ಕೋರ್ಟಲ್ಲಾದರೂ ಧರ್ಮ ಪಡೀತೇವೆ; ಎಂಬಿ ಪಾಟೀಲ್‌


Team Udayavani, Dec 11, 2017, 6:00 AM IST

10BJP1_B-(2).jpg

ವಿಜಯಪುರ: ಬೌದ್ಧ ಧರ್ಮದಂತೆ ವಿಶ್ವ ಮಾನ್ಯವಾಗುವ ಅವಕಾಶ ಇದ್ದ ಲಿಂಗಾಯತ ಧರ್ಮಕ್ಕೆ ಕೆಲವರ ಕುತಂತ್ರದಿಂದ ಸಾಧ್ಯವಾಗಿಲ್ಲ. ಈಗ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು ಖಚಿತವಾಗಿದೆ. ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಿ ಸ್ವತಂತ್ರ ಧರ್ಮದ ಮಾನ್ಯತೆ ಪಡೆದೇ ಪಡೆಯುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದ‌‌ರು.

ನಗರದ ಡಾ.ಅಂಬೇಡ್ಕ‌ರ್‌  ಜಿಲ್ಲಾ ಕ್ರೀಡಾಂಗಣದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, “ಲಿಂಗಾಯತ ಧರ್ಮದ ಐತಿಹಾಸಿಕ ಹಿನ್ನೆಲೆಯನ್ನು ದಾಖಲೆ ಸಹಿತ ಸತ್ಯ ಹೇಳುವ ನಮ್ಮ ವಿರುದ್ಧ ನನ್ನ ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಿದ್ದು, ಇಂಥ ಯಾವುದೇ ಅಪಪ್ರಚಾರದ ಹುನ್ನಾರ ನಡೆಸಿದರೂ 50 ಸಾವಿರ ಮತಗಳಿಂದ ನಾನು ಗೆಲ್ಲುವುದು ಖಚಿತ ಎಂದು ನನ್ನ ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ’ ಎಂದರು.

ಸಮಾಜದಲ್ಲಿ ಸಾಮಾಜಿಕ ಅಸಮಾನತೆ, ಲಿಂಗ, ಜಾತಿ, ವರ್ಣ ವ್ಯವಸ್ಥೆಯ ವಿರುದ್ಧ ಶೋಷಿತರಿಗೆ ಧ್ವನಿಯಾಗಲು ವಿಶ್ವಶ್ರೇಷ್ಠ ಧರ್ಮ ಸ್ಥಾಪಿಸಿದ ಬಸವಣ್ಣನರು ಜಗತ್ತಿನಲ್ಲಿರುವ ಶ್ರೇಷ್ಠ ಧರ್ಮಗಳ ಸಾಲಿನಲ್ಲಿ ಸೇರುವ ಅರ್ಹತೆ ಇರುವ ಧರ್ಮ ಸ್ಥಾಪಿಸಿದ್ದರೂ ವ್ಯವಸ್ಥಿತ ಹುನ್ನಾರದ ಫಲವಾಗಿ ಇದು ಸಾಧ್ಯವಾಗಿಲ್ಲ. ಈ ಕುರಿತು ನಮ್ಮ ಬಳಿ ಐತಿಹಾಸಿಕ ದಾಖಲೆಗಳಿದ್ದು, ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದೇವೆ ಎಂದು ದಾಖಲೆ ಪ್ರದರ್ಶಿಸಿದರು.

“12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ 1500 ಶರಣರನ್ನು ಹತ್ಯೆ ಮಾಡಿ ಜಾತಿ ವ್ಯವಸ್ಥೆ ಪೋಷಿಸಿದ ಜಾತಿ ವ್ಯವಸ್ಥೆಯ ಜನರು, ವಚನ ಸಾಹಿತ್ಯ ನಾಶಕ್ಕೆ ಮುಂದಾದಾಗ ಶರಣರು ನಮ್ಮ ಧರ್ಮಗ್ರಂಥ ವಚನಗಳನ್ನು ಸಂರಕ್ಷಿಸುವ ಕೆಲಸ ಮಾಡಿದ್ದಾರೆ. 1871ರವರೆಗೆ ಅಸ್ತಿತ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ 1881ರಲ್ಲಿ ಮೈಸೂರು ರಾಜ್ಯದಲ್ಲಿ ರಂಗಾಚಾರುÉ ಎಂಬ ಲಿಂಗಾಯತ ವಿರೋಧಿ ಅಧಿಕಾರಿಯ ಕೃತ್ಯದಿಂದಾಗಿ ಲಿಂಗಾಯತರನ್ನು ಹಿಂದೂ ಧರ್ಮಕ್ಕೆ ಸೇರ್ಪಡೆ ಮಾಡಿ ಶೂದ್ರರಲ್ಲಿ ಸೇರಿಸಲಾಯಿತು. ಈ ಹುನ್ನಾರದಿಂದಾಗಿ ಕನ್ನಡ ನೆಲದಲ್ಲಿ ಜನ್ಮ ತಳೆದ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಇಲ್ಲವಾಗಿಸುವ ಕೃತ್ಯ ನಡೆಯಿತು’ ಎಂದು ಕಿಡಿ ಕಾರಿದರು.

