ಸಮಾಜಮುಖೀ ಕಾರ್ಯಕ್ಕೆ ಮುಂದಾದ “ಥರ್ಡ್‌ ಕ್ಲಾಸ್‌`

ಲಿಂಬೆ-ಬಾರೆ ಹಣ್ಣಿನಲ್ಲಿ ಅರಳಿದ ಗಣೇಶ ಹೂವಿನಲ್ಲಿ ಜನ್ಮತಳೆದ ವೀಣೆ, ತಬಲಾ, ಪಿಯಾನೋ ಸಂಗೀತ ವಾದ್ಯ

Team Udayavani, Jan 17, 2020, 5:28 PM IST

17-January-27

ವಿಜಯಪುರ: ನಗರದ ತೋಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದ ಬಸವವನದಲ್ಲಿ ಹಾಪ್ಸಕಾಮ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಫ‌ಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ಜನಾಕರ್ಷಣೆ ಕೇಂದ್ರ ಎನಿಸಿದೆ.

ಹುಬ್ಬಳ್ಳಿ, ಶಿವಮೊಗ್ಗದ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿರುವ ಕಲಾವಿದರ ತರಕಾರಿ, ಹಣ್ಣು-ಹೂ, ಸಿರಿಧಾನ್ಯಗಳಲ್ಲಿ ವಿವಿಧ ಮೂರ್ತಿಗಳನ್ನು ರೂಪಿಸಿದ್ದು, ಒಂದಕ್ಕಿಂತ ಮತ್ತೂಂದು ಆಕರ್ಷಕವಾಗಿದ್ದು, ಭೇಟಿ ನೀಡುವ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಫ‌ಲಪುಷ್ಪ ಮೇಳದ ಪ್ರಾಂಗಣ ಪ್ರವೇಶ ದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುವ ವಾಹನಗಳ ಬಳಕೆ ರಹಿತ ಟೈರ್‌ಗಳಲ್ಲಿ ಅರಳಿರುವ ವಿವಿಧ ಬಗೆಯ ಅಲಂಕಾರ ಹಾಗೂ ತರಕಾರಿಗಳಿಂದಲೇ ಬಿಡಿಸಿರುವ ಸುಂದರ ರಂಗೋಲಿ ನಿಮ್ಮನ್ನು ವಿಶಿಷ್ಟವಾಗಿ ಸ್ವಗತಿಸುತ್ತಿದೆ. ಪಕ್ಕದಲ್ಲಿ ಫ್ಲೆಕ್ಸ್‌ನಲ್ಲಿ ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್‌. ಮರಿಗೌಡರ ಭಾವಚಿತ್ರವೂ ನಿಮ್ಮ ಗಮನ ಸೆಳೆಯುತ್ತದೆ. ಕುಂಬಳಕಾಯಿಉ, ಕಲ್ಲಂಗಡಿ, ಹಾಗಲಕಾಯಿ, ಅನಾನಸ್‌, ಸವತೆ ಕಾಯಿ, ಬದನೆಕಾಯಿಯಂತ ತರಕಾರಿಗಳಲ್ಲಿ ಹಲವರು ಸಾಧಕ ಶಕ್ತಿಗಳ ಚಿತ್ರಗಳು ಅನಾವರಣಗೊಂಡಿವೆ.

