ಶಿಕ್ಷಣ ಜೀವಂತಿಕೆಯ ಪ್ರತೀಕ
ಕಲಿಸಿದ ಗುರುಗಳನ್ನು ಗೌರವಿಸಿ ಉತ್ತಮ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ
Team Udayavani, Feb 10, 2020, 4:05 PM IST
ವಿಜಯಪುರ: ಶಿಕ್ಷಣ ಜಡ ಪ್ರಕ್ರಿಯೆಯಲ್ಲ, ಅದೊಂದು ಜೀವಂತ ನಿರಂತರ ಪ್ರಕ್ರಿಯೆ. ಉಪಕರಣದಿಂದ ಬೋಧನೆ ಮಾಡಿದರೆ ಅನುಕೂಲ ಆಗಬಹುದೇ ಹೊರತು ನಕಾರಾತ್ಮಕ ಪರಿಣಾಮ ಅಸಾಧ್ಯ ಎಂದು ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ| ಮಧ್ವಾಚಾರ್ಯ ಮೊಕಾಶಿ ಅಭಿಪ್ರಾಯಪಟ್ಟರು.
ವಿಜಯಪುರದ ಪಿಡಿಜೆ ಪಪೂ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದ 1981ನೇ ಬ್ಯಾಚ್ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣ ಜೀವಂತವಾಗಿರುವ ವ್ಯವಸ್ಥೆ, ಶಿಕ್ಷಕ ತನ್ನಲ್ಲಿರುವ ಜ್ಞಾನವನ್ನು ಶಿಷ್ಯವರ್ಗಕ್ಕೆ ಧಾರೆ ಎರೆದಾಗಲೇ ಶಿಕ್ಷಣದ ನಿಜಾರ್ಥ ಸಾಕಾರಗೊಳ್ಳುತ್ತದೆ. ಅಲ್ಲಿ ಜೀವಂತಿಕೆಯ ಪ್ರಕ್ರಿಯೆ, ಪ್ರತಿಕ್ರಿಯೆ ಇರಬೇಕು, ಆಗ ಅದೇ ನಿಜವಾದ ಶಿಕ್ಷಣ ಎಂದರು.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಕ್ಲಾಸ್, ಅತ್ಯಾಧುನಿಕ ಬೋಧನಾ ಉಪಕರಣಗಳಿಂದ ಬೋಧನೆ ಒಂದಿಷ್ಟು ಆಕರ್ಷಕವಾಗಿರಬಹುದು, ಆದರೆ ಪರಿಣಾಮಕಾರಿ ಯಾಗಿರುವುದಿಲ್ಲ, ಶಿಕ್ಷಕನಿಂದ ಬೋಧನೆಯಾದಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಹುದ್ದೆಗಳನ್ನು ಅಲಂಕರಿಸಿ, ನಾನಾ ಕಡೆಗಳಲ್ಲಿ ನೆಲೆಸಿದರೂ ಕಲಿತ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಬೇಕು. ಕಲಿಸಿದ ಗುರುಗಳನ್ನು ಗೌರವಿಸಬೇಕು. ಕೂಡಿ ನಲಿದಾಡಿದ ಸ್ನೇಹಿತರನ್ನು ಮತ್ತೆ ಕಾಣುವ ಮನೋಭಾವದಿಂದ ಸಮಾವೇಶಗೊಂಡಿರುವುದು ಸಹ ಒಂದು ರೀತಿಯ ಸಂಸ್ಕಾರ ಎಂದು ಸಂತಸ ವ್ಯಕ್ತಪಡಿಸಿದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಶಿಕ್ಷಕ ಬಿ.ಎ. ಸೊಂಡೂರ, ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುವ ಮನೋಭಾವ ಸದಾ ಜಾಗೃತವಾಗಿರಬೇಕು. ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಶ್ರಾಂತ ದೈಹಿಕ ಶಿಕ್ಷಕ ಆರ್.ಆರ್. ಕುಲಕರ್ಣಿ ಮಾತನಾಡಿ, ಸಾಧನೆಗೆ ಸದೃಢವಾದ ಶರೀರ ಅವಶ್ಯ, ಹೀಗಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಕೆಲಸದ ಒತ್ತಡದ ಮಧ್ಯದಲ್ಲಿಯೂ ಆರೋಗ್ಯಕ್ಕೆ ವಿಶೇಷ ಒತ್ತು ನೀಡಬೇಕಾಗಿರುವುದು ಅತ್ಯಂತ ಅಗತ್ಯ, ಆರೋಗ್ಯ ಚೆನ್ನಾಗಿದ್ದರೆ ಇನ್ನೂ ಸಾಧನೆ ಮಾಡಬಹುದಾಗಿದೆ ಎಂದರು.
ವಿಶ್ರಾಂತ ಕಲಾಶಿಕ್ಷಕ ಅಂಬಾದಾಸ ಜೋಶಿ ಮಾತನಾಡಿ, ಈ ಶಾಲೆಯಲ್ಲಿ 1981ರಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶದಲ್ಲಿ ನೆಲೆ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ಸಂತೋಷದ ಸಂಗತಿ. ಈ ಸಂತೋಷವೇ ಶಿಕ್ಷಕರಿಗೆ ಎಲ್ಲ ರೀತಿಯ ಗೌರವ ತಂದುಕೊಡುತ್ತದೆ. ಎಲ್ಲೇ ಇರಿ ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಜಲವನ್ನು ಮರೆಯದಿರಿ, ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿ ಕಲಿಸದೇ ಭಾರತೀಯ ಸಂಸ್ಕೃತಿ ಬೋಧಿಸಿ ಎಂದು ಕರೆ ನೀಡಿದರು.
1981ರಲ್ಲಿ ಪಿಡಿಜೆಯಲ್ಲಿ ಅಧ್ಯಯನ ಮಾಡಿ ಇಂದು ಬೇರೆ ಬೇರೆ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆ ಸ್ನೇಹಿತರೆಲ್ಲರೂ ಮತ್ತೆ ಅನೇಕ ವರ್ಷಗಳ ನಂತರ ಭೇಟಿಯಾದರು. ಈ ಕ್ಷಣದಲ್ಲಿ ವಿಚಾರ ವಿನಿಮಯ, ಉಭಯ ಕುಶಲೋಪರಿ ಸಂದರ್ಭದಲ್ಲಿ ಆನಂದ ಭಾಷ್ಪ ಸುರಿಸಿದರು. ನಂತರ ತಮ್ಮನ್ನು ಕಲಿಸಿದ ಶಿಕ್ಷಕರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿ ಕಾಲಿಗೆ ನಮಸ್ಕರಿಸಿ ಗೌರವ ಸಮರ್ಪಿಸಿದರು.
ಹಳೆ ವಿದ್ಯಾರ್ಥಿಗಳಾದ ಶ್ರೀನಿವಾಸ ದೇಸಾಯಿ, ಮನ್ಮಥ ಕುಲಕರ್ಣಿ, ಡಾ| ಅನಂತ ದೇಸಾಯಿ, ಜಾವೇದ ಅತ್ತಾರ, ವಿದ್ಯಾ ರಾಜಪುರೋಹಿತ ಔರಸಂಗ, ಡಾ| ಸುಮತಿ, ಚಂದ್ರಾ, ಡಾ| ರವೀಂದ್ರ ಜಹಾಗೀರದಾರ, ಶಿವಾನಂದ ಅಂಗಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.