ಕೋವಿಡ್‌ ಹೋರಾಟದಲ್ಲಿ ನಾವೇ ಫಸ್ಟ್‌

ಪ್ರತಿದಿನ 1800 ಗಂಟಲು ದ್ರವ ಮಾದರಿ ಪರೀಕ್ಷೆ

Team Udayavani, Oct 10, 2020, 5:29 PM IST

VP-TDY-2

ವಿಜಯಪುರ: ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್‌ ಸೋಂಕಿತರ ಚಿಕಿತ್ಸೆಯ ವಿಶೇಷ ಘಟಕ.

ವಿಜಯಪುರ: ವರ್ಷದ ಹಿಂದೆ ಚೀನ ದೇಶದಲ್ಲಿ ಜನ್ಮ ತಳೆದು ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್‌-19 ಸೋಂಕು ರೋಗವನ್ನು ಸೋಲಿಸುವ ಹೋರಾಟದಲ್ಲಿ ವಿಜಯಪುರ ಜಿಲ್ಲೆ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿದೆ.

ಈಗಾಗಲೇ 1.16 ಲಕ್ಷ ಜನರ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ಶೇ. 9ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ.ಸೋಂಕಿತರಲ್ಲಿ ಶೇ. 91 ರೋಗಿಗಳು ಚಿಕಿತ್ಸೆ ಫಲಕಾರಿಯಾಗಿ ಮನೆಗೆ ಮರಳುತ್ತಿದ್ದು ಜಿಲ್ಲೆಯ ವೈದ್ಯ-ಸಿಬ್ಬಂದಿ ಕರ್ತವ್ಯ ಪ್ರಜ್ಞೆ, ಸೇವಾ ಬದ್ಧತೆ ಹಾಗೂ ಜನರಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಚಿಕಿತ್ಸೆಗೆ ಸಿಗುತ್ತಿರುವ ಸ್ಪಂದನೆಯಂಥ ಕಾರಣಗಳಿಂದಾಗಿ ಕೋವಿಡ್‌ವಿರುದ್ಧದ ಹೋರಾಟದಲ್ಲಿ ಬಸವನಾಡು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ರೋಗಿಗಳಲ್ಲಿ ರೋಗನಿರೋಧ ಶಕ್ತಿಹೆಚ್ಚಿರುವುದು ಹಾಗೂ ಚಿಕಿತ್ಸೆಗೆ ರೋಗಿಗಳ ಸ್ಪಂದನೆ ಸಿಗುತ್ತಿದೆ. ಜನರಲ್ಲಿ ರೋಗದ ಕುರಿತುಜಾಗೃತಿ, ತ್ವರಿತ-ಹೆಚ್ಚು ಸಂಖ್ಯೆಯ ಪರೀಕ್ಷೆ, ಸೋಂಕಿತರು ಪತ್ತೆಯಾಗುತ್ತಲೇ ತುರ್ತುಚಿಕಿತ್ಸೆ ನೀಡುವ ಕ್ರಮಗಳಿಂದಾಗಿ ಜಿಲ್ಲೆಯಲ್ಲಿಸೋಂಕು ವ್ಯಾಪಕ ಹರಡುವಿಕೆ ತಡೆಯುವಲ್ಲಿ ಸಹಕಾರಿ ಆಗಿದೆ. ಇದ್ಲಲದೇ ಲಕ್ಷಣ ರಹಿತ ಸೋಂಕಿತರಿಗೆ 4 ತಿಂಗಳ ಹಿಂದೆಯೇ ಹೋಂಐಸೋಲೇಷನ್‌ ಆರಂಭಿಸಿದ್ದು ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಿಸಿದೆ.

ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ಹೊರತಾಗಿ ಕಳೆದ 3 ತಿಂಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷಾ ಕೇಂದ್ರಗಳಲ್ಲಿ ನಿತ್ಯ ತಲಾ 300ರಂತೆ 600 ಪರೀಕ್ಷೆ ಸೇರಿ ಪ್ರತಿ ದಿನ ಸರಾಸರಿ1800 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆ 4 ತಾಲೂಕಗಳ ಸರ್ಕಾರಿ ಆಸ್ಪತ್ರೆ, 9ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಯುತ್ತಿದೆ. ಇದಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಗಂಟಲು ದ್ರವ ಸಂಗ್ರಹಿಸಲು 20 ಮೊಬೈಲ್‌ ತಂಡ ರಚಿಸಿದ್ದು, ಇವುಗಳಿಂದ ಗಂಟಲು ಮಾದರಿ ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ರವಾನಿಸಲು ವ್ಯವಸ್ಥೆಮಾಡಿದೆ. ಇದಕ್ಕಾಗಿ ಹಳೆ ತಾಲೂಕಿಗೆ ತಲಾ 2 ಹಾಗೂ ಹೊಸ ತಾಲೂಕುಗಳಿಗೆ ತಲಾ 1ಮೊಬೈಲ್‌ ವಾಹನ ನೀಡಿದೆ. ಪ್ರತಿ ವಾಹನಕ್ಕೆಓರ್ವ ತಾಂತ್ರಿಕ ಸಿಬ್ಬಂದಿ, ಓರ್ವ ಡಾಟಾ ದಾಖಲೀಕರಣ ಸಿಬ್ಬಂದಿ ಹಾಗೂ ಚಾಲಕರನ್ನು ನೀಡಿದೆ.

