Vijayapura; ದಯಾ ಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸರು
Team Udayavani, Mar 1, 2024, 11:46 AM IST
ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ವರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಿಯಮಾನುಸಾರ ವರ್ಗಾವಣೆ ಮಾಡುತ್ತಿಲ್ಲವೆಂದು ಆರೋಪಿಸಿ ವಿಜಯಪುರ ಜಿಲ್ಲೆಯ ಪೊಲೀಸರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಪೊಲೀಸರು ದಯಾಮರಣ ಕೋರಿ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಇರುವ ಪತ್ರ ಬರೆಯಲು ಪ್ರಮುಖ ಕಾರಣ ವರ್ಗಾವಣೆಯ ಸಮಸ್ಯೆ.
ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು, ಇಲಾಖೆಯಲ್ಲಿ ಸಾಮಾನ್ಯ ವರ್ಗದವರಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ಮಾಡಿಲ್ಲ ಎಂದು ದೂರಿದ್ದಾರೆ.
ಮಾನವ ಸಂಪನ್ಮೂಲ ವಿಭಾಗದ ಡಿಜಿ ಪೊಲೀಸರ ವರ್ಗಾವಣೆ ವಿಷಯವಾಗಿ HRM-3 (1)270/2022-23 ಹಾಗೂ HD/93/PPS/2022 ರಂತೆ ಆದೇಶ ನೀಡಿದ್ದಾರೆ. ಪಾರ್ದರ್ಶಕ ವರ್ಗಾವಣೆಗಾಗಿ ಪೋರ್ಟಲ್ ಪ್ರಕಾರ ಅರ್ಹ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡುವಂತೆ ತಿಳಿಸಿದ್ದಾರೆ.
ಇದರನ್ವಯ ವಿಜಯಪುರ ಜಿಲ್ಲೆಯ ವರ್ಗಾವಣೆ ಅರ್ಹತೆ ಇರುವ ನಾವು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, ವರ್ಷವಾದರೂ ವರ್ಗಾವಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ಕೋರಿರುವ ಬಹುತೇಕ ಪೊಲೀಸರು ಅನಾರೋಗ್ಯ ಪೀಡಿತ, ವಿಕಲಾಂಗ ಪೋಷಕರಿದ್ದಾರೆ. ಬಹುತೇಕ ಪೊಲೀಸರ ಪ್ರಕರಣದಲ್ಲಿ ಕುಟುಂಬದ ಒಬ್ಬನೇ ಮಗ ಇದ್ದೇವೆ. ಪರಿಸ್ಥಿತಿ ಮನವರಿಕೆ ಮಾಡಿದರೂ ವರ್ಗಾವಣೆ ಮಾಡಿಲ್ಲ ಎಂದು ದೂರಿದ್ದಾರೆ.
ಗೃಹ ಸಚಿವರು ಪತಿ-ಪತ್ನಿ, ನಿವೃತ್ತ ಯೋಧರ ವರ್ಗಾವಣೆಗೆ ಆದೇಶ ಮಾಡಿದ್ದಾರೆ. ಇದೇ ರೀತಿ ಸಾಮಾನ್ಯ ವರ್ಗದ ಪೊಲೀಸರಿಗೂ ವರ್ಗಾವಣೆ ಆದೇಶ ನೀಡಬೇಕು. ಇಲ್ಲವೇ ನಮ್ಮ ಪೋಷಕರಿಗೆ ನಮಗೆ ದಯಾಮರಣ ನೀಡಬೇಕೆಂದು ನೊಂದ ಪೊಲೀಸರು ರಾಷ್ಟ್ರಪತಿ, ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.