Vijayapura; ಖಾಲಿ ತಟ್ಟೆ ಬಾರಿಸಿ ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು
Team Udayavani, Dec 21, 2023, 5:41 PM IST
ವಿಜಯಪುರ: ಸೇವಾ ಖಾಯಂಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಗುರುವಾರ ಖಾಲಿತಟ್ಟೆ ಬಾರಿಸುವ ಮೂಲಕ ವಿಶೇಷ ರೀತಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮುಷ್ಕರ 29ನೇ ದಿನಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಛೇರಿಯ ಎದುರು ನಡೆಸುತ್ತಿರುವ ಅವರು ಧರಣಿ ಸ್ಥಳದಲ್ಲಿ ಖಾಲಿ ತಟ್ಟೆ ಬಾರಿಸುವ ಮೂಲಕ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದರು.
ಧರಣಿ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು, ಕಳೆದ 15 ರಿಂದ 20 ವರ್ಷ ಸೇವೆ ಸಲ್ಲಿಸಿ ತಮ್ಮ ಸೇವೆಯನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿ ತಟ್ಟೆ ಬಾರಿಸುವ ಮುಖಾಂತರ ಜಾಗಟೆ ಚಳುವಳಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಶಾಸಕ ಅರುಣ ಶಹಪುರ, ಸುಮಾರು 20 ವರ್ಷಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಿ, ಸೇವೆ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಸೇವಾ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಉಪನ್ಯಾಸಕರು ಒಗ್ಗಟ್ಟು ಪ್ರದರ್ಶಿಸಬೇಕು. ಐಕ್ಯತೆಯ ಹೋರಾಟದಿಂದ ಗೆಲುವು ಸಾಧಿಸಲು ಸಾಧ್ಯವಿದೆ. ಸರ್ಕಾರ ಕೂಡಲೇ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲವಿದ್ದು, ಕೂಡಲೇ ಸರ್ಕಾರ ನ್ಯಾಯ ಸಮ್ಮತವಾದ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಾದ್ಯಂತ ಹೋರಾಟ ಬಲಿಷ್ಠಗೊಳಿಸುವುದಕ್ಕಾಗಿ ಅತಿಥಿ ಉಪನ್ಯಾಸಕರ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಶುಕ್ರವಾರ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುರೇಶ ಡಬ್ಬಿ ತಿಳಿಸಿದ್ದಾರೆ.
ಡಾ. ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಡಾ. ಆರ್.ಎಲ್. ಕಡೆಮನಿ, ಡಾ.ಸುರೇಶ ಬಿರಾದಾರ, ಡಾ.ಭಾರತಿ ಹಿರೇಮಠ, ಡಾ.ರೇಣುಕಾ ಹೆಬ್ಬಾಳ, ಡಾ.ಎಸ್.ಐ. ಎಂಭತ್ನಾಳ, ಡಾ.ಆರ್.ಬಿ. ನಾಗರಡ್ಡಿ, ಡಾ.ಡಿ.ಬಿ. ಕುಲಕರ್ಣಿ, ಡಾ.ಆರ್.ಕೆ. ತೇಲಿ, ಡಾ.ಖುದ್ದುಸ್ ಪಟೇಲ, ಡಾ.ವೀಣಾ ಕಡಕೋಳ, ಡಾ.ಶ್ರೀದೇವಿ ಜತ್ತಿ, ಡಾ.ವಿಜಯಲಕ್ಷ್ಮೀ ಪಾಟೀಲ, ಡಾ. ಜಯಮ್ಮ, ಶ್ರೀಶೈಲ ಹೆಬ್ಬಿ, ಗೋಪಾಲ ಚಕ್ರಸಾಲಿ, ರೂಪಾ ಹೂಗಾರ, ಲೀಲಾ ವಿ.ಟಿ. ಎಸ್.ಎ. ಪಾಟೀಲ, ರೂಪಾ ಕಮದಾಳ, ಐಶ್ವರ್ಯ ಪಾನಶೆಟ್ಟಿ, ಸುರೇಖಾ ಹದನೂರ, ಭಾರತಿ ಹೊನವಾಡ, ಭಾರತಿ ಇನಾಮದಾರ, ಶ್ರೀಧರ ಇರಸೂರ, ಗೀತಾ ಬೆಳ್ಳುಂಡಗಿ, ಮಂಜುಳಾ ಭಾವಿಕಟ್ಟಿ, ಸರಿತಾ ಹಿಪ್ಪರಗಿ, ಎಸ್.ಬಿ. ಬಿರಾದಾರ, ರಮೇಶ ಕಡೇಮನಿ, ಡಾ. ವಿಜಯಲಕ್ಷ್ಮೀ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.