹೇಳಿದರು. ಜನಪದ ವಿದ್ವಾಂಸ ಡಾ| ಸೋಮಶೇಖರ ವಾಲಿ ಮಾತನಾಡಿದರು.
ಶಂಭುಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ವಯೋಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಾನಪದ ಕಲಾವಿದರಾದ ಗೋಂದಳಿ ಕಲಾವಿದ ಯಲ್ಲಪ್ಪ ಗೋಂದಳಿ, ತತ್ವಪದ ಸಂಶೋಧಕ ಡಾ| ಶಾಂತು ಕೋಟಿ, ಭಜನಾ ಕಲಾವಿದರಾದ ಷಣ್ಮುಖಪ್ಪ ದೇವೂರ ಮತ್ತು ಪ್ರಭಾವತಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ವಿ.ಸಿ. ನಾಗಠಾಣಾ, ಶಂಕರಗೌಡ ಪಾಟೀಲ, ಡಾ| ಬಿ.ಎಸ್. ಪಡಗಾನೂರ, ಮ.ಗು.ಯಾದವಾಡ, ಡಾ| ಎಂ.ಎನ್.ವಾಲಿ, ಎಂ.ಎಂ. ಅಂಗಡಿ, ಡಿ.ಎಸ್.ಹಳ್ಳಿ, ಪ್ರೊ| ಬಿ.ಎನ್.ಬಿರಾದಾರ, ಡಾ| ಎಂ.ಎಸ್.ಮದಭಾವಿ, ಡಾ| ವಿ.ಡಿ.ಐಹೊಳ್ಳಿ, ಬಿ.ಎಚ್. ಬಾದರಬಂಡಿ, ಎಸ್.ವೈ. ಗದಗ, ಆರ್.ಆರ್. ಹಂಚಿನಾಳ, ಸಂತೋಷ ನಿಗಡಿ, ಸುನೀಲ ಜೈನಾಪೂರ, ಸತೀಶ ಆಹೇರಿ, ರೇವಣಸಿದ್ದ ಪಟ್ಟಣಶೆಟ್ಟಿ, ಸಂತೋಷ ಹಾಲಳ್ಳಿ, ಸಿದ್ದಲಿಂಗಪ್ಪ ಹದಿಮೂರ, ರಮೇಶ ಪೂಜಾರ, ರೇವಣಸಿದ್ದ ಹಿರೇಮಠ, ಶರಣಗೌಡ ಪಾಟೀಲ, ಯಮನಪ್ಪ ಅರಬಿ ಇದ್ದರು. ಪ್ರೊ| ದೊಡ್ಡಣ್ಣ ಬಜಂತ್ರಿ ಸ್ವಾಗತಿಸಿದರು. ಅಶೋಕ ಅಂಬಾಜಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.