ಕೋವಿಡ್ ನಿಗ್ರಹಕ್ಕೆ ಸಹಕರಿಸಿ: ಪಾಟೀಲ
ಮಕ್ಕಳು-ವೃದ್ಧರು ಹೊರಬರಬೇಡಿ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ
Team Udayavani, Jun 27, 2020, 11:45 AM IST
ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿನ ಕಾರಣಕ್ಕೆ 85 ಕಂಟೇನ್ಮೆಂಟ್ ವಲಯಗಳನ್ನು ರೂಪಿಸಿದ್ದು, ಇದೀಗ ಕೇವಲ 40 ಕ್ವಾರಂಟೈನ್ ಸಕ್ರಿಯವಾಗಿವೆ. ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ನಿಗ್ರಹಕ್ಕೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ತಹಶೀಲ್ದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 10 ವರ್ಷದೊಳಗಿನ ಮಕ್ಕಳು ಹಾಗೂ 60ಕ್ಕಿಂತ ಮೇಲ್ಪಟ್ಟ ವೃದ್ಧರು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಮಳೆಗಾಲ ಆರಂಭವಾಗಿರುವ ಕಾರಣ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ವಿಳಂಬ ಮಾಡದೇ ಪ್ರಾಥಮಿಕ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸಮೀಪದ ಆಸ್ಪತ್ರೆ ಸಂಪರ್ಕಿಸಿ, ಸ್ವಯಂ ನಿಗಾದಲ್ಲಿ ಇರಿಬೇಕು. ಹೆಚ್ಚು ಜನಸಂದಣಿ, ಕೊಳಗೇರಿ ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆಯಂಥ ಮುಚ್ಚರಿಕೆ ವಹಿಸಬೇಕು ಎಂದರು.
ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರು ತಕ್ಷಣ ಸ್ಥಳೀಯ ಆಡಳಿತದ ಅಧಿ ಕಾರಿಗಳಿಗೆ ಮಾಹಿತಿ ನೀಡಬೇಕು. ಅಲ್ಲದೇ 14 ದಿನ ಮನೆಯಲ್ಲೇ ಕ್ವಾರಂಟೈನ್ ಆಗಬೇಕು. ಹೊರ ರಾಜ್ಯದಿಂದ ಬಂದು, ಕ್ವಾರಂಟೈನ್ ಆಗದೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದೇ ತಿರುಗುವುದು ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ 1077 ಗೂ ಮಾಹಿತಿ ನೀಡುವಂತೆ ಜಿಲ್ಲಾ ಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈ ವರೆಗೆ 85 ಕಂಟೇನ್ಮೆಂಟ್ ವಲಯ ರೂಪಿಸಿದ್ದರೂ 45 ಕಂಟೇನ್ಮೆಂಟ್ ವಲಯಗಳನ್ನು ಡಿ ನೋಟಿμಕೇಶನ್ ಮಾಡಲಾಗಿದೆ. ಹೀಗಾಗಿ ಚಾಲ್ತಿಯಲ್ಲಿರುವ 40 ಕಂಟೇನ್ಮೆಂಟ್ ಝೋನ್ ಗಳಿವೆ. ವಿಜಯಪುರ ನಗರದಲ್ಲಿ 20, ವಿಜಯಪುರ ಗ್ರಾಮೀಣ ಪ್ರದೇಶದಲ್ಲಿ 2, ಬಬಲೇಶ್ವರ 1, ತಿಕೋಟಾ 1, ನಿಡಗುಂದಿಯಲ್ಲಿ 2, ಇಂಡಿ-7, ಚಡಚಣ 1, ಮುದ್ದೇಬಿಹಾಳ 4, ಸಿಂದಗಿ 2 ಸೇರಿ 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ ಎಂದು ವಿವರಿಸಿದ್ದಾರೆ.
ವಿಜಯಪುರ ನಗರದ ಅಲ್ಲಾಪುರ ಬೇಸ್, ಗ್ಯಾಂಗ್ ಬಾವಡಿ, ತಾಜ್ ಬಾವಡಿ, ರಾಜಾಜಿನಗರ, ಮೆಹಬೂಬ್‌ನಗರ (ಕೆ.ಎಚ್.ಬಿ), ಹರಣಶಿಕಾರ ಗಲ್ಲಿ, ಗೋಳಗುಮ್ಮಟ ಎದುರು, ಆದರ್ಶನಗರ, ಗಿಸಾಡಿ ಓಣಿ(ಇಂಡಿ ರಸ್ತೆ), ಮಿಷನ್ ಕಾಂಪೌಂಡ್, ರೈಲ್ವೆ ನಿಲ್ದಾಣ, ಅಪ್ಸರಾ ಥೇಟರ್, ಸಕಾಫ್ ರೋಜಾ, ಹಬೀಬನಗರ(ಅಥಣಿ ರಸ್ತೆ), ನವಬಾಗ, ನಾಗರಬೌಡಿ, ಜುಮ್ಮಾ ಮಸಿದಿ ಹಿಂಬಾಗ, ಎಸ್.ಪಿ ಕಾಲೋನಿ, ಶಿಕಾರಖಾನೆ, ಅಕ್ಕಿ ಕಾಲೋನಿ ಕಂಟೇನ್ಮೆಂಟ್ ವಲಯದಲ್ಲಿವೆ. ವಿಜಯಪುರ ಗ್ರಾಮಾಂತರದಲ್ಲಿ ಹೆಗಡಿಹಾಳ ತಾಂಡಾ, ಅದರಂತೆ ಬಬಲೇಶ್ವರ ತಾಲೂಕಿನ ತೋನಶಾಳ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ, ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ತಾಂಡಾ, ಇಂಡಿ ತಾಲೂಕಿನ ಅಥರ್ಗಾ, ಮಿರಗಿ, ಸಾಲೋಟಗಿ ರಸ್ತೆ ಇಂಡಿ, ಹಿರೆದೇವಣೂರ, ಕೋರ್ಟ್ ಹತ್ತಿರ ಇಂಡಿ, ಹಿಂಗಣಿ, ಹಿಂಗಣಿ(ತೋಟ), ಚಡಚಣ ತಾಲೂಕಿನ ಹಲಸಂಗಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರ, ಗಣೇಶ ನಗರ, ಮುದ್ದೇಬಿಹಾಳ, ದೋಟೆಗಲ್ಲಿ, ಮುದ್ದೇಬಿಹಾಳ, ಎರಗಲ್, ಸಿಂದಗಿ ತಾಲೂಕಿನ ಆಲಮೇಲ್, ಮತ್ತು ವಾರ್ಡ್ ನಂ-7 ಹಾಗೂ ಸಿಂದಗಿಗಳಲ್ಲಿ ಕಂಟೇನ್ಮೆಂಟ್ ವಲಯ ಎಂದು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಅಲ್ಲದೇ ವಿಜಯಪುರ ನಗರದ 5, ಬಬಲೇಶ್ವರದ 2, ತಿಕೋಟಾದ 3, ಬ.ಬಾಗೇವಾಡಿಯ 6, ನಿಡಗುಂದಿಯ 1, ಇಂಡಿಯ 3, ಚಡಚಣದ 3, ಮುದ್ದೇಬಿಹಾಳದ 3, ತಾಳಿಕೊಟೆಯ 7, ಸಿಂದಗಿಯ 6, ದೇವರ ಹಿಪ್ಪರಗಿಯ 6 ಕಂಟೇಂನ್ಮೆಂಟ್ ವಲಯಗಳು ಸೇರಿ 45 ವಲಯಗಳನ್ನು ಡಿ ನೋಟಿμಕೇಶನ್ ಮಾಡಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.