ತಂದೆ ಮೇಲಿನ ದ್ವೇಷಕ್ಕೆ ಮಗಳ ಚಾರಿತ್ರ್ಯ ವಧೆ: ನವವಿವಾಹಿತೆ ಆತ್ಮಹತ್ಯೆ
Team Udayavani, Apr 26, 2023, 1:50 PM IST
ವಿಜಯಪುರ: ತಂದೆ ಮೇಲಿನ ರಾಜಕೀಯ ದ್ವೇಷಕ್ಕೆ ಮಗಳ ಮಾಜಿ ಪ್ರಿಯಕರನ ಬಳಸಿಕೊಂಡು ಮೂವರು ಚಾರಿತ್ತ್ಯ ವಧೆಗೆ ಮುಂದಾಗಿದ್ದರು. ಇದರಿಂದ ಮನನೊಂದ ನವ ವಿವಾಹಿತೆ ಮಗಳು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಿಂದ ತಡವಾಗಿ ವರದಿಯಾಗಿದೆ.
ತಂದೆ ಅಸ್ಲಾಂ ಮುಲ್ಲಾನ ರಾಜಕೀಯ ದ್ವೇಷದ ವಿರೋಧಿಗಳು ತನ್ನ ವಿರುದ್ದ ಮಾಜಿ ಪ್ರಿಯಕರನನ್ನು ಬಳಸಿಕೊಂಡು ಚಾರಿತ್ರ್ಯವಧೆಗೆ ಮುಂದಾಗಿದ್ದರಿಂದ ಮಗಳು ಸುಹಾನಾ ಷರೀಫ್ ಸೋನಾರ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಉಪ್ಪಲದಿನ್ನಿ ಗ್ರಾಮದ ಅಸ್ಲಂ ಮುಲ್ಲಾ ಹಾಗೂ ಅದೇ ಗ್ರಾಮದ ದಸ್ತಗೀರ ಮುಳವಾಡ ಹಾಗೂ ಇನ್ನೂಸ್ ಪಾರ್ಥನಲ್ಲಿ ಅಲ್ತಾಫ್ ಸುಲೆಮಾನ್ ಇವರ ಮಧ್ಯೆ ರಾಜಕೀಯ ದ್ವೇಷವಿತ್ತು.
ಅಲ್ಲದೇ ದಸ್ತಗಿರಿ ಮುಲ್ಲಾ ಈತನ ಮಗಳ ಬಾಲ್ಯ ವಿವಾಹ ನಡೆಯುತ್ತಿದ್ದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪ್ರವೇಶ ಮಾಡಿ ಬಾಲ್ಯ ವಿವಾಹ ತಡೆದಿದ್ದರು. ಮತ್ತೊಂದೆಡೆ 2020 ರಲ್ಲಿ ಇನ್ನೂಸ್ ಪಾರ್ಥನಲ್ಲಿ ಅಲ್ತಾಫ್ ಸುಲೆಮಾನ್ ವಿರುದ್ಧ ಹತ್ಯೆಯತ್ನ ಪ್ರಕರಣ ದಾಖಲಾಗಿತ್ತು.
ಈ ಎರಡೂ ಕೃತ್ಯಗಳಿಗೆ ಅಸ್ಲಂ ಮುಲ್ಲಾನೇ ಕಾರಣ ಎಂದು ಶಂಕಿಸಿದ ಆರೋಪಿಗಳು ಅದೇ ಗ್ರಾಮದ ಯುವಕ ಹಾಗೂ ಸುಹಾನಾಳ ಮಾಜಿ ಪ್ರಿಯಕರ ಅಲ್ತಾಫ್ ಸುಲೆಮಾನ್ ಎಂಬ ಯುವಕನನ್ನು ಬಳಸಿಕೊಂಡು ವೈಯಕ್ತಿಕ ಫೋಟೋ, ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಅಲ್ತಾಫನ ಕಿರುಕುಳದಿಂದಾಗಿಯೇ ಅಸ್ಲಂ ತನ್ನ ಮಗಳು ಸುಹಾನಾಳನ್ನು ಹೊಕ್ಕುಂಡಿ ಗ್ರಾಮದ ಶರೀಫ್ ಸೋನಾರ ಎಂಬ ಯುವಕನ ಜೊತೆ 6 ತಿಂಗಳ ಹಿಂದೆ ಮದುವೆ ಮಾಡಿದ್ದ. ಆದರೂ ಬಿಡದ ಆರೋಪಿಗಳು ಅಲ್ತಾಫನನ್ನು ಹೊಕ್ಕುಂಡಿಗೆ ಕಳಿಸಿ ಆಕೆಗೆ ಕಿರುಕುಳ ಕೊಡಲು ಆರಂಭಸಿದ್ದರು.
ಮಾಜಿ ಪ್ರಿಯಕರ ಅಲ್ತಾಫ್ ಕೂಡ ಗಂಡನನ್ನು ಬಿಟ್ಟು ತನ್ನೊಂದಿಗೆ ಬರಬೇಕು. ಇದಕ್ಕಾಗಿ ದಸ್ತಗೀರ ಹಾಗೂ ಇನ್ನೂಸ್ 5 ಲಕ್ಷ ರೂ. ಹಾಗೂ ಕಾರು ನೀಡಿದ್ದಾರೆ. ನೀನು ನನ್ನೊಂದಿಗೆ ಬರದಿದ್ದರೆ ತನ್ನೊಂದಿಗೆ ಇರುವ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದರಿಂದ ಮಾನಸಿಕವಾಗಿ ನೊಂದಿದ್ದ 21 ವರ್ಷದ ನವ ವಿವಾಹಿತೆ ಸುಹಾನಾ ಸೋನಾರ ಏ.14 ರಂದು ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಳ್ಳುವ ಮುನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಆರೋಪಿಗಳಾದ ಅಲ್ತಾಫ್, ದಸ್ತಗೀರ ಹಾಗೂ ಇನ್ನೂಸ್ ವಿರುದ್ಧ ಅಸ್ಲಂ ಮುಲ್ಲಾ ಬಬಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.