ಈಚೆಗೆ ಅಗಲಿದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರು, ತುಮಕೂರು ಸಿದ್ಧಗಂಗೆಯ ಡಾ.ಶಿವಕುಮಾರ ಶ್ರೀಗಳು, ವರನಟ ಡಾ.ರಾಜಕುಮಾರ, ಸಾಮಾಜಿಕ ಕ್ರಾಂತಿಪುರುಷ ಬಸವೇಶ್ವರ, ವೀರಸನ್ಯಾಸಿ ಸ್ವಾಮಿವಿವೇಕಾನಂದ, ವಿಶ್ವಸಂತ ಕನಕದಾಸ, ಭಾರತದ ಅಪ್ರತಿಮ ಸ್ವಾತಂತ್ರ್ಯ ಸೇನಾನಿಗಳಾದ ಮಹತ್ಮಾ ಗಾಂಧೀಜಿ, ಭಗತ್‌ ಸಿಂಗ್‌, ನೇತಾಜಿ ಸುಭಾಶ್ಚಂದ್ರ ಭೋಸ್‌, ಸರ್ದಾರ ವಲ್ಲಭ ಭಾಯಿ ಪಟೇಲ್‌, ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌, ವಿಶ್ವ ಕ್ರಿಕೆಟ್‌ನ ಆರಾಧಕ ಸಚಿನ್‌ ತೆಂಡೂಲ್ಕರ್‌, ವಿರಾಟ ಕೊಯ್ಲಿ ಭಾವಚಿತ್ರಗಳು ಕಾರ್ವಿಂಗ್‌ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಜಾÒನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು, ಸಂಶೋಧಕ ಎಂ.ಎಂ.ಕಲಬುರ್ಗಿ, ವಿಜಯಪುರ ಅಕ್ಷರ ಪ್ರವರ್ತಕ ಬಂಥನಾಳ ಶ್ರೀಗಳು, ವಚನಪಿತಾಮಹ ಡಾ| ಫ‌.ಗು. ಹಳಕಟ್ಟಿ, ದಾನಶ್ರೇಷ್ಠ ಬಂಗಾರಮ್ಮ ಸಜ್ಜನ ಹೀಗೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಅಪ್ರತಿಮರ ಚಿತ್ರಗಳು ಹಣ್ಣುಗಳಲ್ಲಿ ಕಲಾವಿದರ ಕೈಚಳಕದಲ್ಲಿ ಅರಳಿ ನಿಂತಿವೆ.

ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಿವೆ. ಮತ್ತೂಂದೆಡೆ ನರ್ತಿಸುತ್ತಿರುವ ನವಿಲು, ಡೈನೋಸಾರ್‌, ಡೊಳ್ಳು ಹೊಟ್ಟೆ ಗಣಪನೂ ಆಕರ್ಷಕವೇ. ವಿವಿಧ ವರ್ಣಮಯ ಗುಲಾಬಿ ಹಾಗೂ ಇತರೆ ಹೂಗಳಲ್ಲಿ ಪ್ರೇಮ ಸಂಕೇತವಾದ ಹೃದಯ,
ಸಂಗೀತ ವಾದನಗಳಾದ ಪಿಯಾನೋ, ತಬಲಾ, ವೀಣೆಗಳಂಥ ಸಂಗೀತ ಸಾಧನಗಳು ಕಲಾವಿನ ಕೈಚಳಕ ಕೌಶಲ್ಯಕ್ಕೆ ಮೂಕವಿಸ್ಮಿತರನ್ನಾಗಿ ಮಾಡುತ್ತಿವೆ.

ಲಿಂಬೆ, ಬಾರೆ, ಒಣದ್ರಾಕ್ಷಿಗಳಲ್ಲಿ ಅರಳಿನಿಂತ ಗಣೇಶ ದೂರದಿಂದಲೇ ಪ್ರೇಕ್ಷಕ-ವೀಕ್ಷಕರನ್ನು ತನ್ನತ್ತ ಸೆಳೆತುತ್ತಿದ್ದಾನೆ. ಶಿವಮೊಗ್ಗದ ಗಿರಿಶ, ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಗಿರೀಶ, ಇಸ್ಮಾಯಿಲ್‌ ತಲವಾಯಿ ಇವರ ಕಲಾಕೌಶಲ್ಯ ಇಲ್ಲಿ ಮೇಳೈಸಿದೆ. ಮತ್ತೂಂದೆಡೆ ವಿಶೇಷವಾಗಿ ಜಿಲ್ಲೆ ಅದ್ಭುತ ಶಕ್ತಿಪ್ರಭೆಗಳಾದ ವಚನ ಪಿತಾಮಹ ಫ.ಗು. ಹಳಕಟ್ಟಿ, ಸಂಗನಬಸವ ಸ್ವಾಮಿಗಳು, ಸಿದ್ದೇಶ್ವರ ಮಹಾಸ್ವಾಮಿಗಳು, ಅಮೀರಬಾಯಿ ಕರ್ನಾಟಕಿ, ಕರ್ನಾಟಕ ಏಕೀಕರಣ ರೂವಾರಿ ಆಲೂರು ವೆಂಕಟರಾಯರು, ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಾರೆ ರಾಜೇಶ್ವರಿ ಗಾಯಕವಾಡ ಅವಂಥ ಸ್ಥಾನಿಕ ಪ್ರತಿಭೆಗಳ ಚಿತ್ರಣಗಳೂ ಗಮನ ಸೆಳೆಯುತ್ತಿವೆ.

