ಶಿವಾಜಿಯಂತೆ ಆಳಿದರೆ ಭಾರತ ವಿಶ್ವ ಗುರು

ಸೀಮಾತೀತ ವಿಶ್ವ ಮಾನ್ಯ ನಾಯಕಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಶಿವಾಜಿಯೇ ಪ್ರೇರಣೆ

Team Udayavani, Feb 20, 2020, 11:59 AM IST

20-February-06

ವಿಜಯಪುರ: ಛತ್ರಪತಿ ಶಿವಾಜಿ ಅವರು ಸೀಮಾತೀತ ಹಾಗೂ ವಿಶ್ವಕ್ಕೆ ಮಾದರಿಯಾದ ಶ್ರೇಷ್ಠ ಮಹಾವೀರ. ಅಫ್ಜಲ್‌ ಖಾನ್‌ ಜೊತೆ ನಡೆದ ಯುದ್ಧದಲ್ಲಿ ಗುಂಡು ನಿರೋಧಕ ಜಾಕೆಟ್‌ ಧರಿಸಿ ಶಕ್ತಿ ಮತ್ತು ಯುಕ್ತಿಗೆ ಹೆಸರಾಗಿದ್ದರು. 17ನೇ ಶತಮಾನದಲ್ಲೇ ನೌಕಾಪಡೆ ವ್ಯವಸ್ಥೆ ರೂಪಿಸಿ ಭಾರತದ ನೌಕಾಪಡೆಯ ಪಿತಾಮಹರಾಗಿದ್ದಾರೆ. ಗೆರಿಲ್ಲಾ ಯುದ್ಧ ನೀತಿ ಪರಿಚಯಿಸಿದ್ದು, ಇಂದಿಗೂ ಪ್ರಸ್ತುತವಾಗಿವೆ. ಏಕ್‌ ಮಾರಾಠಾ, ಲಾಕ್‌ ಮಾರಾಠಾ ಎಂಬ ಹಿರಿಮೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು.

ಬುಧವಾರ ನಗರದ ಕಂದಗಲ್ಲ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಾಜಿ ಮಹಾರಾಜ ವಿಭಿನ್ನ ಮತ್ತು ವಿಶೇಷ ಸಾಮರ್ಥ್ಯ ಹೊಂದಿದ್ದ ಅಪ್ರತಿಮ ಧೈರ್ಯ, ಶೌರ್ಯ, ಸಾಹಸ ಪರಾಕ್ರಮಿ ವೀರನಾಗಿದ್ದ. ರಾಣಾ ಪ್ರತಾಪರ ರೌದ್ರತೆ ಜೊತೆಗೆ ಚಾಣಕ್ಯನ ನೀತಿಯನ್ನೂ ಹೊಂದಿದ್ದರು ಎಂದರು.

ಮಹಾರಾಜರ ಸಂಪೂರ್ಣ ಜೀವನ ಚರಿತ್ರೆ, ಶೌರ್ಯ, ಪಾಂಡಿತ್ಯ, ವಿಚಾರಗಳನ್ನು ಅರಿತುಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಇಂದಿನ ಯುವಜನತೆ ರೂಪಿಸಿಕೊಳ್ಳಬೇಕು. ಯುದ್ಧ ಸಂದರ್ಭದಲ್ಲಿ ಮಹಿಳೆ, ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದ ಅವರ ನಡೆಯೇ ಇಂದಿನ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಪ್ರೇರಣೆ ಎನಿಸಿದೆ. ಬಾಲಕ ಶಿವಾಜಿಗೆ ಜೀಜಾಮಾತೆ ರಾಮಾಯಣ, ಮಹಾಭಾರತ ಕಥೆಗಳನ್ನು ಹಾಗೂ ಭಗವದ್ಗೀತೆ ಬೋಧಿಸಿದ್ದು, ಈ ಬೋಧನೆ ಬಾಲ ಶಿವಾಜಿ ಮನಸ್ಸಿನಲ್ಲಿ ಗಂಭೀರ ಪರಿಣಾಮ ಮೂಡಿಸಿದ್ದೇ ಶಿವಾಜಿ ಎಂಬ ವ್ಯಕ್ತಿ ಛತ್ರಪತಿ ಮಹಾರಾಜನಾಗಲು ಸಾಧ್ಯವಾಯಿತು. ಪ್ರಸ್ತುತ ದಿನದಲ್ಲಿ ದೇಶದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಮಹಾಕಾವ್ಯಗಳ ಸಾರವನ್ನು ಪ್ರತಿಯೊಬ್ಬ ತಾಯಿ ತಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಎಸ್ಪಿ ಅನುಪಮ್‌ ಅಗರವಾಲ್‌ ಮಾತನಾಡಿ, ಹಿಂದೂ ರಾಷ್ಟ್ರಕ್ಕೆ ಶಿವಾಜಿ ಅವರ ಕೊಡುಗೆ ಅನುಪಮ. ಶಿವಾಜಿಯಂಥ ಅಪ್ರತಿಯ ವೀರ, ಶೂರ ರಾಜರು ತಮ್ಮ ಆಡಳಿತದಲ್ಲಿ ಜಾತಿ, ಮತ, ಧರ್ಮ ಎಂಬ ಬೇಧ ಭಾವ ಮಾಡದೆ ಅರ್ಹತೆಗೆ ತಕ್ಕಂತೆ ಎಲ್ಲರಿಗೂ ಹುದ್ದೆ ನೀಡಿದ್ದರು. ರೈತರಿಗಾಗಿ ಹಲವಾರು ರೀತಿಯ ಕಂದಾಯ ಸುಧಾರಣೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನಡೆಸಿದರು.