ಸಾತಂತ್ರ್ಯಪೂರ್ವದಲ್ಲಿ ಹಾಗೂ ಸಂವಿಧಾನಕ್ಕೂ ಮುನ್ನವೇ ಅಸ್ತಿತ್ವದಲ್ಲಿದ್ದ ಲಿಂಗಾಯತ ಧರ್ಮಕ್ಕೆ 1881ರ ಮೊದಲು ಜೈನ, ಬೌದ್ಧ, ಸಿಖ್‌ ಪ್ರತ್ಯೇಕ ಧರ್ಮದ ಸ್ಥಾನಮಾನವಿತ್ತು. 1874ರ ಜನಗಣತಿ ಇದನ್ನು ಸ್ಪಷ್ಟಪಡಿಸುತ್ತದೆ. ಆದರೆ 1881ರ ಜನಗಣತಿಯಲ್ಲಿ ಪ್ರಪ್ರಥಮ ಬಾರಿಗೆ ಲಿಂಗಾಯತರನ್ನು ಪ್ರತ್ಯೇಕ ಧರ್ಮ ಎಂದು ನಮೂದಿಸದೇ ಹಿಂದೂ ಧರ್ಮದ ಶೂದ್ರ ಜಾತಿಯನ್ನಾಗಿ ಸೇರಿಸಲಾಯಿತು ಎಂದರು.

ವಿಶೇಷವೆಂದರೆ 1881ರ ಜನಗಣತಿಯಲ್ಲಿಯೂ ವೀರಶೈವ ಎಂಬ ಪದಪ್ರಯೋಗವೇ ಇಲ್ಲ. ಈ ಜನಗಣತಿಯಲ್ಲಿ ಪಂಚಾಚಾರ್ಯರು ಹಾಗೂ ಅಯ್ಯನವರು ಮೊದಲಾದವರನ್ನು ಶೂದ್ರ ಪಂಗಡಕ್ಕೆ ಸೇರಿಸಲಾಗಿತ್ತು. 1891ರಲ್ಲಿ ಮೊದಲ ಬಾರಿಗೆ ಗಾಂಜಾಂ ಮಠದ ನಂಜುಂಡ ಸ್ವಾಮಿಗಳು 1881ರ ಜನಗಣತಿ ವಿಚಾರವಾಗಿ ಮಹಾರಾಜ ಚಾಮರಾಜೇಂದ್ರ ಒಡೆಯರ ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ವೀರಶೆ„ವ ಬ್ರಾಹ್ಮಣ ಎಂಬ ಪದ ಪ್ರಯೋಗವಾಗಿದೆ. 

ವೀರಶೈವ ಮತವನ್ನು ಶೂದ್ರ ತರಗತಿಯಲ್ಲಿ ಸೇರಿಸಿರುವುದಕ್ಕೆ ಅಪಮಾನವಾಗಿದ್ದು ಈ ದುಃಖದಿಂದ ತಮ್ಮನ್ನು ಪಾರು ಮಾಡಬೇಕೆಂದು ಕೋರಲಾಗಿತ್ತು. ಆ ಪತ್ರವೂ ನಮಗೆ ಲಭಿಸಿದೆ ಎಂದರು.

ಈ ಐತಿಹಾಸಿಕ ಪ್ರಮಾದ ಸರಿಪಡಿಸುವುದಕ್ಕಾಗಿ ನಮ್ಮ ಹಿರಿಯರು ಸಾಕಷ್ಟು ಹೋರಾಟ ಮಾಡಿದ್ದರು. 1942ರಲ್ಲಿ ಸೊಲ್ಲಾಪುರದ ಕೆ.ಎಸ್‌. ಸರ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಲ್‌ ಇಂಡಿಯಾ ಲಿಂಗಾಯತ ಅಡ್ವೆ$çಸರಿ ಕಮಿಟಿ ಫಾರ್‌ ರಿಕ್ರೂಟಿಂಗ್‌ ಸಭೆಯ ನಡಾವಳಿಯಲ್ಲಿಯೂ ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು ಎಂದರು.

ಗದಗನ ಡಾ. ಸಿದ್ಧಲಿಂಗ ಶ್ರೀಗಳು, ಇಳಕಲ್‌ನ ಡಾ. ಮಹಾಂತ ಶ್ರೀಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ನಾಗನೂರು ಶ್ರೀಗಳು, ಭಾಲ್ಕಿ ಪಟ್ಟದದೇವರು, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾಂದ ಶ್ರೀಗಳು, ರಾಷ್ಟ್ರೀಯ ಬಸವಸೇನೆಯ ರಾಷ್ಟ್ರೀಯ ಅಧ್ಯಕ್ಷ, ಗಣಿ ಸಚಿವ ವಿನಯ ಕುಲಕರ್ಣಿ, ಸಚಿವರಾದ ಆರ್‌.ಬಿ. ತಿಮ್ಮಾಪುರ, ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್‌ ಅಧಿ ಕಾರಿ ಡಾ. ಎಸ್‌.ಎಂ.ಜಾಮದಾರ, ಮಾಜಿ ಶಾಸಕ ಡಾ. ಎಂ.ಪಿ.ನಾಡಗೌಡ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಬಿ.ಆರ್‌. ಪಾಟೀಲ ಆಳಂದ, ಗಣೇಶ ಹುಕ್ಕೇರಿ, ಪ್ರಕಾಶ ತಪಶಟ್ಟಿ ಇತರರು ಇದ್ದರು.

ಟಾಪ್ ನ್ಯೂಸ್

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

court

Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್‌ ಹಕ್ಕು ಸಾಧಿಸುವಂತಿಲ್ಲ

1-mobile-tower

Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ

ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

ct rav

CIDಗೆ ಹೆಬ್ಬಾಳ್ಕರ್‌ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?

vidhana-soudha

Congress; ಪರಿಷತ್‌ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

1-bjp

Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

PM Modi Gifts: 2023ರಲ್ಲಿ ಬೈಡನ್‌ ಪತ್ನಿ ಜಿಲ್‌ ಅವರಿಗೆ ಮೋದಿ 17 ಲಕ್ಷದ ಉಡುಗೊರೆ

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

court

Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್‌ ಹಕ್ಕು ಸಾಧಿಸುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.