ಸಿಂದಗಿ ಶಾಸಕ ಮನಗೂಳಿ ಪುತ್ರ ವ್ಯಾಮೋಹಕ್ಕೆ ಜೆಡಿಎಸ್ ಕೋಟೆ ಛಿದ್ರ
ಸಿಂದಗಿ ಪುರಸಭೆಯಲ್ಲಿ ಅರಳದ ಕಮಲ-ಗದ್ದುಗೆಗೆ ಹತ್ತಿರವಾದ ಕಾಂಗ್ರೆಸ್
Team Udayavani, Feb 12, 2020, 12:35 PM IST
ವಿಜಯಪುರ: ಮಾಜಿ ಸಚಿವ-ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಪ್ರತಿನಿಧಿಸುವ ಸಿಂದಗಿ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಜೆಡಿಎಸ್ ಛಿದ್ರವಾಗಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ 11 ಸ್ಥಾನ ಪಡೆದ ಕಾಂಗ್ರೆಸ್ ಗದ್ದುಗೆ ಏರಲು ಸನ್ನದ್ಧವಾಗಿದೆ.
ಜೆಡಿಎಸ್ 6 ಸ್ಥಾನ ಪಡೆದಿದ್ದರೆ, ಕೇವಲ ಮೂರು ಸ್ಥಾನ ಪಡೆದಿರುವ ಬಿಜೆಪಿ ಧೂಳಿಪಟವಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಈ ಹಿಂದಿನ ಅವ ಧಿಯಲ್ಲಿ 10 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 1 ಸ್ಥಾನ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ 8 ವಾರ್ಡ್‌ಗಳಲ್ಲಿ ಗೆದ್ದಿದ್ದ ಜೆಡಿಎಸ್ ಈ ಬಾರಿ 6 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಮೂಲಕ ತನ್ನ ಬಳಿ ಇದ್ದ ಎರಡು ಸ್ಥಾನ ಕಳೆದುಕೊಂಡಿದೆ. ಇನ್ನು ಕಳೆದ ಬಾರಿ 3 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿಯೂ ಆರಕ್ಕೇರದೇ 3ರಲ್ಲೇ ಗಿರಕಿ ಹೊಡೆದಿದೆ. ಇನ್ನು ಕಳೆದ ಬಾರಿ ಇಬ್ಬರಿದ್ದ ಪಕ್ಷೇತರರು ಈ ಬಾರಿ 3 ವಾರ್ಡ್‌ಗಳಲ್ಲಿ ಗೆದ್ದು ತಮ್ಮ ಸದಸ್ಯ ಬಲಕ್ಕೆ ಮತ್ತೂಬ್ಬರನ್ನು ಸೇರಿಸಿಕೊಂಡಿದೆ.
ಸ್ಥಳೀಯವಾಗಿ ಶಾಸಕರೂ ಇಲ್ಲದ, ಪಕ್ಷದ ಸಂಸದರೂ ಇಲ್ಲದ ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕರ ಪ್ರಭಾವವನ್ನೇ ಬಳಸಿಕೊಂಡು ವಾರ್ಡ್ವಾರು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೈಗೊಂಡ ನಿರ್ಣಾಯಕ ಕ್ರಮಗಳೇ ಕೈ ಪಡೆ ಮತ್ತೂಮ್ಮೆ ದಿಗ್ವಿಜಯ ಸಾಧಿಸಲು ಕಾರಣವಾಗಿದೆ. ಮೇಲ್ಮಟ್ಟದ ಜನಪ್ರತಿನಿಧಿಗಳ ಅಧಿಕಾರದ ಬಲ ಇಲ್ಲದಿದ್ದರೂ ಕಾಂಗ್ರೆಸ್ ಮತ್ತೂಮ್ಮೆ ಸಿಂದಗಿ ಪುರಸಭೆ ಅಧಿಕಾರದ ಗದ್ದುಗೆ ಏರುವ ಹಂತಕ್ಕೆ ಬಂದು ನಿಂತಿರುವುದು ರಾಜಕೀಯ ವಿಶ್ಲೇಷಕರನ್ನು ದಂಗು ಬಡಿಸಿದೆ.
