Vijayapura; ಪರಿಷತ್ ಮಾಜಿ ಸದಸ್ಯ ಎಸ್.ಎ.ಜಿದ್ದಿ ನಿಧನ
Team Udayavani, Feb 11, 2024, 1:02 PM IST
ವಿಜಯಪುರ: ಜಿಲ್ಲೆಯ ಶಿಕ್ಷಣ ಪ್ರೇಮಿ, ಹಿರಿಯ ರಾಜಕೀಯ ನಾಯಕರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಯ ಅಡಿವೆಪ್ಪ ಜಿದ್ದಿ (83) ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಶಿವರಾಯ ಜಿದ್ದಿ ಅವರು, ಭಾನುವಾರ ಮಧ್ಯಾಹ್ನ ಬೆಳಿಗ್ಗೆ 11-30 ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಮೃತರು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
1994 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಎ.ಜಿದ್ದಿ ಅವರು, ವಿಜಯಪುರ ನಗರದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆ ಕಟ್ಟಿ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕಾಳಜಿ ನೀಡಿದ್ದರು.
ದೇವರಾಜ ಅರಸು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅನುಯಾಯಿ ಆಗಿದ್ದ ಎಸ್.ಎ.ಜಿದ್ದಿ ಅವರು ಜಿಲ್ಲೆಯ ಕಾಂಗ್ರೆಸ್ ನಾಯಕರಾಗಿದ್ದ ಬಿ.ಎಂ.ಪಾಟೀಲ, ಬಿ.ಎಸ್.ಪಾಟೀಲ ಸಾಸನೂರ ಸೇರಿದಂತೆ ಹಿರಿಯ ರಾಜಕೀಯ ನಾಯಕರ ಸಮಕಾಲೀನ ರಾಜಕೀಯದಲ್ಲಿ ಸಕ್ರೀಯರಾಗಿದ್ದರು.
ಎಸ್.ಎ.ಜಿದ್ದಿ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಂಬನಿ ಮಿಡಿದಿದ್ದು, ತಮ್ಮ ತಂದೆಯವರ ಸಮಕಾಲೀನ ರಾಜಕೀಯ ನಾಯಕನನ್ನು ಕಳೆದುಕೊಂಡುದಾಗಿ ಸ್ಮರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.