ಪೆಡಲ್ ಸ್ಯಾನಿಟೈಸರ್ ಯಂತ್ರ ಹಸಾಂತರ
Team Udayavani, May 15, 2020, 6:37 PM IST
ವಿಜಯಪುರ: ಬಿಎಲ್‌ಡಿಇ ಸಂಸ್ಥೆ ತಜ್ಞರು ರೂಪಿಸಿರುವ ಪೆಡಲ್ ಆಧಾರಿತ ಸ್ಯಾನಿಟೈಜರ್ ಸ್ಪ್ರೇಗಳನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು
ವಿಜಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿರುವ ಸ್ವದೇಶಿ, ಸ್ವಾವಲಂಬನೆ ಮಂತ್ರಕ್ಕೆ ಪೂರಕವಾಗಿ ವಿಜಯಪುರ ಜಿಲ್ಲೆಯಲ್ಲಿ ಅದಾಗಲೇ ಪೆಡಲ್ ಆಧಾರಿತ ಸ್ವದೇಶಿ ಸ್ಯಾನಿಟೈಸರ್ ಯಂತ್ರಗಳನ್ನು ಉತ್ಪಾದಿಸಲಾಗಿದೆ.
ನಗರದ ಬಿಎಲ್‌ಡಿಇ ಸಂಸ್ಥೆ ಸಂಗನಬಸವ ಸ್ವಾಮೀಜಿ ಪಾಲಿಟೆಕ್ನಿಕ್, ಪೆಡಲ್ ಆಧಾರಿತ ಸ್ಯಾನಿಟೈಸರ್ ಮೊಬೈಲ್ ಡಿಸ್ಪೆನ್ಸರಿ ಉತ್ಪಾದಿಸಿದ್ದು, ಸಂಸ್ಥೆ ಅಧ್ಯಕ್ಷರಾದ ಮಾಜಿ ಸಚಿವ ಎಂ.ಬಿ.ಪಾಟೀಲ ನಿರ್ದೇಶನದ ಮೇರೆಗೆ ಜಿಲ್ಲಾಧಿ ಕಾರಿ ವೈ. ಎಸ್.ಪಾಟೀಲ ಅವರ ಮೂಲಕ ಜಿಲ್ಲಾಡಳಿತಕ್ಕೆ 5 ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಪಿವಿಸಿ ಪೈಪ್‌ನಲ್ಲಿ ಚೌಕಟ್ಟು ತಯಾರಿಸಿ, ಮೇಲ್ಭಾಗದಲ್ಲಿ ಒಂದು ಲೀಟರ್ ಸ್ಯಾನಿಟೈಸರ್ ದ್ರಾವಣ ಹಿಡಿಯುವ ಸ್ಥಳ ಮಾಡಿದ್ದಾರೆ. ಕಾಲಿನಿಂದ ಒತ್ತಿದರೆ ಸ್ಯಾನಿಟೈಸರ್ ಹೊರಬರುವಂತೆ ರೂಪಿಸಿದ್ದು, ಸುಲಭವಾಗಿ ಬಳಸಲು ಸಾಧ್ಯವಿದೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ, ವಿನೂತನ ಉತ್ಪನ್ನ ತಯಾರಿಸಿರುವ ಬಿಎಲ್ ಡಿಇ ಪಾಲಿಟೆಕ್ನಿಕ್ ಕಾರ್ಯಕ್ಕೆ ಶ್ಲಾಘಿಸಿರುವ ಜಿಲ್ಲಾಧಿಕಾರಿ ವೈ.ಎಸ್ .ಪಾಟೀಲ, ನಮ್ಮ ಕಚೇರಿಗೆ ಬರುವ ಎಲ್ಲರೂ ಕಡ್ಡಾಯವಾಗಿ ಪೆಡಲ್ ಸ್ಯಾನಿಟೈಸರ್ ಡಿಸ್ಪೆನ್ಸರಿ ಬಳಸುವ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೂ ಮೊದಲು ಜಿಲ್ಲೆಗೆ ಗುರುವಾರ ರೈಲು ಮೂಲಕ ಬರುವ ಕಾರ್ಮಿಕರನ್ನು ಸ್ವಾಗತಿಸುವ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಇದನ್ನು ಬಳಸಲಾಗುತ್ತದೆ ಎಂದರು.
ಬಿಎಲ್‌ಡಿಇ ಆಡಳಿತಾ ಧಿಕಾರಿ ಡಾ| ರಾಘವೇಂದ್ರ ಕುಲಕರ್ಣಿ, ಡಾ| ಮಹಾಂತೇಶ ಬಿರಾದಾರ, ಡಾ| ಆರ್. ಬಿ.ಕೊಟ್ನಾಳ, ಪ್ರಾಚಾರ್ಯ ಎಸ್. ಜೆ.ಗೌಡರ, ಮೆಕ್ಯಾನಿಕಲ್ ವಿಭಾಗದ ಎ.ಎ. ಬಿರಾದಾರ, ಪಿ.ಬಿ.ಕಳಸಗೊಂಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.