ಶಾಸಕ ಎಂ.ಸಿ. ಮನಗೂಳಿ ಅವರ ಅತಿಯಾದ ಪುತ್ರ ವ್ಯಾಮೋಹವೇ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಛಿದ್ರವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎಂ.ಸಿ. ಮನಗೂಳಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಿಂತ ತಮ್ಮ ಪುತ್ರರನ್ನು ರಾಜಕೀಯವಾಗಿ ಬೆಳೆಸಬೇಕು ಎಂಬ ಹಂಬಲ ಹೊಂದಿದ್ದಾರೆ. ಇದುವೇ ಪಕ್ಷದ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಮುಗ್ಗರಿಸಲು ಕಾರಣ. ತಮ್ಮ ಮಗ ಅಶೋಕ ಅವರನ್ನು ಸಿಂದಗಿ ವಿಧಾನಸಭೆಗೆ ತಮ್ಮ ಉತ್ತರಾಧಿ ಕಾರಿ ಮಾಡಬೇಕು. ಇನ್ನೊಬ್ಬ ಮಗ ಡಾ| ಶಾಂತವೀರ ಮಲ್ಲಪ್ಪ ಮನಗೂಳಿ ಅವರನ್ನು ಪುರಸಭೆಗೆ ಗದ್ದುಗೆ ಏರಿಸಬೇಕು ಎಂಬ ವಿಪರೀತ ಕುಟುಂಬ ವ್ಯಾಮೋಹ ಶಾಸಕ ಮನಗೂಳಿ ಅವರಿಗೆ.
ಶಾಸಕರ ಇಂಥ ಅತಿರೇಕದ ಕುಟುಂಬ ವ್ಯಾಮೋಹ ಜೆಡಿಎಸ್ ಪಕ್ಷಕ್ಕೆ ಕಳೆದ ಬಾರಿಗಿಂತ ಎರಡು ಸ್ಥಾನ ಕಳೆದುಕೊಳ್ಳುವಂತೆ ಮಾಡಿದೆ. ಅಲ್ಲದೇ ತಮ್ಮ ಮಗ ಡಾ| ಶಾಂತವೀರ ಅವರನ್ನು 13ನೇ ವಾರ್ಡ್‌ನಿಂದ ಕಣಕ್ಕಿಳಿಸಲು ನಿರ್ಧರಿಸಿದ್ದೇ ಕಾಂಗ್ರೆಸ್‌ಗೆ ವರದಾನ ಆಯ್ತು ಎಂದು ಜೆಡಿಎಸ್ ಸೋಲಿಗೆ ಕಾರಣ ನೀಡುವ ಮಾತು ಈಗ ಕೇಳಿ ಬರುತ್ತಿದೆ.
ಇನ್ನು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಇದ್ದು, ಮೇಲ್ಮನೆ ಶಾಸಕ ಅರುಣ ಶಹಾಪುರ ಅವರು ತವರು ನೆಲವಾದರೂ ಸಿಂದಗಿ ಪುರಸಭೆಯಂಥ ಸ್ಥಾನಿಕ ವ್ಯವಸ್ಥೆಯಲ್ಲಿ ಬಿಜೆಪಿ ಮೂರರಿಂದ ಮುಂದಡಿ ಇಡಲು ಸಾಧ್ಯವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿದ್ದರೂ ವಾರ್ಡ್‌ವಾರು ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಮುಖ ನೋಡಿ ಮೊಳ ಹಾಕಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಪುರಸಭೆ ಚುನಾವಣೆಯನ್ನು ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಗಂಭೀರವಾಗಿ ಪರಿಗಣಭಿಸದೇ ಇದ್ದುದು ಸಿಂದಗಿ ಪುರಸಭೆಯಲ್ಲಿ ತಾವರೆ ಮುದುಡಲು ಕಾರಣ ಎಂದು ಕಾರಣಗಳ ಪಟ್ಟಿ ಮಾಡಲಾಗುತ್ತಿದೆ.
ಶಾಸಕ ಎಂ.ಸಿ. ಮನಗೂಳಿ ಅವರ ಅತಿಯಾದ ಪುತ್ರ ವ್ಯಾಮೋಹವೇ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಛಿದ್ರವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎಂ.ಸಿ. ಮನಗೂಳಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಿಂತ ತಮ್ಮ ಪುತ್ರರನ್ನು ರಾಜಕೀಯವಾಗಿ ಬೆಳೆಸಬೇಕು ಎಂಬ ಹಂಬಲ ಹೊಂದಿದ್ದಾರೆ. ಇದುವೇ ಪಕ್ಷದ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಯಲ್ಲಿ ಜೆಡಿಎಸ್ ಮುಗ್ಗರಿಸಲು ಕಾರಣ. ತಮ್ಮ ಮಗ ಅಶೋಕ ಅವರನ್ನು ಸಿಂದಗಿ ವಿಧಾನಸಭೆಗೆ ತಮ್ಮ ಉತ್ತರಾಧಿಕಾರಿ ಮಾಡಬೇಕು. ಇನ್ನೊಬ್ಬ ಮಗ ಡಾ| ಶಾಂತವೀರ ಮಲ್ಲಪ್ಪ ಮನಗೂಳಿ ಅವರನ್ನು ಪುರಸಭೆಗೆ ಗದ್ದುಗೆ ಏರಿಸಬೇಕು ಎಂಬ ವಿಪರೀತ ಕುಟುಂಬ ವ್ಯಾಮೋಹ ಶಾಸಕ ಮನಗೂಳಿ ಅವರಿಗೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.