ಹೀಗೆ ಅವರು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಯುವಕರು ಅವರ ತತ್ವಾದರ್ಶ ಅರಿತುಕೊಂಡು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಮಂಜುನಾಥ ಜುನಗೊಂಡ ಮಾಯನಾಡಿ, ಭಾರತೀಯರ ಪಾಲಿಗೆ ಶಿವಾಜಿ ಹೃದಯ ಸಾಮ್ರಾಟನಾಗಿದ್ದರೂ ಇಸ್ಲಾಂ ಮತವನ್ನು ದ್ವೇಷಿಸಲಿಲ್ಲ. ಹೋರಾಟದ ಹಾದಿಯಲ್ಲಿ ಸಿಕ್ಕ ಕುರಾನ್‌ ಧರ್ಮ ಗ್ರಂಥಕ್ಕೆ ಗೌರವ ಸಲ್ಲಿಸಿದ್ದಲ್ಲದೇ ಹಾಗೂ ಇಸ್ಲಾಂ ಮಹಿಳೆಯರಿಗೆ ಗೌರವ ತೋರಿದ್ದಾರೆ. ಮತೀಯ ಸಹಿಷ್ಣುಗಳಾಗಿದ್ದ ಶಿವಾಜಿ ಮಹಾರಾಜರು ಇಂದಿನ ಆಡಳಿತಗಾರರಿಗೆ ಪ್ರೇರಣೆಯಾಗಲಿ ಎಂದರು.

ಬಡವರ, ರೈತರ, ಸ್ತ್ರೀ ಮತ್ತು ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಿದ್ದರು. ಸಾಮ್ರಾಜ್ಯದ ವಿಸ್ತಾರದ ನೀತಿ ಹೊಂದಿರದೆ ಅತ್ಯುತ್ತಮ ಆಡಳಿತ ನಡೆಸಿದ್ದ ಶಿವಾಜಿ ಮಹಾರಾಜರ ಆದರ್ಶ ಪ್ರತಿಯೊಬ್ಬರಿಗೆ ಮಾದರಿಯಾಗಿ ಅಳವಡಿಸಿಕೊಂಡರೆ ಭಾರತ ವಿಶ್ವಗುರು ಆಗುವ ಕನಸು ನನಸಾಗುತ್ತದೆ ಎಂದರು.

ರಂಗಕರ್ಮಿ ಡಿ.ಎಚ್‌. ಕೋಲಾರ, ಮುತ್ತುರಾಜ, ಹನುಮಂತ ಕುಲಕರ್ಣಿ, ಮಂಜುಳಾ ಹಿಪ್ಪರಗಿ ಸಂಗಡಿಗರು ಮಾತೃ ವಾತ್ಸಲ್ಯದ ಪ್ರತೀಕ ನಾಟಕ ಪ್ರಸ್ತುತ ಪಡಿಸಿದರು. ರಾಮನಗೌಡ ಪಾಟೀಲ ಯತ್ನಾಳ, ವಿಜಯಕುಮಾರ ಚವ್ಹಾಣ, ಅರುಣ ಕದಂ, ರಾಜು ಜಾಧವ, ಪರಶುರಾಮ ರಜಪೂತ, ಶಂಕರ ಕನ್ಸೆ, ಶಿವಾಜಿ ಗಾಯಕವಾಡ, ಆನಂದ ಮಾಳೆ, ಜ್ಯೋತಿಬಾ ಸಿಂಧೆ ಇದ್ದರು.

ನಿರ್ಮಲಾ ಥೀಟೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್‌.ಎ. ಮಮದಾಪುರ ನಿರೂಪಿಸಿದರು.

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.