ಮೂಲಂಗಿ, ಗಜ್ಜರಿ, ಬದನೆ, ಸವತೆಕಾಯಿಗಳಂಥ ತರಕಾರಿಗಳಲ್ಲಿ ನವಿಲು, ಕೋಳಿ, ಹಂಸ, ಬಾತುಕೋಳಿ, ಜಿಂಕೆ, ಅಳಿಲು, ಮೀನು, ಮೊಸಳೆ, ಮೀನು ಗಳಂಥ ವಿವಿಧ ಪ್ರಾಣಿ ಪಕ್ಷಿಗಳ ಜೊತೆಗೆ ಹಡಗು ಕೂಡ ಗಮನ ಸೆಳೆಯುತ್ತಿವೆ. ಮತ್ತೂಂದೆಡೆ ಹುಬ್ಬಳ್ಳಿ ಶಿವಲಿಂಗಪ್ಪ ಬಡಿಗೇರ, ಕೈಚಳಕದಲ್ಲಿ ಸಜ್ಜೆ, ನವಣೆ, ಹಾರಕ, ಬರಗು, ರಾಗಿ, ಸಾಂವೆ, ಜೋಳ, ರಾಗಿ, ನವಣೆಗಳಂಥ ಸಿರಿಧಾನ್ಯಗಳಿಂದ ರೂಪಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಜನಾಕರ್ಷಕವಾಗಿದೆ.

ಮತ್ತೂಂದು ಬದಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೇಕಾದ ಮಾಹಿತಿ ನೀಡುವ ವಿವಿಧ ವಸ್ತುಗಳ ಮಾರಾಟ-ಪ್ರದರ್ಶನವೂ ಇದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ವಿವಿಧ ಬಗೆಯ ಹಣ್ಣುಗಳ ಸಸಿಗಳು, ಹೂ-ತರಕಾರಿ ಅಲಂಕಾರಿಕ, ಔಷ  ಸಸಗಳು ಮಾಹಿತಿ ನೀಡುವ ಮಳಿಗೆಗಳು ಒಂದೇ ಸೂರಿನಲ್ಲಿ ಲಭ್ಯವಾಗಿರುವುದನ್ನು ಕಂಡು ಉದ್ಘಾಟನೆಗೆ ಬಂದಿದ್ದ ಸ್ವಯಂ ಸಿದ್ಧೇಶ್ವರ ಶ್ರೀಗಳೆ ಸಂತಸ ವ್ಯಕ್ತಪಡಿಸಿರುವುದು ಫ‌ಲ-ಪುಷ್ಮ ಪ್ರದರ್ಶನ ಮೇಳ ಆಯೋಜಿಸಿರುವ ಜಿ.ಪಂ., ತೋಟಗಾರಿಕೆ ಹಾಗೂ ಹಾಪ್‌ಕಾಮ್ಸ್‌ ಅಧಿಕಾರಿ-ಸಿಬ್ಬಂದಿಗೆ ಸಂರ್ತಪ್ತಿ ನೀಡಿದೆ.

ಟಾಪ್ ನ್ಯೂಸ್

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.