ಸೋಂಕಿತರು ಪತ್ತೆಯಾಗುತ್ತಲೇ ತುರ್ತು ಚಿಕಿತ್ಸೆ ನೀಡುವ ಜೊತೆಗೆ ಪ್ರಥಮ-ದ್ವಿತೀಯಸಂಪರ್ಕಿತರನ್ನು ಗುರುತಿಸಿ, ಪರೀಕ್ಷಿಸಿ, ಚಿಕಿತ್ಸೆನೀಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 180, 16 ಖಾಸಗಿ ಆಸ್ಪತ್ರೆಯಲ್ಲಿ 200 ಬೆಡ್‌, ಕೋವಿಡ್‌ ಕೇರ್‌ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ 1 ಸಾವಿರಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲು ಇರಿಸಲಾಗಿದೆ. ಇದರಲ್ಲಿ ಸರ್ಕಾರಿ ವ್ಯವಸ್ಥೆಯ ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಜಾಲಅಳವಡಿಸಿದ್ದು ಐಸಿಯು, ವೆಂಟಿಲೇಟರ್‌ಸೌಲಭ್ಯದ ಸುಮಾರು 100 ಹಾಸಿಗೆ ವ್ಯವಸ್ಥೆ ಇದೆ.

ಕೋವಿಡ್‌ ಹೋರಾಟದಲ್ಲಿ ಕೆಲ ವಾರಿಯರ್‌ಗಳು ಮೃತಪಟ್ಟರೂ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕರ್ತವ್ಯ ಬದ್ಧತೆಗಾಗಿ ವೈದ್ಯ-ಸಿಬ್ಬಂದಿಯನ್ನುವಿಶ್ವಾಸಕ್ಕೆ ತೆಗೆದುಕೊಂಡು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಹೀಗೆಹಲವು ಕಾರಣಗಳಿಂದಾಗಿ ವಿಜಯಪುರ ಜಿಲ್ಲೆ ಕೋವಿಡ್‌ ವಿರುದ್ಧದ ಹೋರಾಟದ ವಿಜಯದಲ್ಲಿ ಮುಂಚೂಣಿಯಲ್ಲಿದೆ.

ಇವರೆಗೆ 9,441 ಸೋಂಕಿತರು ಗುಣಮುಖ : ವಿಜಯಪುರ ಜಿಲ್ಲೆಯಲ್ಲಿ ಏಪ್ರಿಲ್‌ 12ರಂದು ಕೋವಿಡ್‌ ಸೋಂಕಿತ ಮೊದಲ ಪ್ರಕರಣ ವರದಿಯಾಗಿತ್ತು. ಅ. 9ರವರೆಗೆ1,16,226 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 1,14,476 ಜನರ ವರದಿ ಬಂದಿದ್ದು, 1,620 ವರದಿ ನಿರೀಕ್ಷೆಯಲ್ಲಿವೆ. ಬಂದಿರುವವರದಿಗಳಲ್ಲಿ 1,04,060 ಜನರವರದಿ ನೆಗೆಟಿವ್‌ ಇದೆ. 10,546ಜನರಲ್ಲಿ ಕೋವಿಡ್‌ ಸೋಂಕುದೃಢಪಟ್ಟಿದ್ದು, ಗುಣಮಟ್ಟದ ಚಿಕಿತ್ಸೆಯ ಕಾರಣದಿಂದ 9,441 ಜನರು ರೋಗದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆಮರಳಿದ್ದಾರೆ. ಹಲವು ಕಾಯಿಲೆಇದ್ದರೂ ವೃದ್ಧೆಯಾಗಿದ್ದ ಮೊದಲ ಸೋಂಕಿತೆ ರೋಗ ಮುಕ್ತವಾಗಿಮನೆಗೆ ಮರಳಿರುವುದು ಗಮನೀಯ. ಇದೀಗ 933 ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಲ್ಲಿ 458, ಕೋವಿಡ್‌ ಕೇರ್‌ ಕೇಂದ್ರದಲ್ಲಿ 21 ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ 454 ಸೋಂಕಿತರು ಸೇರಿದ್ದಾರೆ. ಈವರೆಗೆ 1,04,540ಜನರು ಕ್ವಾರಂಟೈನ್‌ಮುಗಿಸಿದ್ದು 1896 ಜನರು ಕ್ವಾರಂಟೈನ್‌ ನಿಗಾದಲ್ಲಿದ್ದಾರೆ.

ಮ್ಯಾಜಿಕ್‌ ಮಾಡುತ್ತಿಲ್ಲ. ಸೋಂಕಿತರು ಹಾಗೂ ಅವರ ಸಂಪರ್ಕಿತರ ಪತ್ತೆ, ಗಂಟಲು ದ್ರವ ಪರೀಕ್ಷೆ ಹೆಚ್ಚಳ,ನಿತ್ಯವೂ ತಹಶೀಲ್ದಾರರು, ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಸಮಗ್ರಮಾಹಿತಿ ಪಡೆಯುವುದು, ಲೋಪ ತಿದ್ದುವಂಥ ಕೆಲಸಮಾಡಲಾಗುತ್ತಿದೆ. ವೈದ್ಯ-ಸಿಬ್ಬಂದಿ ಬದ್ಧತೆ ಸೇವೆಯಿಂದ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಕೋವಿಡ್ ನಿಯಂತ್ರಣದ ಹಲವು ವಿಭಾಗಗಳಲ್ಲಿ ಮುಂಚೂಣಿಯಲ್ಲಿದೆ. -ಪಿ.ಸುನೀಲಕುಮಾರ ಜಿಲ್ಲಾಧಿಕಾರಿ, ವಿಜಯಪುರ

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳು, ಸರ್ಕಾರದ ಮಾರ್ಗಸೂಚಿ ಜತೆಗೆ ಸ್ಥಾನಿಕ ಪರಿಸ್ಥಿತಿಗೆ ತಕ್ಕಂತೆ ಕೈಗೊಂಡ ನಿರ್ಧಾರಗಳು ವಿಜಯಪುರ ಜಿಲ್ಲೆಯಲ್ಲಿ ಸೋಂಕು ನಿಗ್ರಹಕ್ಕೆ ಕಾರಣವಾಗಿದೆ. ಇದಲ್ಲದೇ ಕಳೆದ ಮೂರು ತಿಂಗಳಿಂದ ಸೋಂಕಿತರಿಗೆ ತುರ್ತಾಗಿ ನೀಡುತ್ತಿರುವ ರೆಮಿಡಿಸಿವಿರ್‌ ಇಂಜಕ್ಷನ್‌ ಉತ್ತಮ ಫಲಿತಾಂಶ ನಿಡಿದೆ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮನೆಗೆ ಮರಳಲು ಹಾಗೂ ಸಾವಿನ ಪ್ರಮಾಣ ಶೂನ್ಯದ ಹಂತಕ್ಕೆ ತರಲು ಕಾರಣವಾಗಿದೆ. -ಡಾ| ಮಲ್ಲನಗೌಡ ಬಿರಾದಾರ ಕೋವಿಡ್‌ ನಿಯಂತ್ರಣ- ಜಿಲ್ಲಾ ಸರ್ವೇಕ್ಷಣಾಧಿಕಾರಿ, ವಿಜಯಪುರ

ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆ ಕೋವಿಡ್‌ ಸಂದರ್ಭದಲ್ಲಿ ಮಾತ್ರವಲ್ಲ, ಇತರೆ ದಿನಗಳಲ್ಲೂ ಉತ್ತಮ ಗುಣಮಟ್ಟದ ಸೇವೆ ಹಾಗೂ ಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದು ರಾಜ್ಯದಲ್ಲೇ ಮಾದರಿ ಆಸ್ಪತ್ರೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. 2015-16ರಲ್ಲಿ ಪ್ರಧಾನ ಮತ್ರಿಗಳಕಾಯಕಲ್ಪ ಪ್ರಶಸ್ತಿ, 2018 ಎನ್‌ಕ್ಯುಎಎಸ್‌ ಮೊದಲ ಪ್ರಶಸ್ತಿ ಪಡೆದಿದೆ. ಪ್ರಸಕ್ತ ವರ್ಷ ಕೂಡ ಶಿವಮೊಗ್ಗ ಜಿಲ್ಲೆಯೊಂದಿಗೆ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಭಾಜನವಾಗಿದ್ದು, ಜಿಲ್ಲೆಯ ಸರ್ಕಾರಿ ವೈದ್ಯಕೀಯ ಗುಣಮಟ್ಟದ ಸೇವೆಗೆ ಸಾಕ್ಷಿ -ಡಾ| ಶರಣಪ್ಪ ಕಟ್ಟಿ, ಶಸ್ತ್ರ ಚಿಕಿತ್ಸಕರು ಸರ್ಕಾರಿ ಜಿಲ್ಲಾಸ್ಪತ್ರೆ, ವಿಜಯಪುರ

 

-ಜಿ.ಎಸ್‌. ಕಮತರ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.